ಮಧುಮಿತಾ ಶುಕ್ಲಾ ಹತ್ಯೆ-ದಿ ಮರ್ಡರ್ ಮಿಸ್ಟ್ರಿ ಎಂದು ಮುಖಪುಟದಲ್ಲೇ ಮುದ್ರಿಸುವ ಮೂಲಕ ರವಿ ಬೆಳಗೆರೆಯವರು ಪುಸ್ತಕದ ಹೂರಣವನ್ನು ತೆರೆದಿಡುವ ಪ್ರಯತ್ನ ಮಾಡಿ ಕುತೂಹಲ ಕೆರಳಿಸಿದ್ದಾರೆ. ತಮ್ಮ ಬೆನ್ನುಡಿಯಲ್ಲಿ ಅವರೇ ಬರೆದಿರುವಂತೆ ‘ಇಪ್ಪತ್ನಾಲ್ಕು ವರ್ಷ ವಯಸ್ಸಿನ ಕವಯತ್ರಿ ಮಧುಮಿತಾ ಶುಕ್ಲಾ, ಕೊಲೆಯಾಗಲಿಕ್ಕೆ ಮೂರು ವರ್ಷ ಮುಂಚೆ ಉತ್ತರ್ ಪ್ರದೇಶ್ ನ ಬಲಿಷ್ಟ ಮಂತ್ರಿ ಅಮರ್ ಮಣಿ ತ್ರಿಪಾಠಿಯನ್ನು ಕವಿ ಸಮ್ಮೇಳನವೊಂದರಲ್ಲಿ ಭೇಟಿಯಾಗಿ ಅವನೆಡೆಗೆ ಆಸೆ ಅರಳಿಸಿಕೊಳ್ಳುವುದಕ್ಕೆ ಮುಂಚೆಯೇ ಅನೇಕ ಮಂತ್ರಿ ಮಾಗಧರನ್ನು ನೋಡಿದ್ದಳು.
ಸ್ವತಃ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಈ ಹುಡುಗಿ ಇಷ್ಟವಾಗಿದ್ದಳು. ಬಾಳಾ ಸಾಹೇಬ ಠಾಕ್ರೆಗೆ ಮಧುಮಿತಾಳ ಕವಿತೆಗಳು ಇಷ್ಟವಾಗಿದ್ದವು.…