ಬಿಟ್ ಕಾಯಿನ್ ಕುರಿತ 'ನಿಗೂಢ ನಾಣ್ಯ' ಎಂಬ ರೋಚಕ ಕಾದಂಬರಿ ಬರೆದ ವಿಠಲ ಶೆಣೈ ಅವರ ಕೃತಿಯೇ ‘ತಾಳಿಕೋಟೆಯ ಕದನದಲ್ಲಿ’. ಈ ಕಾದಂಬರಿಯಲ್ಲಿ ಹಂಪಿಯ ದೇಗುಲಗಳೂ ಇವೆ, ಕೆಲವೊಂದು ಚಾರಿತ್ರಿಕ ಪಾತ್ರಗಳೂ ಜೀವಂತವಾಗಿವೆ. ವೈಕುಂಠರಾವ್ ಎಂಬ ವ್ಯಕ್ತಿ ತನ್ನ ಆತ್ಮೀಯ ಗೆಳೆಯ ವಿಶ್ವನಾಥನನ್ನು ಆಗುಂಬೆ ಘಾಟಿಯಲ್ಲಿ ಕಾರ್ ಅಪಘಾತವಾಗುವಂತೆ ಮಾಡಿ ಕೊಂದು ಬಿಡುವಲ್ಲಿಂದ ಪ್ರಾರಂಭವಾಗುವ ಪುಸ್ತಕವು ಒಂದು ರೀತಿಯಲ್ಲಿ ಪತ್ತೇದಾರಿ ಕಾದಂಬರಿಯಂತೆ ಓದಿಸಿಕೊಂಡು ಹೋಗುತ್ತದೆ. ಅನಿರೀಕ್ಷಿತ ತಿರುವುಗಳು ನಮ್ಮನ್ನು ಯಾವಾಗ ಪುಸ್ತಕದ ಕೊನೆಯ ಪುಟ ಬರುವುದೋ ಎಂಬ ಕಾತುರ ಮೂಡಿಸುತ್ತದೆ.
ಸಾಗರದಲ್ಲಿರುವ ವೈಕುಂಠ ರಾವ್ ಎಂಬ ಚರಿತ್ರೆ ಕಲಿಸುವ ಉಪನ್ಯಾಸಕ, ತನ್ನ ಪಾಠಗಳನ್ನು ವಿದ್ಯಾರ್ಥಿಗಳಿಗೆ…