ಪುಸ್ತಕ ಸಂಪದ

  • ಖ್ಯಾತ ಲೇಖಕರಾದ ಖುಶವಂತ್ ಸಿಂಗ್ ಅವರ ಹತ್ತು ಕಥೆಗಳನ್ನು ಕನ್ನಡಕ್ಕೆ ತಂದಿದ್ದಾರೆ ಪ್ರಸಿದ್ಧ ಅನುವಾದಕರಾದ ಡಿ.ಎನ್.ಶ್ರೀನಾಥ್ ಅವರು. ಪುಸ್ತಕದಲ್ಲಿ ಯಾವುದೇ ಮುನ್ನುಡಿಗಳಿಲ್ಲ. ಮೂಲ ಲೇಖಕರ ಹಾಗೂ ಅನುವಾದಕರ ಬಗ್ಗೆ ಕೊಂಚ ಮಾಹಿತಿಗಳಿವೆ. ಪುಸ್ತಕದಲ್ಲಿ ೧೦ ಸಣ್ಣ ಕಥೆಗಳಿವೆ. ವಿಷ್ಣು ಚಿಹ್ನೆ, ಸರ್ ಮೋಹನಲಾಲರೂ ಅವರ ಆಂಗ್ಲ ಪ್ರೇಮವೂ..., ಲಂಡನ್ ನಲ್ಲಿ ಒಂದು ಪ್ರೇಮ ಪ್ರಸಂಗ, ಕಪ್ಪು ಮಲ್ಲಿಗೆ, ಅಜ್ಜಿ, ಬ್ರಹ್ಮ -ವಾಕ್ಯ, ರೇಪ್, ರಸಿಕ, ಸ್ವರ್ಗ ಮತ್ತು ಮರಣೋಪರಾಂತ ಎಂಬ ಕಥೆಗಳಿವೆ.

    ಪುಟ್ಟ ಪುಟ್ಟ ಕಥೆಗಳು ಖುಶವಂತ್ ಸಿಂಗರ ಎಂದಿನಂತೆ ಕೊಂಚ ಪೋಲಿತನ, ಕಚಗುಳಿತನ ಹಾಗೂ ಭಾವನಾತ್ಮಕತೆಯನ್ನು ಹೊಂದಿವೆ.…

  • ಪ್ರಕಾಶಕರು ಜರಗಿಸಿದ ಯುಗಾದಿ ಕಥಾಸ್ಪರ್ಧೆಯಲ್ಲಿ ಬಹುಮಾನಿತ ೧೩ ಕಥೆಗಳ ಸಂಕಲನ ಇದು. ಈ ಸ್ಪರ್ಧೆಗೆ ಪ್ರಕಾಶಕರಿಗೆ ಬೆಂಗಳೂರಿನ ಜಾಗತಿಕ ಕನ್ನಡಿಗರ ಕೂಟ “ಕಥನ" ಸಹಯೋಗ ನೀಡಿತ್ತು.

    ಆ ಸ್ಫರ್ಧೆಗೆ ಸಲ್ಲಿಕೆಯಾದ ೨೨೦ ಕತೆಗಳಲ್ಲಿ ಮೊದಲ ಬಹುಮಾನ ಪಡೆದ ಕತೆ “ನೀವೂ ದಾರ ಕಟ್ಟಿ”. ಫತೇಪುರಸಿಕ್ರಿಗೆ ಪ್ರವಾಸ ಹೋಗಿದ್ದ ದಂಪತಿಗಳಿಗೆ ಸೂಫಿ ಸಂತ ಸಲೀಂ ಕ್ರಿಸ್ತಿಯ ಸಮಾಧಿಯ ಕಿಂಡಿಯನ್ನು ತೋರಿಸಿ, ಪ್ರವಾಸಿ ಗೈಡ್ “….ಮಕ್ಕಳಿಲ್ಲದವರು ಈ ಕಿಂಡಿಗೆ ದಾರ ಕಟ್ಟಿದರೆ ಅವರ ಇಷ್ಟಾರ್ಥ ಪೂರೈಸುತ್ತದಂತೆ. ಸರ್, ನೀವೂ ಹೋಗಿ ದಾರ ಕಟ್ಟಿ ಬನ್ನಿ” ಎನ್ನುತ್ತಾನೆ. ಆ ಪ್ರವಾಸಿ ಗೈಡ್ ವಿಕಲಚೇತನ. ಪ್ರವಾಸಕ್ಕೆ ಬಂದಿದ್ದ ವಿನಾಯಕನ ಹೆಂಡತಿ, ಪ್ರವಾಸಿ ಗೈಡಿಗೆ “ನೀವೂ ದಾರ ಕಟ್ಟಿ. ನಿಮ್ಮ ಸಂಗಡ ನಾವೂ ಬರುತ್ತೇವೆ” ಎನ್ನುತ್ತಾಳೆ. ಇಂದಿನ ಆಗುಹೋಗುಗಳ…

  • ಮಹಾಮಂಡಲೇಶ್ವರಿ ರಾಣಿ ಚೆನ್ನಭೈರಾದೇವಿ ಮತ್ತು ಇತರ ಕರಾವಳಿ ರಾಣಿಯರು ಎಂಬ ಪುಸ್ತಕವನ್ನು ಕಮಲಾ ಹಂಪನಾ ಇವರು ಬರೆದಿದ್ದಾರೆ. ಅವರು ತಮ್ಮ ‘ಮೊದಲ ಮಾತು’ ಎಂಬ ಮುನ್ನುಡಿಯಲ್ಲಿ ಉಲ್ಲೇಖಿಸಿರುವಂತೆ “ಸ್ವಾತಂತ್ರ್ಯ ಪೂರ್ವದಲ್ಲಿ ತುಳುನಾಡು ಮದರಾಸು ಪ್ರಾಂತ್ಯಕ್ಕೆ ಸೇರಿತ್ತು. ಭಾಷಾವಾರು ಪ್ರಾಂತ್ಯ ರಚನೆಯ ಪುನರ್ ವಿಂಗಡಣೆ ಸಂದರ್ಭದಲ್ಲಿ ‘(ಅವಿಭಜಿತ) ದಕ್ಷಿಣ ಕನ್ನಡ ಜಿಲ್ಲೆ’ ಎಂಬ ಹೆಸರಿನಿಂದ ಕನ್ನಡ ನಾಡಿನಲ್ಲಿ ವಿಲೀನವಾಯಿತು. ಮತ್ತೆ ಇತ್ತೀಚೆಗೆ ೨೦೦೨ರಲ್ಲಿ ಜಿಲ್ಲೆಗಳ ಮರುಜೋಡಣೆ ಸಂದರ್ಭದಲ್ಲಿ, ದಕ್ಷಿಣ ಕನ್ನಡ ಅಥವಾ ಮಂಗಳೂರು ಜಿಲ್ಲೆ ಮತ್ತು ಉಡುಪಿ ಜಿಲ್ಲೆ ಎಂದು ಎರಡು ಹೋಳುಗಳಾದವು. ಇದರ ಪಕ್ಕದಲ್ಲಿಯೇ ಕಡಲದಂಡೆಯುದ್ದಕ್ಕೂ ಚಾಚಿದೆ ಉತ್ತರ ಕನ್ನಡ ಅಥವಾ ಕಾರವಾರ…

  • ‘ಮೋಡದೊಡನೆ ಮಾತುಕತೆ' ಈ ಪುಸ್ತಕವು ಹೊಸಗಾಲದ ಆಖ್ಯಾನ-ವ್ಯಾಖ್ಯಾನ ಸಮೇತ ಕಾಳಿದಾಸನ ‘ಮೇಘದೂತ'ದ ಕನ್ನಡ ಭಾವಾನುವಾದವಾಗಿದೆ. ಖ್ಯಾತ ಬರಹಗಾರರಾದ ಅಕ್ಷರ ಕೆ.ವಿ. ಇವರು ಬರೆದ ಪುಸ್ತಕಕ್ಕೆ ಡಾ. ಶ್ರೀರಾಮ ಭಟ್ ಇವರು ಹಿನ್ನುಡಿ ಬರೆದಿದ್ದಾರೆ. ಅಕ್ಷರ ಕೆ.ವಿ. ಅವರು ತಮ್ಮ ಮಾತಿನಲ್ಲಿ ಹೇಳುವುದು ಹೀಗೆ “ ಮೇಘದೂತ ಕಾವ್ಯವು ತನ್ನ ಹಿನ್ನಲೆಯಲ್ಲಿ ಇರಬಹುದಾದ ಸಾಮಾಜಿಕ-ಸಾಂಸ್ಕೃತಿಕ ನಿಲುವುಗಳನ್ನು ಅಡಗಿಸಿ ಇಟ್ಟುಕೊಂಡಿದೆ. ಮಾತ್ರವಲ್ಲ, ತನ್ನ ಕಾವ್ಯಸ್ವರೂಪದಿಂದಾಗಿ ಅಂಥ ಹಿನ್ನಲೆಗಳನ್ನು ಹುಡುಕಿ ತೆಗೆಯುವ ಆಧುನಿಕ ವಿಮರ್ಶಾಕ್ರಮಗಳಿಗೂ ಪ್ರತಿರೋಧಕವಾಗಿದೆ. ಆದರೆ, ಮೇಲ್ಕಂಡ ಉಲ್ಲೇಖವು ಇಂಥ ಪ್ರತಿರೋಧವನ್ನು ಉಲ್ಲಂಘಿಸಿ, ಮೇಘದೂತದಂಥ ‘ನಿರುದ್ಧಿಶ್ಯ ರಸಸೃಷ್ಟಿ'ಯ ಕಾವ್ಯದ ಒಳಗೂ…

  • ಬಾಂಗ್ಲಾದೇಶದ ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಮಹಮದ್ ಯೂನಸ್ ಅವರ ಜೀವನ ಚರಿತ್ರೆಯೇ ‘ಬಡವರ ಬಾಪು' ಎಂಬ ಪುಸ್ತಕ. ಈ ಪುಸ್ತಕವನ್ನು ಖ್ಯಾತ ಬರಹಗಾರ ಎನ್. ಜಗದೀಶ್ ಕೊಪ್ಪ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. 

    ‘ಬಡತನವೆಂದರೆ ಶಾಪವಲ್ಲ, ಅದೊಂದು ವ್ಯವಸ್ಥೆ. ನಮ್ಮನ್ನಾಳುವ ಸರ್ಕಾರಗಳು ಮತ್ತು ಸಮಾಜದ ಕುರುಡುತನದಿಂದಾಗಿ ಸೃಷ್ಟಿಯಾಗಿರುವ ವ್ಯವಸ್ಥೆ ಎಂದು ಜಾಗತಿಕ ಬಡತನಕ್ಕೆ ಹೊಸ ಭಾಷ್ಯ ಬರೆದ ಬಾಂಗ್ಲಾದೇಶದ ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಪ್ರೊ.ಮಹಮದ್ ಯೂನಸ್ ರವರು ದಾರ್ಶನಿಕ ಮನೋಭಾವದ ಹಾಗೂ ಈ ಜಗತ್ತು ಕಂಡ ಅಪರೂಪದ ಮಾತೃಹೃದಯದ ವ್ಯಕ್ತಿ.

  • ಉತ್ತರ ಕರ್ನಾಟಕದ ಕನ್ನಡ ಭಾಷೆಯ ಸೊಗಡು ತಿಳಿಯಬೇಕಾದರೆ ಓದಬೇಕು ಈ ಪುಸ್ತಕ. ಸರಾಗವಾಗಿ, ಸುಲಲಿತವಾಗಿ ಆಡುಮಾತಿನಲ್ಲಿ ಹಲವು ಸಂಗತಿಗಳ ಬಗ್ಗೆ ಬರೆದಿದ್ದಾರೆ ಪ್ರಶಾಂತ ಆಡೂರ.

    ಈಗಲೂ ಈ ಧಾಟಿಯಲ್ಲಿ ದಿನಪತ್ರಿಕೆಯಲ್ಲಿ ಅಂಕಣ ಬರೆಯುತ್ತಿರುವ ಪ್ರಶಾಂತ ಆಡೂರ, ತಾನು ಹೇಗೆ ಬರೆಯಲು ಶುರು ಮಾಡಿದೆ ಎಂದು ಪುಸ್ತಕದ ಕೊನೆಯ ಬರಹ "ಭಿಡೆ ಬಿಟ್ಟ ಬರದಿದ್ದೆ ಬರಹ"ದಲ್ಲಿ ಹೀಗೆ ಹಂಚಿಕೊಂಡಿದ್ದಾರೆ: "ನನ್ನ ಜೀವನದಾಗ ನಾ ಕನ್ನಡದಾಗ ಬರಿತೇನಿ ಎಂತ ಎಂದೂ ಅನ್ಕೊಂಡಿದ್ದಿಲ್ಲ……. ಒಂದ ದಿವಸ ಮಧ್ಯಾಹ್ನ ನಾನೂ ಏನರ ಇವತ್ತ ಬರದ ಬಿಡಬೇಕು ಅಂತ ನನ್ನ ಹಿಂದಿನ ದಿವಸದ್ದ ಗ್ರಹಣದ್ ಆನುಭವವನ್ನ ಒಂದ ಪೇಪರ್ ಮ್ಯಾಲೆ ಪೆನ್ಸಿಲ್‌ನಿಂದ ನಾಲ್ಕ ಅಕ್ಷರದಾಗ ಗೀಚಿಲಿಕತ್ತೆ. ಬರೀತಾ ಬರೀತಾ ಎರಡ ಪೇಜ್ ತುಂಬಿ ಬಿಟ್ಟಿತು. ಅರೇ ಇಷ್ಟ ಬರದನೆಲಾ ಅಂತ ನನಗ ಆಶ್ಚರ್ಯ…

  • ೧೮೫೯ರ ನವೆಂಬರ್ ನಲ್ಲಿ ಜೀವ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್ ಅವರ ‘ಜೀವ ಸಂಕುಲಗಳ ಉಗಮ' ಎಂಬ ಸಂಶೋಧನಾ ಗ್ರಂಥ ಬಿಡುಗಡೆಯಾಯಿತು. ಇದರ ಎಲ್ಲಾ ೧೨೫೦ ಪ್ರತಿಗಳು ಮೊದಲನೇ ದಿನವೇ ಖರ್ಚಾದುವಂತೆ. ಮುಂದೆ ಮಾನವ ಜ್ಞಾನ ಭಂಡಾರಕ್ಕೆ ಅಮೂಲ್ಯವಾದ ಕೊಡುಗೆ ಎನಿಸಿಕೊಂಡ ಈ ಗ್ರಂಥ ಅಂದು ಇಡೀ ಯುರೋಪ್ ದೇಶವನ್ನು ತಲ್ಲಣಗೊಳಿಸಿತು. ಈ ಜಗತ್ತು ಒಂದು ಪರಮ ಶಕ್ತಿಯ ಸೃಷ್ಟಿ ಎಂಬ ಸೃಷ್ಟಿವಾದದ ಪರವಾಗಿ ಮತ್ತು ವಿರುದ್ಧವಾಗಿ ನಡೆದುಕೊಂಡು ಬಂದಿರುವ ವಾದ-ವಿವಾದಗಳ ಹಿನ್ನಲೆಯಲ್ಲಿ ಇದೊಂದು ಮಹತ್ವದ ಘಟನೆಯಾಗಿತ್ತು.

    ಸೃಷ್ಟಿವಾದ ಕೇವಲ ಒಂದು ಬೌದ್ಧಿಕ ಚರ್ಚೆಯ ವಿಷಯವಾಗಿರಲಿಲ್ಲ. ಈ ಜಗತ್ತು ಸೃಷ್ಟಿಕರ್ತನ ನಿಯಮದಂತೆ…

  • ಚೆನ್ನಭೈರಾದೇವಿ ಈಕೆ ಕರಿಮೆಣಸಿನ ರಾಣಿ ಎಂಬ ಖ್ಯಾತಿ ಹೊತ್ತವಳು. ನಮ್ಮ ಇತಿಹಾಸಕಾರರು ಈಕೆಯನ್ನು ಗುರುತಿಸಿ ಪರಿಚಯಿಸಿದ್ದು ಕಡಿಮೆ. ಆ ಕರಿಮೆಣಸಿನ ರಾಣಿಯ ಅಕಳಂಕ ಚರಿತ್ರೆಯನ್ನು ನಿಮ್ಮ ಮುಂದೆ ಇಟ್ಟಿದ್ದಾರೆ ಲೇಖಕರಾದ ಡಾ. ಗಜಾನನ ಶರ್ಮ ಇವರು.  ಈ ಪುಸ್ತಕದ ಬಗ್ಗೆ ಖ್ಯಾತ ಅಂಕಣಕಾರ, ಪತ್ರಕರ್ತ ಜೋಗಿ ತಮ್ಮ ಬೆನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ.

    “ ಸಂಕಷ್ಟದಲ್ಲಿರುವವರಿಗೆ ದೂರದಲ್ಲೇ ಇದ್ದು ಕಾಪಾಡುವ ಅವ್ವರಸಿ, ಹತ್ತಿರದಿಂದ ಕಂಡವರಿಗೆ ಸಣ್ಣಮ್ಮ, ಶತ್ರುಗಳ ಪಾಲಿಗೆ ಎದೆನಡಗಿಸುವ ಚೆನ್ನಭೈರಾದೇವಿ ಬಂಧುಮಿತ್ರರಿಗೆ ಎಂದೂ ಎಚ್ಚರ ತಪ್ಪದ ನಿರ್ದಾಕ್ಷಿಣ್ಯ ಹೆಣ್ಣು. ಪೋರ್ಚುಗೀಸರ ಪಾಲಿಗೆ ರೈನಾದ…

  • ಐವತ್ತು ವರ್ಷಗಳ ಹಿಂದೆ ಪ್ರಕಟವಾದ ಖ್ಯಾತ ಕಾದಂಬರಿಕಾರ ಶರಶ್ಚಂದ್ರ ಚಟರ್ಜಿಯವರ ನೀಳ್ಗತೆಯೇ ಮಂಗಲಸೂತ್ರ. ಈ ಕತೆಯನ್ನು ಗುರುನಾಥ ಜೋಶಿಯವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಬಹಳ ಸರಳವಾದ ಕಥೆಯಾದರೂ ಮಹತ್ವದ ಅರ್ಥವನ್ನು ಹೊಂದಿದೆ. ಐದು ದಶಕಗಳ ಹಿಂದಿನ ಕತೆಯಾದುದರಿಂದ ಆ ಸಮಯದ ಕೆಲವೊಂದು ಸಾಮಾಜಿಕ ಕಟ್ಟುಪಾಡುಗಳು, ಕೆಲವು ಭಾಷಾ ಪದಗಳ ಬಳಕೆ, ಬಾಲ್ಯ ವಿವಾಹದ ಸಂಸ್ಕೃತಿ ಎಲ್ಲವೂ ವಿಭಿನ್ನವೆಂದು ತೋರುತ್ತದೆ.

    ಈ ಕಥೆ ಸತ್ಯೇಂದ್ರ ಚೌಧರಿ ಎಂಬ ಒಬ್ಬ ಯುವಕನದ್ದು. ಕಲ್ಕತ್ತಾದಲ್ಲಿ ಕಲಿಯುತ್ತಿದ್ದ ಈತ ಊರಿಗೆ ಬಂದಾಗ ಅವನ ತಾಯಿ ಮದುವೆಯ ಪ್ರಸ್ತಾಪ ಮಾಡುತ್ತಾಳೆ. ಈ ಯುವಕನದ್ದು ಜಮೀನುದಾರರ ವಂಶವಾದರೂ…

  • ಅಮೆರಿಕ ಕನ್ನಡ ಕೂಟಗಳ ಆಗರ (“ಅಕ್ಕ”) ೮ನೇ ವಿಶ್ವ ಕನ್ನಡ ಸಮ್ಮೇಳನದ ಸಂದರ್ಭದಲ್ಲಿ ಪ್ರಕಟಿಸಿದ ಒಂಬತ್ತು ಆಹ್ವಾನಿತ ಕತೆಗಳ ಸಂಕಲನ ಇದು.

    ಇದರ ಬಗ್ಗೆ ಸಂಪಾದಕ ಮಂಡಲಿಯ ಪರವಾಗಿ ಪ್ರಧಾನ ಸಂಪಾದಕರು ಬರೆದ ಕೆಲವು ಮಾತುಗಳು: “ಈ ಕಥಾಸಂಕಲನಕ್ಕಾಗಿ ನಮಗೆ ಲಭ್ಯವಿದ್ದ ಅನುಕೂಲತೆಗಳ ಇತಿಮಿತಿಯಲ್ಲಿ ಪ್ರಚಲಿತ ಲೇಖಕರನ್ನು ಸಂಪರ್ಕಿಸಿ ಈ ಕಥೆಗಳನ್ನು ಪಡೆದುಕೊಳ್ಳಲಾಯಿತು. ಬೊಗಸೆಯಲ್ಲಿ ಸಾಗರದ ನೀರನ್ನು ಹಿಡಿದು, ಇದೇ ಸಾಗರವೆನ್ನುವುದು ದುಸ್ಸಾಹಸವಾದಿತು. ಒಟ್ಟು ಒಂಬತ್ತು ಕಥೆಗಳ ಈ ಕಥಾಸಂಕಲನವನ್ನು ಕನ್ನಡ ಕಥೆಗಳ ಪ್ರಾತಿನಿಧಿಕವೆಂದು ಕರೆಯಲಾಗದು. ….. ಸಣ್ಣ ಕಥೆಯ ಸಾಧ್ಯತೆಗಳ ಹರಹು, ಆಡುಭಾಷೆಗಳಲ್ಲಿನ ವೈವಿಧ್ಯ, ಕಥೆಗಾರರ ಅನುಭವ, ಪರಿಸರ ಬದಲಾದಂತೆ ಅವರನ್ನು ಕಾಡುವ ವಸ್ತುಗಳ ವೈವಿಧ್ಯ ಈ ಸಂಕಲನದಲ್ಲಿ ವ್ಯಕ್ತವಾಗಿದೆ."