ಉದಯೋನ್ಮುಖ ಲೇಖಕಿ ಅಕ್ಷತಾರಾಜ್ ಪೆರ್ಲ ಅವರ ಬರಹಗಳ ಸಂಗ್ರಹವು ‘ಅವಲಕ್ಕಿ ಪವಲಕ್ಕಿ' ಎಂಬ ವಿನೂತನ ಹೆಸರಿನಲ್ಲಿ ಬಿಡುಗಡೆಯಾಗಿದೆ. ಸುಮಾರು ೧೩೦ ಪುಟಗಳ ಈ ಪುಟ್ಟ ಕೃತಿಗೆ ಬೆಂಬಲ ನೀಡುತ್ತಾ ಮುನ್ನುಡಿಯನ್ನು ಬರೆದು ಬೆಂಬಲ ನೀಡಿದ್ದಾರೆ ಹಿರಿಯ ಸಾಹಿತಿ ಬಿ ಎಂ ರೋಹಿಣಿ ಇವರು. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಕಿರುನೋಟ ಇಲ್ಲಿದೆ.
“ಕರಾವಳಿ ಲೇಖಕಿಯರ-ವಾಚಕಿಯರ ಸಂಘವು ನೀಡುವ ದತ್ತಿ ಬಹುಮಾನವನ್ನು ಪಡೆದ ಲೇಖನ ಸಂಕಲನವಿದು. ಈ ದತ್ತಿ ಬಹುಮಾನವು ಹಿರಿಯ ಲೇಖಕಿ ಚಂದ್ರಭಾಗಿಯವರ ಸ್ಮರಣೆಯಲ್ಲಿ ನೀಡಲಾಗಿದೆ. ಈ ಹಿರಿಯ ಲೇಖಕಿಯ ಮಕ್ಕಳು ನೀಡಿದ ದತ್ತಿನಿಧಿಯು ಅಪ್ರಕಟಿತ ಅಂದರೆ ಹಸ್ತಪ್ರತಿ ರೂಪದ ಸಾಹಿತ್ಯವನ್ನು ಆಹ್ವಾನಿಸಿತ್ತು. ಬಹುಮಾನ ಗಳಿಸಿದ…