ಸೂತ್ರಧಾರ ಮತ್ತು ಇತರ ಕಥೆಗಳು ಶೈಲಜಾ ಸುರೇಶ್ ರಾವ್ ನಾಯಕ್ ಅವರ ಪ್ರಥಮ ಕಥಾ ಸಂಕಲನ. ಈ ಕಥಾ ಸಂಕಲನದಲ್ಲಿ ಒಟ್ಟು ಹದಿಮೂರು ಕಥೆಗಳಿವೆ. ಆ ಹದಿಮೂರು ಕಥೆಗಳಲ್ಲಿ ಎರಡು ಕಥೆಗಳನ್ನು ಶೈಲಜಾ ಅವರ ಮಗಳಾದ ಅಶ್ವಿನಿಯವರು ಬರೆದಿದ್ದಾರೆ. ಅಮ್ಮ-ಮಗಳು ಸೇರಿ ಜೊತೆಯಾಗಿ ಕಥಾ ಸಂಕಲನ ರಚನೆ ಮಾಡಿದ್ದಾರೆ. ಶೈಲಜಾ ಅವರು ಬರೆದ ಕಥೆಗಳು ಚಿಕ್ಕದಾಗಿದ್ದು, ನಮ್ಮ-ನಿಮ್ಮೆಲ್ಲರ ಮನೆಯ ಕಥೆಗಳಂತೆಯೇ ಇವೆ. ಈ ಕಥೆಗಳು ನಮ್ಮ ನೆರೆಹೊರೆಯಲ್ಲೇ ನಡೆದಷ್ಟು ಆಪ್ತವಾಗಿವೆ. ಪ್ರತಿಯೊಂದು ಕಥೆ ಭಾವನಾತ್ಮಕವಾಗಿದೆ. ಇಲ್ಲಿರುವ ಬಹುತೇಕ ಕಥೆಗಳು ಉತ್ತಮ ಪುರುಷ (ನಾನು) ದಲ್ಲೇ ಆರಂಭವಾಗುತ್ತದೆ. ಈ ಕಾರಣದಿಂದಲೋ ಏನೋ ನಮ್ಮದೇ ಕಥೆ ಎಂಬ ಭಾವನೆಯುಂಟಾಗುತ್ತದೆ.
ಸಾಹಿತಿ ವಾಸುದೇವ ನಾಡಿಗ್ ಅವರು…