ಪುಸ್ತಕ ಸಂಪದ

  • ದೇಶದ ಆರ್ಥಿಕತೆ, ಬಡತನ - ಶ್ರೀಮಂತಿಕೆ, ಜನಸಾಮಾನ್ಯರ ಬದುಕಿನ ಮೇಲೆ ಸರಕಾರದ ನೀತಿಗಳ ಪರಿಣಾಮಗಳು - ಇಂತಹ ವಿಷಯಗಳ ಬಗ್ಗೆ ಕನ್ನಡದಲ್ಲಿ ಪುಸ್ತಕಗಳು ವಿರಳ. ಅದರಲ್ಲೂ ಇಂತಹ ವಿಷಯಗಳ ಬಗ್ಗೆ ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ, ಪಾರಿಭಾಷಿಕ ಪದಗಳ ಉಸಿರುಗಟ್ಟಿಸುವ ಗೊಂದಲವಿಲ್ಲದ ಪುಸ್ತಕಗಳು ವಿರಳಾತಿ ವಿರಳ. ಆದ್ದರಿಂದಲೇ ಎಂ. ಎಸ್. ಶ್ರೀರಾಮರ “ಶನಿವಾರ ಸಂತೆ" ಪುಸ್ತಕ ಮುಖ್ಯವಾಗುತ್ತದೆ. ಅಂದ ಹಾಗೆ ಇದು ಅವರು “ಉದಯವಾಣಿ"ಯಲ್ಲಿ ಬರೆಯುತ್ತಿದ್ದ ಅಂಕಣ ಬರಹಗಳ ಸಂಕಲನ.

    “ಒಳಿತು, ಲಾಭ, ವ್ಯಾಪಾರ” ಎಂಬ ಮೊದಲ ಭಾಗದಲ್ಲಿವೆ ಆರು ಲೇಖನಗಳು. “ಆತ್ಮಹತ್ಯೆಗಳು: ರೈತರೇ ಏಕೆ?” ಎಂಬ ಪ್ರಬಂಧ ಈ ಜ್ವಲಂತ ಸಮಸ್ಯೆಯ ಬಗ್ಗೆ ಹಲವು ಒಳನೋಟಗಳನ್ನು ನೀಡುತ್ತದೆ. ವ್ಯಾಪಾರವನ್ನೂ ಕೃಷಿಯನ್ನೂ ಹೋಲಿಸುತ್ತಾ ಪ್ರಬಂಧವನ್ನು ಶುರು ಮಾಡುತ್ತಾರೆ…

  • ಖ್ಯಾತ ಪತ್ರಕರ್ತ ವೈಯೆನ್ಕೆ ಅವರ ‘ವಂಡರ್ ಕಣ್ಣು' ಬಹಳ ಜನಪ್ರಿಯ ಅಂಕಣವಾಗಿತ್ತು. ‘ಕೊನೆ ಸಿಡಿ' ಯೊಂದಿಗೆ ಅದು ಕೊನೆಗೊಳ್ಳುತ್ತಿತ್ತು. ಬಹುತೇಕ ಓದುಗರು ‘ಕೊನೆ ಸಿಡಿ' ಯಿಂದಲೇ ಆ ಅಂಕಣವನ್ನು ಆರಂಭ ಮಾಡುತ್ತಿದ್ದರು. ಅದು ‘ಕೊನೆ ಸಿಡಿ' ಯ ಆಕರ್ಷಣೆ. ಪನ್, ಸಿದ್ಧ ಚಾಟೂಕ್ತಿ ಹಾಗೂ ಥಟ್ ಉತ್ತರಕ್ಕೆ ಸಿದ್ಧಹಸ್ತರಾಗಿದ್ದ ವೈಯೆನ್ಕೆ ಜತೆಯಲ್ಲಿ ಮಾತಾಡುತ್ತಿದ್ದರೆ ‘ಕೊನೆ ಸಿಡಿ'ಗಳು ಒಂದೇ ಸಮನೆ ಸಿಡಿಯುತ್ತಿದ್ದವು. ಹತ್ತಾರು ವರ್ಷ ಅವರು ಬರೆದ ‘ಕೊನೆ ಸಿಡಿ' ಗಳನ್ನು ಸಂಗ್ರಹಿಸಿ, ಆ ಪೈಕಿ ಕೆಲವನ್ನು ಮಾತ್ರ ಆಯ್ದು ಒಟ್ಟಿಗೆ ಓದುವಂತಾದರೆ ಹೇಗಿದ್ದೀತು?

    ಆ ಸಿಡಿತಕ್ಕೆ ನೀವು ಒಳಗಾದರೆ ನಾನು ಜವಾಬ್ದಾರನಲ್ಲ ಎನ್ನುತ್ತಾರೆ ಸಂಪಾದಕರಾದ ವಿಶ್ವೇಶ್ವರ ಭಟ್. ಅವರು ಈ…

  • ಪತ್ರಕರ್ತ ಪದ್ಮರಾಜ ದಂಡಾವತಿ ಅವರು ಹೊಸದಾಗಿ ಪತ್ರಿಕೋದ್ಯಮಕ್ಕೆ ಬರುವವರಿಗೆ ಸಹಾಯವಾಗಲೆಂದು ತಮ್ಮ ಅನುಭವದ ಸಾರವನ್ನು ಪುಸ್ತಕದ ರೂಪದಲ್ಲಿ ಹೊರತಂದಿದ್ದಾರೆ. ಲೇಖಕ ಜೆಸುನಾ ಅವರು ಈ ಪುಸ್ತಕದ ಬೆನ್ನುಡಿಯಲ್ಲಿ “ಒಂದು ಕಾಲವಿತ್ತು. ಪತ್ರಿಕಾ ಕ್ಷೇತ್ರಕ್ಕೆ ಪ್ರವೇಶಿಸಿದವರಿಗೆ ಪೂರ್ವ ಸಿದ್ಧತೆಯೇನೂ ಇರುತ್ತಿರಲಿಲ್ಲ. ಅವರಿಗೆ ಇರುತ್ತಿದ್ದುದು ವ್ಯಾಪಕ ಓದಿನ ಹಿನ್ನಲೆ. ಈಗ ಹಾಗಿಲ್ಲ. ಗಿಣಿ ಪಾಠದ ಒಂದು ಪದವಿ ಇರುತ್ತದೆ. ಇದರಲ್ಲಿ ಬಹುತೇಕ ಮಂದಿಗೆ ಓದಿನ ಹಿನ್ನಲೆಯೇ ಇರುವುದಿಲ್ಲ. ಇಂಥವರು ಪತ್ರಿಕೋದ್ಯಮದಲ್ಲಿ ಏನನ್ನು ಸಾಧಿಸಲು ಸಾಧ್ಯ ?

    ಇಂಥವರಿಗೆಂದೇ ಗೆಳೆಯ ಪದ್ಮರಾಜ ದಂಡಾವತಿಯವರ ರಿಪೋರ್ಟಿಂಗ್ ಹಾಗೂ ‘ಪತ್ರಿಕಾ ಭಾಷೆ' ಪುಸ್ತಕಗಳಿವೆ. ಈ ಎರಡೂ ಪುಸ್ತಕಗಳು…

  • ‘ಬಣ್ಣದ ಕಾಲು' ಖ್ಯಾತ ಕತೆಗಾರ ಜಯಂತ ಕಾಯ್ಕಿಣಿ ಇವರ ಕಥಾ ಸಂಕಲನ. ‘ಅಪಾರ' ಅವರ ಮುಖಪುಟ ವಿನ್ಯಾಸ ಹಾಗೂ ರಾವ್ ಬೈಲ್ ಅವರ ಒಳ ಪುಟಗಳ ರೇಖಾಚಿತ್ರಗಳು ಗಮನ ಸೆಳೆಯುತ್ತವೆ. ಜಯಂತ ಇವರು ತಮ್ಮ ಕಥೆಗಳನ್ನು ಎರಡು ಭಾಗಗಳಲ್ಲಿ ವಿಂಗಡಿಸಿದ್ದಾರೆ. ಒಟ್ಟು ೧೩ ಸಣ್ಣ ಕಥೆಗಳನ್ನು ಹೊಂದಿರುವ ಪುಸ್ತಕದ ಎಲ್ಲಾ ಕಥೆಗಳು ಒಮ್ಮೆ ಓದಿದ ಬಳಿಕ ಇನ್ನೊಮ್ಮೆ ಓದುವಷ್ಟು ಸೊಗಸಾಗಿವೆ. 

    ಪುಸ್ತಕದ ತಮ್ಮ ಮಾತಾದ 'ಅರಿಕೆ' ಯಲ್ಲಿ ಜಯಂತ ಕಾಯ್ಕಿಣಿ ಅವರು ಹೀಗೆ ಬರೆದಿದ್ದಾರೆ “ಪಂಚತಂತ್ರದಲ್ಲಿ ಬರುವ ಮಾಂತ್ರಿಕನೊಬ್ಬ ಹುಲಿಯ ದೇಹದ ಅವಶೇಷಗಳ ಎದುರು ಕೂತು ಅದಕ್ಕೆ ಜೀವ ಬರಿಸುವ ಸಂಜೀವಿನಿ ವಿದ್ಯೆ ನಡೆಸುತ್ತಾನೆ. ಜೀವ ತಳೆದದ್ದೇ ತಡ ಆ ಹುಲಿ ಮೊದಲು ಆತನನ್ನೇ ನುಂಗಿ ಬಿಡುತ್ತದೆ. ಕತೆಗಾರನದೂ…

  • ನಿವೃತ್ತಿಯ ಅಂಚಿನಲ್ಲಿರುವವರಿಗೊಂದು ಉತ್ತಮ ಕೈಪಿಡಿ ಇದು. 1995ರಿಂದೀಚೆಗೆ ಬೆಂಗಳೂರಿನ ಬಿಇಎಲ್ ಕಾರ್ಖಾನೆಯಿಂದ ನಿವೃತ್ತರಾಗಲಿರುವ ಉದ್ಯೋಗಿಗಳಿಗೆ ನಿವೃತ್ತ ಜೀವನಕ್ಕಾಗಿ ತಯಾರಾಗುವುದು ಹೇಗೆ? ಎಂಬ ಬಗ್ಗೆ ಕನ್ನಡದಲ್ಲಿ ಉಪನ್ಯಾಸ ನೀಡಿದ ಆನಂದ ರಾಮರಾಯರು ಇದರ ಲೇಖಕರು. ಅನಂತರ, ತನ್ನ ಉಪನ್ಯಾಸಗಳನ್ನೇ ಲೇಖನವಾಗಿಸಿ ಪತ್ರಿಕೆಗಳಲ್ಲಿ ಪ್ರಕಟಿಸಿದರು. “ಉದಯವಾಣಿ”ಯ ಹಿರಿಯರ ಪುಟದಲ್ಲಿ, ಇದೇ ಶೀರ್ಷಿಕೆಯಲ್ಲಿ 52 ಕಂತುಗಳ ಅಂಕಣವನ್ನೂ ಬರೆದರು. ತದನಂತರ, ಅವನ್ನೇ ಪುಸ್ತಕವಾಗಿಸಿ ಪ್ರಕಟಿಸಿದ್ದಾರೆ.

    ನಿವೃತ್ತಿಯ ನಂತರದ ಸಮಸ್ಯೆಗಳನ್ನು ಈ ಮೂರು ಭಾಗಗಳಾಗಿ ವಿಂಗಡಿಸುತ್ತಾರೆ ಲೇಖಕರು: (ಅ) ಮಾನಸಿಕ (ಆ) ದೈಹಿಕ (ಇ) ಆರ್ಥಿಕ. ಪ್ರತಿಯೊಂದು ವಿಭಾಗದ ಸಮಸ್ಯೆಗಳನ್ನು ಚುಟುಕಾಗಿ ವಿವರಿಸಿ, ಅವನ್ನು ಎದುರಿಸುವುದು ಹೇಗೆಂದು…

  • ಪತ್ತೇದಾರಿ ಸಾಹಿತ್ಯದಲ್ಲಿ ಖ್ಯಾತ ಹೆಸರು ಸರ್ ಆರ್ಥರ್ ಕನಾನ್ ಡಾಯ್ಲ್. ಇವರು ಮೂಲತಃ ಓರ್ವ ವೈದ್ಯ, ಆಂಗ್ಲ ಭಾಷೆಯಲ್ಲಿ ಇವರು ರಚಿಸಿದ ಪತ್ತೇದಾರಿ ಕಾದಂಬರಿಗಳ ಕಥಾ ನಾಯಕ ಶೆರ್ಲಾಕ್ ಹೋಮ್ಸ್. ಈ ಪಾತ್ರವು ಎಷ್ಟು ಖ್ಯಾತಿ ಪಡೆಯಿತೆಂದರೆ ಆ ಕಾಲ್ಪನಿಕ ಪಾತ್ರವನ್ನು ಎಲ್ಲರೂ ನಿಜವಾದ ವ್ಯಕ್ತಿ ಎಂದೇ ನಂಬಿದ್ದರು. ಈ ಬಗ್ಗೆ ಈ ಪುಸ್ತಕದ ಬೆನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ “ ಆರ್ಥರ್ ಕಾನನ್ ಡಾಯ್ಲ್ ಸೃಷ್ಟಿಸಿದ ಪಾತ್ರ ‘ಶೆರ್ಲಾಕ್ ಹೋಮ್ಸ್' ಒಬ್ಬ ನಿಜವಾದ ವ್ಯಕ್ತಿ ಎಂದೇ ನಂಬಿದ ಓದುಗರಿದ್ದರು! ಹೋಮ್ಸ್  ನ ಸಾಹಸಗಳ ಬಗ್ಗೆ ಬರೆದು ಬರೆದು ಬೇಸತ್ತ ಡಾಯ್ಲ್, ಕಡೆಗೊಂದು ಕಾದಂಬರಿಯಲ್ಲಿ ಅವನನ್ನು ಪ್ರಪಾತದಿಂದ ನೂಕಿ ಸಾಯಿಸಿಬಿಟ್ಟಿದ್ದ. ಆದರೆ ಧೃತಿಗೆಟ್ಟ ಓದುಗರ ಸಂಕಟ ನೋಡಲಾರದೆ ‘ಹೋಮ್ಸ್ ಸತ್ತಿಲ್ಲ.…

  • ಆಯುರ್ವೇದ ರತ್ನ ಡಾ. ಗುರುಶಾಂತ ಲಿಂಬಿತೋಟ ಇವರು ಸುಮಾರು ೪೦ ಬಗೆಯ ಹಣ್ಣು ಹಾಗೂ ತರಕಾರಿಗಳ ಔಷಧೀಯ ಗುಣಗಳನ್ನು ಸವಿವರವಾಗಿ ನೀಡಿದ್ದಾರೆ. ನಮ್ಮದೇ ತೋಟದ ಹಣ್ಣುಗಳು ಅಥವಾ ತರಕಾರಿಗಳು ನಮಗೆಷ್ಟು ಪ್ರಯೋಜನಕಾರಿ ಎಂಬುದಾಗಿ ವಿವರಿಸಿದ್ದಾರೆ. ಡಾ. ಸುನೀತಾ ಲಿಂಬಿತೋಟ ಇವರು ಪುಸ್ತಕದ ಪ್ರಾರಂಭದಲ್ಲಿ ಹಲವು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಅವುಗಳೆಂದರೆ…

    * ಹಸಿರು ತರಕಾರಿ ಸೇವನೆ ಆರೋಗ್ಯದ ಹಿತದೃಷ್ಟಿಯಿಂದ ಅತ್ಯವಶ್ಯಕವಾಗಿದೆ. ಆದರೆ ಹಣ್ಣು-ತರಕಾರಿಗಳನ್ನು ಚೆನ್ನಾಗಿ ತೊಳೆಯದೆ ಉಪಯೋಗಿಸಿದರೆ ‘ನರ ವ್ಯವಸ್ಥೆ’ಯ ಮೇಲೆ ಸೋಂಕು ಬರುವ ಸಂಭವವಿರುತ್ತದೆ. ಈ ರೋಗ ಹಂದಿಗಳಲ್ಲಿರುವ ‘ಟೆನಿಮಾಸೋಲಿಯಮ್' ಕ್ರಿಮಿಗಳಿಂದ ಬರುತ್ತದೆ.

  • ನೊಬೆಲ್ ಪ್ರಶಸ್ತಿ ಪುರಸ್ಕೃತ ಮಾರ್ಕ್ವೆಜ್‌ನ ಕಾದಂಬರಿಗಳಲ್ಲೊಂದಾದ ಇದನ್ನು ಕನ್ನಡಕ್ಕೆ ತಂದವರು ಹೆಸರಾಂತ ಸಾಹಿತಿ ಶ್ರೀನಿವಾಸ ವೈದ್ಯ. ಅವರು “ಓದುಗರೊಡನೆ" ಹಂಚಿಕೊಂಡ ಕೆಲವು ಮಾತುಗಳು: “ಇದು ನಾನು ತುಂಬ ಮೆಚ್ಚಿದ ಕೃತಿ. ಈ ಕೃತಿಯನ್ನು ಕನ್ನಡಿಗರಿಗೆ ತಲುಪಿಸಬೇಕೆನ್ನುವ ಹುಮ್ಮಸ್ಸಿಗೆ ಬಿದ್ದು ಇದನ್ನು ಅನುವಾದಿಸುವ ಹುಚ್ಚು ಸಾಹಸಕ್ಕೆ ಕೈಹಾಕಿದ್ದೇನೆ. ಇಂತಹ ಸಾಹಸಕ್ಕೆ ತೊಡಗುವ ಮುನ್ನ ಎಷ್ಟೊಂದು ಕಠಿಣ ಸವಾಲುಗಳನ್ನು ಎದುರಿಸಬೇಕಾದೀತೆಂಬ ಕಿಂಚಿತ್ ಕಲ್ಪನೆಯೂ ನನಗಿರಲಿಲ್ಲ…. ಮೂಲ ಸ್ಪ್ಯಾನಿಶ್ ಭಾಷೆಯಲ್ಲಿದ್ದ ಈ ಕಾದಂಬರಿಯನ್ನು ಜೆ. ಎನ್. ಬರ್ನ್‌ಸ್ಟಿನ್ ಎಂಬವರು ಇಂಗ್ಲಿಷಿಗೆ ಭಾಷಾಂತರಿಸಿದ್ದಾರೆ. ನಾನು ಕನ್ನಡೀಕರಿಸಲು ಅವಲಂಬಿಸಿದ್ದು ಈ ಇಂಗ್ಲಿಷ್ ಅನುವಾದವನ್ನು. …. ಸ್ಪ್ಯಾನಿಶ್ ಜನರ ಜೀವನ ಕ್ರಮ, ನಡೆ-ನುಡಿ, ನಂಬುಗೆ…

  • ೧೯೭೩ರಲ್ಲಿ ಮೊದಲ ಮುದ್ರಣ ಕಂಡ ಡಿ.ವಿ.ಜಿ.ಯವರ ಕೃತಿ ‘ದೇವರು- ಒಂದು ವಿಚಾರ ಲಹರಿ'. ಅಂದಿನಿಂದ ಇಂದಿನವರೆಗೆ ಸುಮಾರು ೧೩ ಮುದ್ರಣಗಳನ್ನು ಕಂಡ ಅಪರೂಪದ ಮಾಹಿತಿಗಳನ್ನು ಒಳಗೊಂಡ ಪುಸ್ತಕವಿದು. ಈ ಪುಸ್ತಕವು “ದೇವರು ಇದ್ದಾನೆಯೇ? ದೇವರು ಎಂಬ ವಸ್ತು ನಿಜವಾಗಿ ಉಂಟೆ? ದೇವರು ಎಂದರೆ ಏನು? ಅದರ ಸ್ವರೂಪ ಎಂಥದು? ಅದರಿಂದ ನಮಗೆ ಆಗಬೇಕಾದ್ದೇನು? ಈ ಜಗತ್ತು ಏಕೆ ಸೃಷ್ಟಿಯಾಯಿತು? ಇದರ ವ್ಯವಸ್ಥೆಯ ತತ್ವವೇನು? ನಾನಾ ಮತಧರ್ಮಗಳ ಮೂಲತತ್ವವೇನು? ಇಂಥ ಪ್ರಶ್ನೆಗಳು ಸಾಮಾನ್ಯವಾಗಿ ಅನೇಕರ ಮನಸ್ಸಿನಲ್ಲಿ ಒಂದಲ್ಲ ಒಂದು ಕಾಲದಲ್ಲಿ, ಕಾಣಿಸಿಕೊಂಡಿರುತ್ತವೆ. ಆದರೆ ಅವುಗಳಿಗೆ ಸರಿಯಾದ ಉತ್ತರ ಕಾಣದೆ ಹಲುಬುವರು ಬಹುಮಂದಿ. ಹೀಗೆ ಮನುಷ್ಯನ ಮನದಲ್ಲಿ ಸಾಮಾನ್ಯವಾಗಿ ಉದ್ಭವಿಸುವ ಈ ಗಹನವಾದ ಪ್ರಶ್ನೆಗಳಿಗೆ ಸಾಧ್ಯವಾದ…

  • ಸಚಿನ್ ತೆಂಡೂಲ್ಕರ್ ಎಂದೊಡನೆ ಕ್ರಿಕೆಟ್ ಪ್ರೇಮಿಗಳಲ್ಲಿ ಒಂಥರಾ ಪುಳಕ. ಹಲವಾರು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡ ಇವರನ್ನು ಸಾಕ್ಷಾತ್ ಕ್ರಿಕೆಟ್ ದೇವರು ಎಂದು ಕರೆಯುವವರೂ ಹಲವಾರು ಮಂದಿ ಇದ್ದಾರೆ. ಅವರ ಕ್ರೀಡಾ ಜೀವನವನ್ನು ಒಂದೆಡೆ ಕಟ್ಟಿಕೊಡುವುದು ಸಾಹಸದ ಪ್ರಯತ್ನವೇ ಸರಿ. ‘ಸಚಿನ್’ ಪುಸ್ತಕದ ಲೇಖಕರಾದ ಅರುಣ್ ಹಾಗೂ ಮೋಹನ್ ಅವರು ಇವರ ಕ್ರೀಡಾ ಬದುಕಿನ ಪ್ರಮುಖ ಘಟನೆಗಳನ್ನು ಬಹಳ ಆಪ್ತವಾಗಿ ಚಿತ್ರಿಸಿದ್ದಾರೆ. ಪುಸ್ತಕದ ಪ್ರಾರಂಭಿಕ ಪುಟಗಳಲ್ಲಿ ಸಚಿನ್ ಕ್ರಿಕೆಟ್ ಜೀವನ ಹಾಗೂ ಬಾಲ್ಯದ ಫೋಟೋ ಆಲ್ಬಮ್ ಒಂದನ್ನು ನೀಡಿದ್ದಾರೆ. 

    ಪುಸ್ತಕದ ಬೆನ್ನುಡಿಯಲ್ಲಿ ಸಚಿನ್ ತೆಂಡೂಲ್ಕರ್ ಅವರ ಮಾತುಗಳನ್ನೇ ಪ್ರೇರಣಾ ಸ್ವರೂಪವಾಗಿ ನೀಡಿದ್ದಾರೆ. “ವಿಶ್ವ ಕ್ರಿಕೆಟ್ ನ…