ನಿನ್ನೆ ಪ್ರಕಟವಾದ ಭಾಗ-1ರಲ್ಲಿ ಈ ಪುಸ್ತಕದ “ಮಕ್ಕಳಿಗಾಗಿ" ಮತ್ತು “ದೊಡ್ಡವರಿಗಾಗಿ" ಎಂಬ 2 ಭಾಗಗಳ ಮಾಹಿತಿ ನೀಡಲಾಗಿತ್ತು.
"ಕಲಿಯುವುದು" ಎಂಬ ಕೊನೆಯ ಅಧ್ಯಾಯ ಹೀಗೆ ಆರಂಭವಾಗುತ್ತದೆ: "ಮಕ್ಕಳು ಏಕೆ ಶಾಲೆಗೆ ಹೋಗುತ್ತಾರೆ? ಅವರು ಏಕೆ ತರಗತಿಯಲ್ಲಿ ಕುಳಿತುಕೊಳ್ಳಬೇಕು? ಅವರು ಏಕೆ ಟೀಚರ್ ಹೇಳಿಕೊಡುವ ಪಾಠಗಳನ್ನು ಕೇಳಿಸಿಕೊಳ್ಳಬೇಕು? ಶಾಲೆಗೆ ಹೋಗುವುದಕ್ಕಿಂತ ಇಡೀ ದಿನ ಆಡುತ್ತಾ ಓಡುತ್ತಾ ಕಳೆಯುವುದೇ ಎಷ್ಟೋ ಚೆನ್ನಾಗಿರುತ್ತದೆ ಎಂದು ಬಹಳ ಮಕ್ಕಳಿಗೆ ಅನ್ನಿಸಬಹುದು." ಮುಂದುವರಿದು, ಪ್ರಾಣಿಗಳು ಮತ್ತು ಮನುಷ್ಯರಿಗೆ ಒಂದು ದೊಡ್ಡ ಶಕ್ತಿ ಇದೆ. ಅದೇ ಕಲಿಕೆಯ ಶಕ್ತಿ. ಹೊಸತನ್ನು ತಿಳಿಯುವ ನಿರಂತರ ಕ್ರಿಯೆಯೇ ಕಲಿಕೆ; ಅದು ಈಗಾಗಲೇ ತಿಳಿದಿರುವ ವಿಚಾರಗಳನ್ನು ಅರ್ಥ ಮಾಡಿಕೊಳ್ಳುವ ಕ್ರಿಯೆಯೂ ಹೌದು ಎಂದು ವಿವರಿಸಲಾಗಿದೆ.…