ಯಕ್ಷಗಾನದ ಪ್ರಸಿದ್ಧ ಅರ್ಥಧಾರಿಗಳಾದ ಪೊಳಲಿ ನಿತ್ಯಾನಂದ ಕಾರಂತರು ಸುಮಾರು ೨೦ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ ಎಂಬ ಸಂಗತಿ ಹಲವರಿಗೆ ತಿಳಿದಿಲ್ಲ. ಅದಕ್ಕೆ ಒಂದು ಕಾರಣ ಅವು ಪುಸ್ತಕ ರೂಪದಲ್ಲಿ ಪ್ರಕಟವಾಗಿರಲಿಲ್ಲ. ಇದೀಗ “ಯಕ್ಷಗಾನ ಪ್ರಸಂಗ ಸಂಪುಟ”ದಲ್ಲಿ ಅವರು ರಚಿಸಿದ ಆರು ಯಕ್ಷಗಾನ ಪ್ರಸಂಗಗಳು ಪ್ರಕಟವಾಗಿರುವ ಕಾರಣ ಮುಂದಿನ ತಲೆಮಾರುಗಳಿಗೆ ಅವು ಲಭ್ಯವಾಗಿವೆ.
ಈ ಸಂಪುಟದಲ್ಲಿರುವ ಆರು ಯಕ್ಷಗಾನ ಪ್ರಸಂಗಗಳು: ಸತ್ಯದಪ್ಪೆ ಚೆನ್ನಮ್ಮ, ನಾಡ ಕೇದಗೆ, ಕಾಂತು ಕಬೇದಿ, ಸಾಮ್ರಾಟ್ ಸಂಕಣ್ಣ, ಧರ್ಮಧಾರೆ ಮತ್ತು ರಾಮರಕ್ಷಾ ಹೋಮ ವಿಶ್ವರೂಪ ದರ್ಶನ. ಯಕ್ಷಗಾನದ ದೊಡ್ಡ ಅಭಿಮಾನಿ ಹಾಗೂ ಇದರ ಪ್ರಕಾಶಕರಾದ ತಮ್ಮ ಅಳಿಯ ಪುರುಷೋತ್ತಮ ಮರಕಡ, ಇನ್ನೊಬ್ಬ ಅಳಿಯ ಸಿದ್ಧಾರ್ಥ ರಾವ್ ಮತ್ತು ಮಗಳಂದಿರಾದ ಭವಾನಿ ಮತ್ತು ಭಾರ್ಗವಿ ಇವರ…