ಬಾಹ್ಯಾಕಾಶ, ಗ್ರಹಣಗಳು ಮತ್ತು ಆಕಾಶಕಾಯಗಳ ಬಗ್ಗೆ ಹಲವು ಪುಸ್ತಕಗಳನ್ನು ಬರೆದಿರುವ ಬಿ. ಎಸ್. ಶೈಲಜಾ ಅವರ ಪ್ರವಾಸ ಕಥನ ಇದು. ಡಿಸೆಂಬರ ತಿಂಗಳಿನಲ್ಲಿ ಘಟಿಸಿದ ಸೂರ್ಯಗ್ರಹಣದ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಎರಡು ವಿಚಾರ ಗೋಷ್ಠಿಗಳಲ್ಲಿ ಭಾಗವಹಿಸಲು ಹೋಗಿದ್ದಾಗಿನ ಅನುಭವಗಳನ್ನು ಇದರಲ್ಲಿ ನಿರೂಪಿಸಿದ್ದಾರೆ.
ಆಫ್ರಿಕಾದ ನ್ಯಾಷನಲ್ ಪಾರ್ಕುಗಳಲ್ಲಿ ಸಫಾರಿ ಹೋದಾಗ ಕಂಡ ಆನೆಗಳು, ಸಿಂಹಗಳು, ಚಿರತೆಗಳು, ಜಿರಾಫೆಗಳು, ಜೀಬ್ರಾಗಳು, ಕತ್ತೆಕಿರುಬಗಳು ಇತ್ಯಾದಿ ಹತ್ತು ಹಲವು ಪ್ರಾಣಿಗಳ ವೀಕ್ಷಣೆಯ ವಿವರಗಳು ಚೇತೋಹಾರಿಯಾಗಿವೆ. ಅಲ್ಲಿಯ ವರೆಗೆ ತಾನು ಮಾಡಿದ್ದ ಏಕಮಾತ್ರ ಸಫಾರಿ ಎಂದರೆ ಬನ್ನೇರುಘಟ್ಟದ್ದು; ಕಿಟಕಿ ಬಾಗಿಲು ಭದ್ರವಾಗಿ ಮುಚ್ಚಿದ್ದ ಸಣ್ಣ ಬಸ್ಸಿನಲ್ಲಿ. ಆದರೆ ದಕ್ಷಿಣ ಆಫ್ರಿಕಾದ ಸಫಾರಿ ತೆರೆದ ಜೀಪಿನಲ್ಲಿ ಎಂದು…