ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಗತ್ ಸಿಂಗ್ ಹೆಸರು ಸದಾಕಾಲ ಮುಂಚೂಣಿಯಲ್ಲಿ ಇದ್ದೇ ಇರುತ್ತದೆ. ೨೦೦೭ರಲ್ಲಿ ಭಗತ್ ಸಿಂಗ್ ಜನ್ಮಶತಮಾನೋತ್ಸವವನ್ನು ಆಚರಿಸಲಾಗಿತ್ತು. ಈ ಸಮಯದಲ್ಲಿ ಹೊರ ತಂದ ಪುಸ್ತಕವೇ ‘ಧೀರ ಹುತಾತ್ಮ ಭಗತ್ ಸಿಂಗ್'. ಭಗತ್ ಸಿಂಗ್ ಬಗ್ಗೆ ಅಧಿಕ ಮಾಹಿತಿ ಬೇಕಾದವರು ಈ ಪುಸ್ತಕವನ್ನು ಓದಬಹುದು.
ಪುಸ್ತಕದ ಲೇಖಕರಾದ ಡಾ॥ ಬಿ. ಆರ್. ಮಂಜುನಾಥ್ ಅವರು ತಮ್ಮ ಮುನ್ನುಡಿ ‘ಅರಿಕೆ'ಯಲ್ಲಿ ಬರೆಯುತ್ತಾರೆ “ ಮಹಾನ್ ಹುತಾತ್ಮ ಭಗತ್ ಸಿಂಗ್ ಜನ್ಮ ತಳೆದು ೨೦೦೭ರ ಸೆಪ್ಟೆಂಬರ್ ೨೮ಕ್ಕೆ ನೂರು ವರ್ಷಗಳು. ಅಧಿಕೃತ ಮಾಧ್ಯಮಗಳು ಭಗತರ ನೆನಪನ್ನು ಜನರಿಗೆ ಕೊಂಡೊಯ್ಯುವಲ್ಲಿ ವಿಫಲವಾದರೂ ದಿನದಿಂದ ದಿನಕ್ಕೆ ಆತನ ಜನಪ್ರಿಯತೆ ಹೆಚ್ಚುತ್ತಿದೆ. ಅಸಂಖ್ಯಾತ ಎಳೆಯ…