ಸೋದೆ ಸದಾಶಿವರಾಯರ ನಿಗೂಢ ಆತ್ಮಕಥನವಾದ 'ಅನುರಾಯ ಶಾಲ್ಮಲೆ' ಇದರ ಲೇಖಕರು ಖ್ಯಾತ ಇತಿಹಾಸಕಾರರೂ, ವಾಗ್ಮಿಗಳೂ ಆದ ಡಾ. ಲಕ್ಷ್ಮೀಶ್ ಹೆಗಡೆ ಸೋಂದಾ ಇವರು. ಇವರು ಕಳೆದ ೧೫ ವರ್ಷಗಳಿಂದ ಇತಿಹಾಸ ಶೋಧನೆಯಲ್ಲಿ ಸಕ್ರಿಯರಾಗಿ ಹಲವಾರು ಶಾಸನಗಳು, ವೀರಗಲ್ಲುಗಳು, ಐತಿಹಾಸಿಕ ಕುರುಹುಗಳನ್ನು ಸಂಶೋಧಿಸಿ ಅವುಗಳನ್ನು ಅಭ್ಯಸಿಸಿ ಸಮಾಜಕ್ಕೆ ಪರಿಚಯಿಸಿದ್ದಾರೆ.
"'ಅನುರಾಯ ಶಾಲ್ಮಲೆ' ಎಂಬ ಈ ಐತಿಹಾಸಿಕ ಕಾದಂಬರಿಯ ಮೂಲವಸ್ತು ಸದಾಶಿವರಾಯ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸೋದೆ ಎಂಬ ಪ್ರದೇಶವನ್ನು ಕ್ರಿ ಶ ೧೬೭೮ರಿಂದ ೧೭೧೮ರವರೆಗೆ ಆಳ್ವಿಕೆ ಮಾಡಿದ ಪರಾಕ್ರಮಿ, ಸಾಹಿತಿ, ಸಂಗೀತ ಪ್ರೇಮಿ ಅರಸ. ಈತನ ಶ್ರೇಷ್ಟ ಸಾಧನೆಯೆಂದರೆ ಕ್ರಿ ಶ.೧೬೮೦ರಲ್ಲೇ ದೇಶದಲ್ಲಿ ಮೊದಲ ಬಾರಿಗೆ…