"ವಂಶೀ ಸಂದೇಶ" ಎಂಬ ರಸಾನುಭೂತಿ - ಶತಾವಧಾನಿ ಡಾ. ಆರ್ ಗಣೇಶರ ಕಾವ್ಯಾನುಸಂಧಾನ(ಯಥಾಮತಿ)
ವಾಲ್ಮೀಕಿಯ ಶೋಕ ರಾಮಾಯಣ ಮಹಾಕಾವ್ಯಕ್ಕೆ ಕಾರಣವಾಯಿತು. ಆ ಶೋಕಭಾವ ವಿಶುದ್ದ ಕರುಣರಸಕ್ಕೇರಿ ಅತ್ಯಪೂರ್ವ ಆದಿಕಾವ್ಯವನ್ನು ಸೃಜಿಸುವಲ್ಲಿ ಆದಿಕವಿಯ ಕಲಾಶ್ರೀಮಂತಿಕೆ, ಅಭಿಜ್ಞತೆ ಕಾರಣವೆಂದು ಅರಿವಾಗುತ್ತದೆ. ಸತ್ಕವಿಯಲ್ಲಿ ಮೂಡಿದ ಯಾವುದೇ ಭಾವ ವ್ಯರ್ಥವಾಗದು; ಅವು ರಸದ ತುದಿಗೆ ತಲುಪಿ ಅಲ್ಲಿಂದ ಮತ್ತೊಂದು ಕಲಾಸೃಷ್ಟಿಯಾಗುತ್ತದೆ. ಅದೇ ರೀತಿಯ ಮನೋಹರ, ರಸಾರ್ದ್ರ ಕಾವ್ಯಸೃಷ್ಟಿ ಡಾ| ಶತಾವಧಾನಿ ಆರ್. ಗಣೇಶ ಅವರ "ವಂಶೀ ಸಂದೇಶ" ಎಂಬ ಹಳಗನ್ನಡ ಕಾವ್ಯಗುಚ್ಛದಲ್ಲಿದೆ. ಗಣೇಶರ ಮೂವತ್ತರ ಹರೆಯದಲ್ಲಿ ಅವರಲ್ಲಿ…