ಪತ್ರಕರ್ತರಾದ ವಿಶ್ವೇಶ್ವರ ಭಟ್ ಇವರು ಬರೆದ ಬಿಡಿ ಬರಹಗಳ ಸಂಗ್ರಹವೇ ‘ಅಕ್ಷರಗಳೊಂದಿಗೆ ಅಕ್ಕರೆಯ ಯಾನ'. ಈ ಪುಸ್ತಕದಲ್ಲಿ ವಿಶ್ವೇಶ್ವರ ಭಟ್ ಅವರ ವಿವಿಧ ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳು ಇವೆ. ಕೆಲವೊಂದು ಲೇಖನಗಳು ಈಗಲೂ ಪ್ರಸ್ತುತವೆನಿಸುತ್ತವೆ. ಸಾಹಿತಿ ಮನು ಬಳಿಗಾರ್ ಅವರು ತಮ್ಮ ಮುನ್ನುಡಿಯಾದ ‘ಎದೆಯಾಳದ ಎರಡು ಮಾತು' ಇದರಲ್ಲಿ ವಿಶ್ವೇಶ್ವರ ಭಟ್ ಹಾಗೂ ಅವರ ಬರಹಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದ್ದಾರೆ.
ಅವರು ಒಂದೆಡೆ ಬರೆಯುತ್ತಾರೆ “ಹಲವಾರು ರಾಷ್ಟ್ರಗಳನ್ನು ಸುತ್ತಾಡಿ ಬಂದಿರುವ ವಿಶ್ವೇಶ್ವರ ಭಟ್ ರು ತಮಗೆ ಹಿಡಿಸಿದ ಅಲ್ಲಿಯ ವ್ಯಕ್ತಿಗಳು, ಊರು, ಘಟನೆ ಇತ್ಯಾದಿಗಳ ಬಗ್ಗೆ ಸಾಂದರ್ಭಿಕ ಟಿಪ್ಪಣಿಗಳನ್ನು ಮಾಡಿ ತಂದಿರುವುದರ ಫಲವಾಗಿ ವೇಲ್ಸ್ :…