ಇದೊಂದು ಪುಟ್ಟ ಪುಸ್ತಕದಲ್ಲಿ ಒಂದು ಕಾಲಕ್ಕೆ ಇಡೀ ರಾಷ್ಟ್ರದ ಕುತೂಹಲ ಕೆರಳಿಸಿದ ಆರುಷಿ ಹತ್ಯಾ ಪ್ರಕರಣದ ವಿವರಗಳಿವೆ. ರವಿ ಬೆಳಗೆರೆಯವರು ಕ್ರೈಂ ಸಾಹಿತ್ಯವನ್ನು ಬಹಳ ಸೊಗಸಾಗಿ ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಬರೆಯುತ್ತಾರೆ. ಆದರೆ ಈ ಆರುಷಿ ಹತ್ಯೆಯ ಪುಸ್ತಕವನ್ನು ಸ್ವಲ್ಪ ಗಡಿಬಿಡಿಯಲ್ಲಿ ಬರೆದು ಮುದ್ರಿಸಿದಂತೆ ತೋರುತ್ತದೆ. ಕೆಲವೆಡೆ ಕಥೆ ಓದುತ್ತಾ ಓದುತ್ತಾ ಬೇರೆ ಕಡೆಗೆ ತಿರುಗುತ್ತದೆ. ಆದರೂ ಈ ಪುಸ್ತಕ ಬರೆಯಲು ಅವರು ತೆಗೆದುಕೊಂಡ ಶ್ರಮ ಅಭಿನಂದನೀಯ. ಏಕೆಂದರೆ ಎಲ್ಲೂ ದೊರೆಯದ ವಿವರಗಳು ಹಾಗೂ ಭಾವಚಿತ್ರಗಳು ಪುಸ್ತಕದಲ್ಲಿ ಅಡಗಿವೆ.
ರವಿ ಬೆಳಗೆರೆಯವರು ಪುಸ್ತಕದ ಪ್ರಾರಂಭದಲ್ಲಿ ‘ನೆತ್ತರು ಹರಿದ ಹಾದಿಯಗುಂಟ' ಎಂಬ ಅಧ್ಯಾಯದಲ್ಲಿ ಅವರಿಗೆ ಈ ಪುಸ್ತಕ…