ಖ್ಯಾತ ಪತ್ರಕರ್ತ ರವಿ ಬೆಳಗೆರೆ ಅವರ ನಿಧನದ ಬಳಿಕ ಹೊರ ಬಂದ ಪುಸ್ತಕವಿದು. ಬಹಳ ಹಿಂದೊಮ್ಮೆ ಪ್ರಕಟವಾಗಿದ್ದರೂ, ಪ್ರತಿಗಳು ಈಗ ಮುಗಿದಿವೆ ಎಂದು ರವಿ ಬೆಳಗೆರೆಯವರು ಬರೆದಿದ್ದರು. ‘ಹಿಮಗಿರಿಯ ಗರ್ಭದಲ್ಲಿ' ಪುಸ್ತಕವು ಒಂದು ಪ್ರವಾಸ ಕಥನ. ರವಿ ಬೆಳಗೆರೆಯವರು ತಮ್ಮ ಅರುಣಾಚಲ ಪ್ರದೇಶದ ಪ್ರವಾಸದ ಅನುಭವಗಳನ್ನು ತಮ್ಮದೇ ಆದ ಶೈಲಿಯಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಅರುಣಾಚಲ ಪ್ರದೇಶಕ್ಕೆ ಹೋಗುವುದು ಅಷ್ಟೊಂದು ಸುಲಭವಿಲ್ಲ.
ಲೇಖಕರೇ ಬರೆದಂತೆ “.... ಈ ಮುಂಚೆ ನಾನು ಅರುಣಾಚಲವನ್ನು ಅಭೇಧ್ಯ, ಅಲ್ಲಿಗೆ ನೀವು ಸಲೀಸಾಗಿ ಹೋಗಲಾರಿರಿ ಎಂದದ್ದು ಕೇವಲ ನಿಸರ್ಗದ ಅಭೇದ್ಯತೆಯ ಸಂಬಂಧದಲ್ಲಿ ಅಲ್ಲ. ಅರುಣಾಚಲ ನಿರ್ಭಂಧಿತ ರಾಜ್ಯ. ಒಳಕ್ಕೆ ಪ್ರವೇಶ ಸುಲಭವಲ್ಲ. ಗೋಹಾಟಿ…