“ಸಮಾಜದ ಅನಿಷ್ಟಗಳಿಗೆ ಪ್ರಸ್ತುತ ವ್ಯವಸ್ಥೆ ಯಾವುದೇ ಪರಿಹಾರವನ್ನು ನೀಡಲು ಸಾಧ್ಯವಿಲ್ಲ ಎಂಬುದು ಸುಸ್ಪಷ್ಟ" ಎಂದು ಹೇಳುವ ಕೋಬಾಡ್ ಗಾಂಧಿಯವರು “ಒಳಿತಿನ ಮತ್ತು ಭರವಸೆಯ ಬೀಜಗಳು ಮಾನವಕುಲದಲ್ಲಿ ಅಂತರ್ಗತವಾಗಿದೆ. ಒಂದಲ್ಲ ಒಂದು ದಿನ ಅವು ಹೂವಾಗಿ ಅರಳುತ್ತವೆ” ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸುವುದನ್ನು ಕಾಣಬಹುದು ಎಂದು ಅನುವಾದಕಿ ಜ್ಯೋತಿ. ಎ ಅವರು ‘ಅತಂತ್ರ ಸ್ವಾತಂತ್ಯ್ರ’ ಕೃತಿಗೆ ಬರೆದ ಅನುವಾದಕರ ನುಡಿ ನಿಮ್ಮ ಓದಿಗಾಗಿ ನೀಡಲಾಗಿದೆ.
“ಕೆಲವು ವರ್ಷಗಳಿಂದೀಚೆಗೆ ನಮ್ಮ ದೇಶದಲ್ಲಿ ಸರ್ಕಾರದ ಜನವಿರೋಧಿ ನೀತಿಗಳನ್ನು ಗಟ್ಟಿ ದನಿಯಲ್ಲಿ ಪ್ರತಿಭಟಿಸುವ ಜನಪರ ಹೋರಾಟಗಾರರ ವಿರುದ್ಧ ಕ್ರಿಮಿನಲ್ ಜಾಥಾಗಳನ್ನು ಬೇಕಾಬಿಟ್ಟಿಯಾಗಿ ದಾಖಲಿಸಿ ಅವರನ್ನು ಜೈಲಿಗೆ…