ಪುಸ್ತಕ ಸಂಪದ

  • ‘ಫಾಸಿಗೆ ಸಾಕ್ಷಿ' ಎಂಬ ಕಾದಂಬರಿಯನ್ನು ಬರೆದವರು ಮಾಲತಿ ಮುದಕವಿ ಇವರು. ಮಾಲತಿಯವರು ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿದ್ದಾರೆ. ಕನ್ನಡದ ಹಲವಾರು ಪತ್ರಿಕೆಗಳಲ್ಲಿ ಇವರ ಬರಹಗಳು ಬೆಳಕು ಕಂಡಿವೆ. ಹಲವಾರು ಬಹುಮಾನ, ಪುರಸ್ಕಾರಗಳೂ ಲಭಿಸಿವೆ. 

    ಮಾಲತಿ ಮುದಕವಿ ಅವರ ಕಾದಂಬರಿ ‘ಫಾಸಿಗೆ ಸಾಕ್ಷಿ’ಯಲ್ಲಿ ಓರ್ವ ವ್ಯಕ್ತಿ ಜೀವನದಲ್ಲಿ ಒಮ್ಮೊಮ್ಮೆ ಅತ್ಯಂತ ವಿಚಿತ್ರ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ. ಒಮ್ಮೆ ಒಬ್ಬ ಮರಣದಂಡನೆ ಕೊಡುವ ವ್ಯಕ್ತಿಯನ್ನು ಭೆಟ್ಟಿಯಾಗುವ ಯೋಗವು ನನಗೆ ಒದಗಿಬಂದಿತ್ತು. ಅನೇಕ ಕೈದಿಗಳಿಗೆ ಗಲ್ಲಿಗೇರಿಸುವ ವಧೆಕಾರನ ಒಂದು ಸತ್ಯಕಥೆಯನ್ನು ಅವನ ಬಾಯಿಯಿಂದಲೇ…

  • ಎಂ.ಎಸ್. ಶ್ರೀರಾಮ್ ಅವರ ಎಂಟು ಸಣ್ಣಕತೆಗಳ ಸಂಗ್ರಹ “ತೇಲ್ ಮಾಲಿಶ್.” ಇದು ಅವರ ಮೂರನೆಯ ಕಥಾಸಂಕಲನ.  ಆಂಧ್ರಪ್ರದೇಶದ ನೆಲ್ಲೂರಿನಲ್ಲಿ 1962ರಲ್ಲಿ ಜನಿಸಿದ ಶ್ರೀರಾಮ್ ಉಡುಪಿ, ಬೆಂಗಳೂರು, ಮೈಸೂರು, ಗುಜರಾತಿನ ಆಣಂದ್‌ನಲ್ಲಿ ವ್ಯಾಸಂಗ ಮಾಡಿದವರು. ಹೈದರಾಬಾದಿನ ಸ್ವಯಂಸೇವಾ ಸಂಸ್ಥೆಯಲ್ಲಿ ಎರಡು ವರುಷ ಕೆಲಸ ಮಾಡಿದರು. ಅನಂತರ ಆಣಂದದ ಗ್ರಾಮೀಣ ನಿರ್ವಹಣಾ ಸಂಸ್ಥೆಯಲ್ಲಿ ಬೋಧಕರಾಗಿ, ಹೈದರಾಬಾದಿನ ಬೇಸಿಕ್ಸ್ ಸಂಸ್ಥೆಯಲ್ಲಿ ಉಪಾಧ್ಯಕ್ಷರಾಗಿ ಕೆಲಸ ನಿರ್ವಹಿಸಿದರು.

    ಈ ಎಲ್ಲ ಅನುಭವಗಳಿಂದ ಇದರಲ್ಲಿನ ಕತೆಗಳನ್ನು ರೂಪಿಸಲು ಅವರಿಗೆ ಸಹಾಯವಾಗಿದೆ. ಮೊದಲನೆಯ ಕತೆ “ಲಾಟರಿ". ಇದು ಸಂಕಲನದ ಅತಿ ದೀರ್ಘ ಕತೆ (40 ಪುಟ) ಮೈಸೂರಿನಲ್ಲಿ ಸುಮಾರು ನಲುವತ್ತು ವರುಷ ಉದ್ಯೋಗ ನಿರ್ವಹಿಸಿ, ನಿವೃತ್ತರಾದ ಭಾಸ್ಕರರಾಯರು ಮಧ್ಯಮವರ್ಗದವರು. "ಅವರ…

  • ಕಾಡು ಎರಡು ಅಕ್ಷರದ ಈ ಶಬ್ದ ಹಲವರಿಗೆ ಪ್ರೀತಿ. ಇದರ ಗರ್ಭದಲ್ಲಿ ಅಡಗಿರುವ ವಿಸ್ಮಯ ಅನನ್ಯ. ಇಂತಹ ಕಾಡಿನ ಮಧ್ಯೆ ಇದ್ದುಕೊಂಡು ನೈಸರ್ಗಿಕ ಜೀವನಶೈಲಿ ಮೂಲಕ ಆರೋಗ್ಯಕರ ಬದುಕು ಸಾಗಿಸುತ್ತಿರುವ ಬುಡಕಟ್ಟು ಜನಾಂಗವೆಂದರೆ ಕುಣಬಿ ಸಮುದಾಯ. ಒಂದರ್ಥದಲ್ಲಿ ಹೇಳಬೇಕೆಂದರೆ ನಿಜವಾದ ಮಣ್ಣಿನ ಮಕ್ಕಳು ಎಂದು ಕರೆಯಿಸಿಕೊಳ್ಳಲು ಯೋಗ್ಯತೆ ಹೊಂದಿರುವವರು. ಕಾಡಿನ ತಪ್ಪಲಲ್ಲಿ ಇದ್ದರೂ ಸ್ಪಂದನಶೀಲ ಗುಣದೊಂದಿಗೆ ಸಾಂಸ್ಕೃತಿಕ ಸಿರಿವಂತಿಕೆ, ಪಾರಂಪರಿಕ ಜ್ಞಾನದ ಭಂಡಾರವನ್ನೇ ಹೊತ್ತ ಅನೇಕ ಸಮುದಾಯಗಳು ನಮ್ಮ ಸುತ್ತ ಮುತ್ತ ಇವೆ. ಇವರ ಸಂಪ್ರದಾಯ, ಹಿನ್ನೆಲೆ, ಆಚರಣೆ ಎಲ್ಲವೂ ವಿಭಿನ್ನ, ವಿಶಿಷ್ಟ ಹಾಗೂ ಸ್ವಾರಸ್ಯಕರ. ಇವರ ಸ್ಥಿತಿ - ಗತಿ ಹಾಗೂ ಜೀವನಶೈಲಿಯ ಬಹು ಆಯಾಮಗಳ ಅಕ್ಷರ ರೂಪ ‘ಕಾಡ ಕಸ್ತೂರಿ’ ಕೃತಿ.

  • ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಜೀವನ ಚರಿತ್ರೆಯನ್ನು ಲೇಖಕರಾದ ಬೆ ಗೋ ರಮೇಶ್ ಅವರು ಸೊಗಸಾಗಿ, ಸಂಕ್ಷಿಪ್ತವಾಗಿ ‘ಶ್ರೀ ರಾಘವೇಂದ್ರ ಚರಿತ್ರೆ' ಎಂಬ ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ. ಇವರು ತಮ್ಮ ಮುನ್ನುಡಿಯಲ್ಲಿ ರಾಘವೇಂದ್ರ ತೀರ್ಥರವರೆಗಿನ ೧೭ ಮಂದಿ ಯತಿಯರ ಹೆಸರು ಮತ್ತು ಕಾಲಾವಧಿಯನ್ನು ನೀಡಿದ್ದಾರೆ. ಶ್ರೀ ರಾಘವೇಂದ್ರ ತೀರ್ಥರ ಬಳಿಕ ಇಪ್ಪತ್ತು ಯತಿಗಳು ಶ್ರೀಮಠದ ಗುರುಗಳಾಗಿ ಹೋಗಿದ್ದಾರೆ. ಅವರ ಮುನ್ನುಡಿಯ ಪ್ರಮುಖಾಂಶ ಹೀಗಿದೆ 

    “ಶ್ರೀ ಮನ್ಮಧ್ವಾಚಾರ್ಯರ ವೇದಾಂತ ಸಾಮ್ರಾಜ್ಯ ದಿಗ್ವಿಜಯ ವಿದ್ಯಾಸಿಂಹಾಸನಾಧೀಶ್ವರರಾದ ಶ್ರೀ ಮುದ್ರಾಘವೇಂದ್ರ ಗುರುಸಾರ್ವಭೌಮರು ಸುಜನರ ಕಷ್ಟ ಪರಿಹಾರಕ್ಕಾಗಿ ಭಗವಂತನ ಸಂಕಲ್ಪದಂತೆ ಅವತರಿಸಿದ ದೇವತೆ. ಇವರು ಸಾಕ್ಷಾತ್…

  • ‘ತಿರುಕ್ಕುರಳ್' ಪುಸ್ತಕವು ಕನ್ನಡದಲ್ಲಿ ರಾಧಾಕೃಷ್ಣ ಇವರಿಂದ ಭಾವಾನುವಾದಗೊಂಡು ಹೊರಬಂದಿದೆ. ಈ ಪುಸ್ತಕವು ‘ಅರಿವಿನೆಡೆಗೆ ಅರಿವಿನ ಹೆಜ್ಜೆ...' ಎಂದು ಮುಖಪುಟದಲ್ಲಿ ಮುದ್ರಿಸಿದ್ದಾರೆ. ಪುಸ್ತಕವನ್ನು ಮಹಾ ದಾರ್ಶನಿಕ ಕವಿ ತಿರುವಳ್ಳವವರಿಗೆ ಅರ್ಪಣೆ ಮಾಡಲಾಗಿದೆ. 

    ರಾಧಾಕೃಷ್ಣರು ತಮ್ಮ ಅನುಭವವನ್ನು ‘ಬಿಟ್ಟೆನೆಂದರೂ ಬಿಡದೀ ಮಾಯೆ' ಎಂಬ ಲೇಖನದಲ್ಲಿ ಹಂಚಿಕೊಂಡಿರುವುದು ಹೀಗೆ - ಹನ್ನೆರಡು ವರ್ಷಗಳ ಹಿಂದೆ ನನ್ನ ಗೆಳೆಯ ರಾಜೇಶ್  ಶೇಟ್ ರೊಂದಿಗೆ ತಿರುವನಂತಪುರ ಮತ್ತು ಕನ್ಯಾಕುಮಾರಿಯ ಪ್ರವಾಸಕ್ಕೆ ಹೋಗಿದ್ದೆವು. ಕನ್ಯಾಕುಮಾರಿಗೆ ತೀರ ಹತ್ತಿರ ಇರುವ ಒಂದು ಖಾಸಗಿ…

  • ‘ಪುರಾಣ ಕನ್ಯೆ' ಕಾದಂಬರಿಯು ಇಂತದ್ದೊಂದು ಅನನ್ಯವೂ ವಿಶಿಷ್ಟವೂ ಆದ ಸಾಂಸ್ಕೃತಿಕ ಲೋಕವನ್ನು ಸ್ಥಳೀಯ ಭಾಷೆಯಲ್ಲಿ ಕಟ್ಟಿಕೊಡುತ್ತಾ ಜನರ ದೈವವೊಂದರ ಕಲ್ಪನೆ ಇನ್ನಷ್ಟು ಸ್ಪುಟಗೊಳ್ಳುವಂತೆ ಮಾಡುತ್ತದೆ. ಈ ದೈವಗಳು ಹಿಂದೂ ಮುಸ್ಲಿಂ ವ್ಯತ್ಯಾಸ ಮಾಡುವುದಿಲ್ಲ ಎನ್ನುತ್ತಾರೆ ಲೇಖಕ ಪುರುಷೋತ್ತಮ ಬಿಳಿಮಲೆ. ಅವರು ಕಾ.ತ ಚಿಕ್ಕಣ್ಣ ಅವರ ‘ಪುರಾಣ ಕನ್ಯೆ’ ಕೃತಿಗೆ ಬರೆದಿರುವ ಮುನ್ನುಡಿ ನಿಮ್ಮ ಓದಿಗಾಗಿ

    “ಒಂದು ರೀತಿಯಿಂದ, “ಪುರಾಣ ಕನ್ಯೆ” ಹೆಸರಿನ ಈ ಕಾದಂಬರಿಯು ಚಿಕ್ಕಣ್ಣನವರ ‘ನಿಶಬುದೆಡೆಗೆ” ಕೃತಿಯ ಮುಂದುವರಿಕೆಯ ಹಾಗೆ ಕಾಣುತ್ತದೆ. ಈ ಎರಡು ಕೃತಿಗಳ ಕೇಂದ್ರದಲ್ಲಿ ವೈವಿಧ್ಯಮಯ ಪ್ರಾಣ, ಐತಿಹ್ಯ, ನಂಬುಗೆ, ಕತೆ ಮತ್ತು…

  • ಎಚ್. ಎಸ್. ವೆಂಕಟೇಶಮೂರ್ತಿಯವರ ಆತ್ಮಕಥನಾತ್ಮಕವಾದ ಆಪ್ತ ಪ್ರಬಂಧಗಳ ಸಂಪುಟ "ಅನಾತ್ಮ ಕಥನ.” ಇವನ್ನು ಓದುತ್ತಿದ್ದಂತೆ, ಇವು ನಮ್ಮದೇ ಅನುಭವ ಅನಿಸುತ್ತದೆ. ಹಾಗಿದೆ ಎಚ್.ಎಸ್. ವಿ. ಅವರ ಮನಮುಟ್ಟುವ ಮತ್ತು ಹೃದಯಕ್ಕೇ ಇಳಿಯುವ ಶೈಲಿ. ಜೊತೆಗೆ ಈ ಬರಹಗಳಿಗಾಗಿ ಅವರು ತಮ್ಮ ಅನುಭವದಿಂದ ಆಯ್ದುಕೊಂಡ ಸಂಗತಿಗಳೂ ಅಂಥವೇ.

    ಕನ್ನಡಿಗರ ಮೆಚ್ಚಿನ ಕವಿಗಳಲ್ಲಿ ಒಬ್ಬರಾಗಿರುವ ಎಚ್.ಎಸ್.ವಿ. ಅವರು ಜನಿಸಿದ್ದು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಹೋದಿಗ್ಗೆರೆಯಲ್ಲಿ. ಆರಂಭದ ಮೂವತ್ತು ವರುಷ ಅವರು ಗ್ರಾಮ ಪರಿಸರದಲ್ಲೇ ಬೆಳೆದವರು. ಅಲ್ಲಿನ ಅನುಭವಗಳ ಗಾಢ ಛಾಯೆ ಅವರ ಹಲವು ಬರಹಗಳಲ್ಲಿ ಕಾಣಿಸುತ್ತದೆ. ಮಲ್ಲಾಡಿಹಳ್ಳಿಯ ಶಾಲೆಯಲ್ಲಿ ತಮ್ಮ ಅಧ್ಯಾಪನ ವೃತ್ತಿ ಶುರು ಮಾಡಿದ ಎಚ್.ಎಸ್.ವಿ. ಅವರು, ಅನಂತರ 1973ರಲ್ಲಿ ಬೆಂಗಳೂರಿನ ಸೇಂಟ್…

  • ಡಾ. ಅಜಿತ್ ಹರೀಶಿ ಹಾಗೂ ವಿಠಲ್ ಶೆಣೈ ಅವರು ತಮ್ಮಂತೆ ಕತೆಗಳನ್ನು ಬರೆಯುವ ಇಪ್ಪತ್ತೆಂಟು ಮಂದಿ ಕಥೆಗಾರರ ಕಥೆಗಳನ್ನು ಸಂಗ್ರಹಿಸಿ 'ಕಥಾಭರಣ' ಮಾಡಿದ್ದಾರೆ. ಪುಸ್ತಕಕ್ಕೆ ಖ್ಯಾತ ಕಾದಂಬರಿಕಾರ ವಸುಧೇಂದ್ರ ಇವರು ಮುನ್ನುಡಿ ಬರೆದಿದ್ದಾರೆ. ಇವರು ತಮ್ಮ ಮಾತುಗಳಲ್ಲಿ “ ಬಹುತೇಕ ಹಳ್ಳಿಗಳಲ್ಲಿ ಸುಗ್ಗಿ ಹಬ್ಬ ಮಾಡುತ್ತಾರೆ. ಹೊಸ ಬೆಳೆ ಮನೆಗೆ ಬಂದ ತಕ್ಷಣ, ಅದರಲ್ಲಿ ಮೊದಲ ಭಾಗವಾಗಿ ತಮ್ಮ ಯೋಗ್ಯತೆಗೆ ತಕ್ಕಂತೆ ಒಂದಿಷ್ಟು ಅನ್ನವನ್ನು ಊರ ದೇವರಿಗೆ ಅರ್ಪಿಸುತ್ತಾರೆ. ಬಡವ, ಬಲ್ಲಿದ, ಮೇಲು, ಕೀಳು ಇತ್ಯಾದಿಗಳ ಸೋಂಕಿಲ್ಲದೆ ಎಲ್ಲರೂ ಈ ದಾನ ಮಾಡುತ್ತಾರೆ. ಅದನ್ನೆಲ್ಲಾ ಸ್ವೀಕರಿಸಿದ ದೇವಸ್ಥಾನವು ಸುಗ್ಗಿ ಹಬ್ಬ ಹಮ್ಮಿಕೊಳ್ಳುತ್ತದೆ. ಊರವರೇ ನೀಡಿದ ಧಾನ್ಯಗಳನ್ನು ಬಳಸಿ ಊರವರೇ ಅಡುಗೆ ತಯಾರಿಸಿ ಎಲ್ಲರೂ ಊಟ…

  • ಜೈವಿಕ ಮಹಾಯುದ್ಧ ಮುಂದೇನು...? ಇದು ಕೆ. ನಟರಾಜ್ ಅವರ ಹದಿಮೂರನೆಯ ಪುಸ್ತಕ. ಈ ಪುಸ್ತಕ ಇಂದಿನ ರಾಷ್ಟ್ರ-ರಾಷ್ಟ್ರಗಳ ವಿನಾಶದ ತೊಳಲಾಟವನ್ನು ಪ್ರತಿಬಿಂಬಿಸುತ್ತದೆ. ಮನುಷ್ಯ ನಾಗರೀಕತೆಯ ಹೊಸ್ತಿಲಲ್ಲಿ ಹೆಜ್ಜೆ ಇಟ್ಟಾಗಿನಿಂದ ಆತನ ವಿಲಕ್ಷಣ ಮನಸ್ಸು ವಿನಾಶದ ಕಡೆಗೇ ತುಡಿಯುತ್ತಿರುವುದು ಇತಿಹಾಸ ಕಂಡುಕೊಂಡ ಸತ್ಯ. ಮಾನವನ ಅಭ್ಯುದಯಕ್ಕೆ ವಿಜ್ಞಾನ ಆವಿಷ್ಕಾರಗೊಳ್ಳುತ್ತಿರುವಂತೆಯೇ ಅದರ ಇನ್ನೊಂದು ವಿನಾಶದ, ವಿಧ್ವಂಸದ ಮಜಲು ತೆರೆದುಕೊಳ್ಳುತ್ತಿರುವುದನ್ನು ಇತಿಹಾಸದ ಪುಟ ಪುಟಗಳಲ್ಲಿ ಕಾಣಬಹುದು. ಇದಕ್ಕೆ ಪ್ರಪಂಚದ ಎರಡು ಮಹಾಯುದ್ಧಗಳೇ ಸಾಕ್ಷಿ ; ಅಷ್ಟೇ ಏಕೆ ಇತ್ತೀಚೆಗೆ ಆರಂಭವಾಗಿರುವ ರಷ್ಯಾ-ಉಕ್ರೇನ್ ಯುದ್ಧವೇ ನಮ್ಮ ಕಣ್ಣ ಮುಂದಿನ ಜ್ವಲಂತ ಸಾಕ್ಷಿ. ಮೂರನೇ ಮಹಾಯುದ್ಧವೇನಾದರೂ ಸಂಭವಿಸಿದರೆ, ಜೈವಿಕ ಹಾಗೂ…

  • ಪ್ರಾಚೀನ ಭಾರತದ ಸಾಧನೆಯನ್ನು ತಿಳಿಸುವ ಲೇಖನಗಳ ಸಂಗ್ರಹ ಈ ಕೃತಿ. ಇದರ ಪ್ರಕಟಣೆಗೆ ಸಹಕಾರ ನೀಡಿದವರು ಸುರತ್ಕಲ್‌ನ ಶ್ರೀ ಶಾರದಾ ಮಹೋತ್ಸವ ಸಮಿತಿ. 2016ರಲ್ಲಿ ಅದರ 42ನೇ ಶಾರದೋತ್ಸವ ಸಂದರ್ಭದಲ್ಲಿ ಇದನ್ನು ಪ್ರಕಟಿಸಲಾಯಿತು.

    ಶಾರದೋತ್ಸವದಲ್ಲಿ ಭಕ್ತರು ಶಾರದೆಯನ್ನು ಪೂಜಿಸಿ, ಪ್ರಸಾದವನ್ನು ಕೊಂಡೊಯ್ಯುವುದರ ಜೊತೆಗೆ, ಸಂಸ್ಕಾರ ನೀಡುವ ಕೃತಿಯೊಂದನ್ನು ಪ್ರಸಾದರೂಪವಾಗಿ ಒಯ್ದು ಮನೆಮಂದಿಗೆ ಸಂಸ್ಕಾರದ ಸುಗಂಧವನ್ನೂ ನೀಡುವಂತಾಗಬೇಕೆಂಬುದು ಸಮಿತಿಯ ಆಶಯ. ಅದಕ್ಕಾಗಿ, ಸಂಸ್ಕಾರಪೂರ್ಣ ಕೃತಿಯೊಂದನ್ನು ಪ್ರಸಾದದ ಜೊತೆಗೆ ಕೊಡುವ ಪರಿಪಾಠವನ್ನು 2010ರಿಂದ ಆರಂಭಿಸಲಾಯಿತು.

    ಸನಾತನ ಪರಂಪರೆಯ ವಾರಸುದಾರರಾದ ನಮಗೆ ಪೂರ್ವಜರ ಸಾಧನೆಯ ಬಗ್ಗೆ ಅರಿವು ಮೂಡಬೇಕು ಮತ್ತು ನಮ್ಮ ಸಾಧನೆಯನ್ನು ಅರಿತು ಅಭಿಮಾನ ಪಡಬೇಕು ಎಂಬ ಉದ್ದೇಶದಿಂದ…