“ಮುದುಕನೊಬ್ಬ ಬಾವಿಯಲ್ಲಿ ಇಣಿಕಿದಾಗ ಅವನಿಗೆ ಚಂದ್ರ ಕಾಣಿಸಿದ. ‘ಅಯ್ಯೋ, ಚಂದ್ರ ಬಾವಿಯಲ್ಲಿ ಬಿದ್ದಿದ್ದಾನೆ, ಮೇಲಕ್ಕೆತ್ತಬೇಕು.’ ಅಂದುಕೊಂಡ. ಬಿಂದಿಗೆ ಕಟ್ಟಿ ನೀರನ್ನು ಸೇದಿದ. ಆಯ ತಪ್ಪಿ ಹಿಂದಕ್ಕೆ ಬಿದ್ದ. ಚಂದ್ರ ಆಕಾಶದಲ್ಲಿ ಕಾಣಿಸಿದ. ಅರೆ ! ಚಂದ್ರ ನೀರಿನಿಂದ ಮೇಲೆ ಬಂದು ಆಕಾಶಕ್ಕೆ ಹೊರಟು ಹೋಗಿದ್ದಾನೆ ಅಂದುಕೊಂಡ. ಹೀಗೆ ಮುದುಕ ಚಂದ್ರನನ್ನು ಉಳಿಸಿದ.”
***
ಗಾಡಿಯ ಚಕ್ರದ ಮೇಲೆ ಕೂತಿದ್ದ ಸೊಳ್ಳೆ ಹೇಳಿತು ‘ಎಷ್ಟೊಂದು ಧೂಳು ಎಬ್ಬಿಸ್ತಾ ಇದ್ದೀನಿ ನಾನು' ಅಂತ.
ಸ್ವಲ್ಪ ಹೊತ್ತಾದ ಮೇಲೆ ಅದೇ ಸೊಳ್ಳೆ ಓಡುತ್ತಿದ್ದ ಕುದುರೆಯ ಮೇಲೆ ಕುಳಿತು ಹೇಳಿತು ‘ನಾನು ಎಷ್ಟು ವೇಗವಾಗಿ…