ಕಥೆಗಾರ, ಪತ್ರಕರ್ತ ರವೀಂದ್ರ ಶೆಟ್ಟಿ ಕುತ್ತೆತ್ತೂರು ಇವರ ಎರಡನೇ ಕಥಾ ಸಂಕಲನವೇ 'ಅಂತಿಮವಾದ'. ಕರ್ಮವೀರ, ಹೊಸದಿಗಂತ, ಕುಂದಪ್ರಭ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾದ ಹತ್ತು ಕಥೆಗಳು ಈ ಸಂಕಲನದಲ್ಲಿವೆ. ಈ ಕಥಾ ಸಂಕಲನದಲ್ಲಿ ಅಂತಿಮವಾದ, ದೊಡ್ಮನೆ ನಾಯಿ, ಆಧುನಿಕ ಭಸ್ಮಾಸುರ, ಸೀಮಾ, ತೀರಗಳು, ಕೊರಡು ಕೊನರುವುದೇ?, ಬಲಿ, ದಾರಿ ತೋರಿಸಿದಾಕೆ, ಭ್ರಮೆ, ಹೀಗೊಬ್ಬ ಕಥೆಗಾರ ಎಂಬ ಹತ್ತು ಕಥೆಗಳಿವೆ.
ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ ಖ್ಯಾತ ಸಾಹಿತಿ ಅಮೃತ ಸೋಮೇಶ್ವರ. ಇವರು ತಮ್ಮ ನುಡಿಯಲ್ಲಿ "ಕನ್ನಡದಲ್ಲಿ ಪಂಜೆ ಮಂಗೇಶರಾಯರಿಂದ ತೊಡಗಿದ ಆಧುನಿಕ ಸಣ್ಣ ಕತೆಗಳ ಪರಂಪರೆ ಹರಿಗಡಿಯದೆ ಮುಂದುವರಿದಿದ್ದು, ಪ್ರಮಾಣ, ವೈವಿಧ್ಯ, ಸತ್ವ, ಮೌಲ್ಯಗಳಲ್ಲಿ ಯಾವುದೇ ಇತರ ಭಾಷೆಯ…