ಅಯೋಧ್ಯಾ ಪ್ರಕಾಶನದ ೧೪ ನೇ ಪುಸ್ತಕವಾಗಿ ಹೊರಬಂದಿರುವ ‘ಗಣಿತಜ್ಞರ ರಸಪ್ರಸಂಗಗಳು' ಬರೆದಿರುವವರು ಸ್ವತಃ ಗಣಿತ ಬೋಧಕರಾದ ರೋಹಿತ್ ಚಕ್ರತೀರ್ಥ ಇವರು. ಗಣಿತ ಬಹುತೇಕ ಮಂದಿಗೆ ಕಬ್ಬಿಣದ ಕಡಲೆಯೇ. ಪಿಯುಸಿಯಿಂದ ಪದವಿಯವರೆಗೆ ನಾನೂ ಗಣಿತವನ್ನೇ ಒಂದು ವಿಷಯವಾಗಿ ಕಲಿತರೂ ನನಗಿನ್ನೂ ಗಣಿತ ಅರ್ಥವೇ ಆಗಿಲ್ಲ. ಇದು ನನ್ನ ವೈಯಕ್ತಿಕ ಸಮಸ್ಯೆ. ಆದರೆ ಗಣಿತದಲ್ಲಿ ಬರೆದದ್ದು ಸರಿಯಾದರೆ ನೂರಕ್ಕೆ ನೂರು ಅಂಕ ಗ್ಯಾರಂಟಿ ಎಂದು ಆಗ ಪ್ರಚಲಿತವಾಗಿದ್ದ ಮಾತು. (ಆದರೆ ಈಗ ಭಾಷಾ ವಿಷಯದಲ್ಲೂ ಶೇಕಡಾ ನೂರು ಅಂಕಗಳನ್ನು ಕೊಡುತ್ತಾರೆ). ಸುಮಾರು ೫೦ಕ್ಕೂ ಮಿಕ್ಕಿದ ಖ್ಯಾತ ಗಣಿತಜ್ಞರ ರಸನಿಮಿಷಗಳನ್ನು ಕಟ್ಟಿಕೊಡುವ ಕೆಲಸ ರೋಹಿತ್ ಮಾಡಿದ್ದಾರೆ. ಅವರು ಗಣಿತವನ್ನೇ ಬೋಧಿಸುವುದರಿಂದ ಈ ಕೆಲಸ ಅವರಿಗೆ ಸ್ವಲ್ಪ ಸುಲಭವಾಗಿರಬಹುದು.
ರೋಹಿತ್ ಅವರೇ ತಮ್ಮ ‘…