ಪುಸ್ತಕ ಸಂಪದ

  •  

    “ಪ್ರತಿ ಮುಖದ ಹಿಂದೆ ಒಂದೊಂದು ಅಪ್ರತಿಮ ಲೋಕ,

    ಸ್ವಸಂಪೂರ್ಣ ಎಂದುಕೊಳ್ಳುತ್ತಲೇ ಒಂದನ್ನೊಂದು ಬಯಸಿ

    ಬೇಯುತ್ತಿರುವ ನಡುಗಡ್ಡೆಗಳೆ ಪ್ರತಿಯೊಂದು

    ಬದುಕಿಗೂ ಈ ಕರಿ ನೀರಲ್ಲಿ

    ಜನ್ಮಟಾಪು; ಜೈಲರನ ಮೇಲ್ವಿಚಾರಣೆಯಲ್ಲಿ ಆಗಾಗ

    ಅತ್ತಿತ್ತ ದೋಣಿ ಸಂಚಾರ, ಒಂದು ನಡುಗಡ್ಡೆಯಿಂದಿನ್ನೊಂದಕ್ಕೆ

    ಜಿಗಿದು ಹಾರಿ, ಈಜಾಡಿ ಪಾರಾಗಿ, ಬದುಕಿ ಉಳಿಯುವ ಬಂಟ

    ರಿದ್ದರೂ ಸಿಕ್ಕುವುದೆಲ್ಲ ಪರಕೀಯ. ಅಕಸ್ಮಾತ್ತಾಗಿ

    ತನ್ನ ಇನ್ನೊಂದರ್ಧ, ಎಲ್ಲಾದರೂ ಕ್ಷಣಾರ್ಧ

    ಸಿಕ್ಕಿದವನೆ ಕೃತಾರ್ಥ, ಭಾಗ್ಯವಂತ”.. (ಚಿಂತಾಮಣಿಯಲ್ಲಿ ಕಂಡ ಮುಖ- ಗೋಪಾಲಕೃಷ್ಣ ಅಡಿಗ)

    “ದ್ವೀಪವ ಬಯಸಿ...” ಎಂ.ಆರ್‍.ದತ್ತಾತ್ರಿಯವರ ಕಾದಂಬರಿಯನ್ನು ಓದುವಾಗ ಮತ್ತೆ ಮತ್ತೆ ಅಡಿಗರ ಈ ಸಾಲುಗಳು ನೆನಪಾದವು.…

  •  ಪುರಾಣಪುರುಷ ಶ್ರೀಕೃಷ್ಣನ ಕಥೆಯನ್ನು ತಮ್ಮ ಕಲ್ಪನೆಯಲ್ಲಿ ಮೂಡಿಸಿದ್ದಾರೆ ಶ್ರೀ ಮುನಿಷಿಯವರು ಇಂಗ್ಲೀಷ್ ಬಾಷೆಯಲ್ಲಿ ಅದನ್ನು ಕನ್ನಡಕ್ಕೆ ತಂದಿರುವರು ಸಿದ್ದವನಹಳ್ಳಿ ಕೃಷ್ಣ ಶರ್ಮರು. ಒಂಬತ್ತು ಪುಸ್ತಕಗಳ ಹತ್ತು ಬಾಗಗಳಲ್ಲಿ ಕತೆ ಸಾಗುತ್ತದೆ.  ಮೊದಲಿಗೆ ಕೃಷ್ಣ  ಹುಟ್ಟುವ ಮೊದಲಿನ ಸನ್ನಿವೇಶ ಆಗಿನ ರಾಜಕೀಯ ಸ್ಥಿತ್ಯಂತರ ಎಲ್ಲವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತ ಸಾಗುತ್ತಾರೆ ಲೇಖಕರು. ಮೂಲಕತೆಯಲ್ಲಿನ ಹಲವು ಅನುಮಾನಗಳಿಗೆ ಇಲ್ಲಿ ಉತ್ತರ ಸಿಗುತ್ತದೆ. ಕೃಷ್ಣನು ಚಿಕ್ಕಮಗುವಾಗಿರುವಾಗ ಪದೆ ಪದೆ ಅವನ ಮೇಲೆ ಆಕ್ರಮಣ ನಡೆಸುವ ಕಂಸನ ಕಡೆಯವರು ಪೂತನಿಯ ಮರಣದ ನಂತರ , ಪುನಃ ಕೃಷ್ಣ ಮದುರೆಗೆ ಬರುವವರೆಗು ಅವನನ್ನು ಕೊಲ್ಲಲ್ಲು ಯಾವ ಪ್ರಯತ್ನ ಸಹ ಮಾಡುವದಿಲ್ಲ ಅನ್ನುವದು ನನಗೆ ಎಂದಿಗು ಆಶ್ಚರ್ಯವೆನಿಸಿತ್ತು, ಹಾಗೆ ಮದುರೆಗೆ ಬಂದು ಅವನ…
  • ‘ಭೂಮಿಗೆ ನಮ್ಮ ಅವಶ್ಯಕತೆಗಳನ್ನು ಪೂರೈಸುವ ಶಕ್ತಿಯಿದೆ ದುರಾಶೆಗಳನ್ನಲ್ಲ’ ಕೇಳಿ ಕೇಳಿ ಕ್ಲೀಷೆಯಾಗಿರುವ ಮಾತು. ‘ಪರಿಸರ ಉಳಿಸಿ ಮರ ಗಿಡ ಬೆಳಸಿ’, ‘ಕಾಡಿದ್ದರೆ ನಾಡು ನಾಡಿದ್ದರೆ ನಾವು’.. ಇಂತಹ ಹತ್ತು ಹಲವು ಮಾತುಗಳನ್ನು ‘ಪರಿಸರ ದಿನ’ದ ಭಾಷಣಗಳಲ್ಲಿ ಬರಹಗಳಲ್ಲಿ ನೋಡುತ್ತಲೋ ಓದುತ್ತಲೋ ಕೇಳುತ್ತಲೋ ಇರುತ್ತೇವೆ. ಆದರೆ ನಮ್ಮಲ್ಲಿ ಎಷ್ಟು ಮಂದಿಗೆ ‘ಹೌದು ಪರಿಸರವನ್ನು ಉಳಿಸಿಕೊಳ್ಳಲು ನಾನು ಕೂಡ ಪ್ರಯತ್ನಪಡಬೇಕು’ ಎಂದು ಮನಸ್ಸು ಎಚ್ಚರಗೊಳ್ಳುತ್ತದೆ? ನಮ್ಮಿಂದಾಗಬಹುದಾದ್ದನ್ನು ‘ಅಯ್ಯೋ ಬಿಡಿ ನಾವೊಬ್ಬರು ಮಾಡಿದ ಮಾತ್ರಕ್ಕೆ ಎಲ್ಲಾ ಸರಿಹೋಗುತ್ತಾ?’ ಎನ್ನುವ ಸಿನಿಕತನ ಬಿಟ್ಟು ಮಾಡಲು ಸಾಧ್ಯವಾಗುತ್ತದೆ? ಸುತ್ತಲ ಬದುಕನ್ನು ಹಸನುಗೊಳಿಸಿದರೆ ನಮ್ಮ ಬದುಕು ಹಸನಾಗುತ್ತದೆ ಎಂದು ಪ್ರಯತ್ನಿಸುತ್ತಿರುವವರಿಂದಲೇ ನಮ್ಮ ಬದುಕು ಇಂದಿಗೂ…

  •  ನಮ್ಮ ಭಾರತೀಯ  ಸಂಸ್ಕೃತಿ  ಹೆಣ್ಣನ್ನು  ಪತಿವ್ರತೆ, ಸಹನಾಮೂರ್ತಿ,  ಕರ್ತವ್ಯ ನಿಷ್ಠೆ, ತಗ್ಗಿ ಬಗ್ಗಿ  ನಡೆಯೋಳು, ಇಡೀ ಸಂಸಾರದ ನೂಗವನ್ನು  ಹೊರುವವಳು, ಮುಂದೆ  ನಡೆಸುವವಳು ಎಂಬ   ಅರ್ಥ ಬರುವ  ಹಾಗೆ ಚಿತ್ರಿಸಿಬಿಟ್ಟಿದೆ.   ಚಿತ್ರಿಸಿ, ಪತ್ರಿಕೆಗಳಲ್ಲಿ  ಸಿನಿಮಾಗಳಲ್ಲಿ  ತೋರಿಸಿದ್ದ  ಮಾತ್ರಕ್ಕೆ  ಹಾಗೆ  ಇರಬೇಕೆಂದಿಲ್ಲ ..   ಇತ್ತೀಚಿನ  ಮಹಿಳೆಯ  ನಿಲುವೇ  ಬೇರೆಯದೇ  ಆಗಿದೆ..   ಗಂಡಿನ  ಸಮ  ಸಮಕ್ಕೆ  ನಿಂತು   ಸಂಸಾರದ  ಆದಾಯಕ್ಕೂ  ಕಾರಣ ಲಾಗಿದ್ದಾಳೆ ..  ಸೈನ್ಯದಲ್ಲಿ , ವಿಮಾನ   ಹಾರಾಡಿಸುವ ಕೆಲಸದಲ್ಲೂ  ಸಫಲ !!!  ಪಶ್ಚಿಮ ದೇಶಗಳಲ್ಲಿ  ಈ  ಭೇಧ  ಭಾವ  ಎಂದೂ  ಕಂಡೂ ಬoದಿಲ್ಲ ..  ಮಹಿಳೆಗೆ  ಸಮಾನತೆಯ  ಹಕ್ಕು  ಎಲ್ಲ  ಕ್ಷೇತ್ರಗಳಲ್ಲೂ !! ಅವಳ   ಆತ್ಮ ವಿಶ್ವಾಸಕ್ಕೆ  ಕಾರಣ  ಕೂಡ !!! 

     

  • “ಚೇಳು” ಇತ್ತೀಚಿನ ಕತೆಗಾರರಲ್ಲಿ ಮುಖ್ಯರಾದ ವಸುಧೇಂದ್ರರ ಕಥಾಸಂಕಲನ. ಇದಕ್ಕೆ ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ ಬಂದಿದೆ. ಇದರಲ್ಲಿ ಒಟ್ಟು ಏಳು ಕತೆಗಳಿವೆ. ವಸ್ತು ಹಾಗೂ ನಿರೂಪಣೆಯಲ್ಲಿ ಹೊಸತನವನ್ನು ತಮ್ಮ ಕತೆಗಳಲ್ಲಿ ತರುವ ವಸುಧೇಂದ್ರ ನಮ್ಮ ನಡುವಿನ ಮುಖ್ಯ ಕತೆಗಾರ. ಈ ಸಂಕಲನದ ಕತೆಗಳಲ್ಲಿ ಸಾಫ್ಟ್‍ವೇರ್‍ ಲೋಕದ ತಲ್ಲಣಗಳು, ಜಾಗತೀಕರಣದ ಪ್ರಭಾವಗಳು ಹೇಗೆ ಬದುಕನ್ನು ಆವರಿಸಿವೆ ಎಂಬುದನ್ನು ಕಟ್ಟಿಕೊಡುತ್ತಾರೆ.

    ಮೊದಲ ಕತೆ ‘ಚೇಳು’ ವೆಂಕಮ್ಮ ಎಂಬ ಹೆಣ್ಣೊಬ್ಬಳ ಬದುಕಿನ ಪಲ್ಲಟಗಳನ್ನು, ಪಾರಂಪರಿಕ ಜ್ಞಾನಗಳು ಜಾಗತೀಕರಣದ ಭರಾಟೆಯಲ್ಲಿ ಮೂಲೆಗುಂಪಾಗುವುದನ್ನು ಹೇಳುತ್ತವೆ. ಮದುವೆಯಾಗಿ ಕೆಲ ವರ್ಷಗಳಾದರೂ ಮಕ್ಕಳಾಗಲಿಲ್ಲವೆಂಬ ಕಾರಣಕ್ಕೆ ಅವಳ ಗಂಡ ಕೋಮಣ್ಣ ಹೇಳಿದ, ಮಾಡಿಸಿದ ವ್ರತ,ಪೂಜೆಗಳನ್ನೆಲ್ಲ ಮಾಡಿದರೂ…

  • ಕನ್ನಡ ಸಾಹಿತ್ಯದ ಮಟ್ಟಿಗೆ ಗಮನಾರ್ಹವಾದ ವಿಶೇಷ ಕೆಲಸವೊಂದನ್ನು ಈ ಪುಸ್ತಕದ ಮೂಲಕ ಸಾಧಿಸಿದ್ದಾರೆ ಶ್ರೀಮತಿ ಜಯಶ್ರೀ ಭಟ್ - ನಮಗೆ ಸಾಕಷ್ಟು ಅಪರಿಚಿತವಾದ, ಒಂದು ರೀತಿಯಲ್ಲಿ ಊಹಪೋಹದ ಮಟ್ಟದಲ್ಲಿ ಮಾತ್ರ ಅರಿವಿರುವ ಚೀಣಿ ಸಂಸ್ಖೃತಿಯ ಬೇರುಗಳನ್ನು ಅದರದೆ ಆದ ಸಸಿಗಳ ಬಾಯಿಂದ ಪರಿಚಯಿಸುವ ಮೂಲಕ. ಚೀಣಿ ಜೀವನದ ಕುರಿತು ನಮಗಿರುವ ಸೀಮಿತ ಅರಿವು, ಪರಿಜ್ಞಾನ, ಮತ್ತು ಗುರುತೆ ಸಿಗದಂತೆ ಬದಲಾಗಿ ಹೋದ ಈಗಿನ ಚೀನದ ಆರ್ಥಿಕ, ಸಾರ್ವಜನಿಕ, ಸಾಂಪ್ರದಾಯಿಕ ನೆಲೆಗಟ್ಟಿನಲ್ಲಿ ಕಣ್ಮರೆಯಾಗಿ, ಮುಚ್ಚಿದ ಬಾಗಿಲ ನೀತಿಯಿಂದ ಕಳೆದು / ಬದಲಾಗಿ ಹೋದ ಆಚಾರ, ವಿಚಾರ, ಸಂಪ್ರದಾಯಗಳ ತುಣುಕುಗಳು ಹೇರಳವಾಗಿ ಸಿಗುವ ಈ ಕಥಾನಕ ಆ ಮಟ್ಟಿಗೆ ಕನ್ನಡಕ್ಕೆ ವಿಶಿಷ್ಟ ಕೊಡುಗೆಯೆಂದೆ ಹೇಳಬೇಕು.
    ಇಡಿ ಕಥಾನಕದ ವೈಶಿಷ್ಟ್ಯವೆಂದರೆ ಆತ್ಮಕಥನದ ಹುರುಪಿನಲ್ಲಿ…

  • ನಾನು  ಇತ್ತೀಚಿಗೆ  ಓದಿದ  ಕಾದಂಬರಿ  S. L  ಭೈರಪ್ಪ ರವರ   ನಾಯಿ  ನೆರಳು  ಬಹಳ  ಹಿಡಿಸಿ ಬಿಟ್ಟಿತು.   ಅವರ  ಭಾಷ ಪಾಂಡಿತ್ಯ  ಓದುಗನನ್ನು  ಕಥೆಯಲ್ಲಿ  ಒಂದು  ಪಾತ್ರವಾಗಿಸಿಬಿಡುತ್ತೆ !!!  1 9 6 8  ರಲ್ಲಿ  ಬರೆದ ಪಾತ್ರಗಳು, ಊರಿನ  ವಿವರಣೆ ...  ನಾವು  ಈಗಿರುವ ಕಾಲ  ಪರಿಸ್ಥಿತಿಯನ್ನು  ಸಂಪೂರ್ಣವಾಗಿ ಮರೆಸಿ  ,  ನಮ್ಮನ್ನು  ಸಮಯದಲ್ಲಿ  ಹಿಂದಕ್ಕೆ  ಕರೆದುಕೊಂಡು  ಹೋಗುವುದರಲ್ಲಿ  ಸಂಶಯವೇ ಇಲ್ಲ..  ನಾಯಿ  ನೆರಳನ್ನು   ನಾನು  ಅರ್ಥ  ಮಾಡಿಕೊಂಡಿರುವ  ಪರಿಯನ್ನು  ನನ್ನ ಗೆಳೆಯರೊಡನೆ  ಹಂಚಿಕೊಳ್ಳುವ  ಆಸೆ !!!  

      ಕಥಾನಾಯಕ  ವಿಶ್ವ  ತನ್ನ  ಚಿಕ್ಕ ವಯಸ್ಸಿನಿಂದ  ತನಗೊಬ್ಬಳು  ಹೆಂಡತಿ ಮತ್ತು  ಒಂದು ವರ್ಷದ  ಗಂಡು ಮಗುವೊಂದಿದೆ  ಎಂದು  ಹೇಳುತ್ತಿರುತ್ತಾನೆ ..  ಮೊದ  ಮೊದಲು   ಮನೆಯವರು  ಅದನ್ನು  ಹಾಸ್ಯವಾಗಿ  …
  •  

    ಹೇಳತೇವ ಕೇಳ....     

    “ಮುಂದೊಂದು ದಿನ

    ಇಂತಹ ಸಂಚಿಕೆ ರೂಪಿಸುವ ಕೆಲಸ ಬಾರದಿರಲಿ.”

    ಅವಧಿಯ ಸಂಪಾದಕರಾದ ಜಿ.ಎನ್‍.ಮೋಹನ್‍ ಮುನ್ನುಡಿಯಲ್ಲಿ ಹೇಳಿರುವ ಮಾತಿದು. ಹೌದು ಈ ಪುಸ್ತಕವನ್ನು ಓದಿ ಮುಗಿಸಿದ ನಂತರ ಕಾಡುವ ಅಸಹನೀಯ ಮೌನದಲ್ಲಿ ಮನಸ್ಸು ಬಿಕ್ಕುತ್ತದೆ. ಇನ್ನಾದರೂ ‘ಈ ಜಗತ್ತು ಬದಲಾಗಬಾರದೇ..’ ಎನ್ನಿಸುತ್ತದೆ. ಇದರ ಸಂಪಾದಕಿ ಶ್ರೀಮತಿ. ಜಯಲಕ್ಷ್ಮಿ ಪಾಟೀಲ್‍ ಮತ್ತು ಇದರಲ್ಲಿನ ಲೇಖನಗಳ ಸಂಯೋಜಕಿ ಶ್ರೀಮತಿ ಎನ್‍. ಸಂಧ್ಯಾರಾಣಿ. ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ಪ್ರತಿಭಟನೆಯ ಸಂದರ್ಭದಲ್ಲಿ ಅವಧಿಯಲ್ಲಿ ಪ್ರಕಟವಾದ ಲೇಖನಗಳ ಸಂಗ್ರಹವಿದು. ಹಲವು ಮಂದಿ ಮಹಿಳೆಯರು ಬಚ್ಚಿಟ್ಟ ತಮ್ಮ ನೋವನ್ನು ಇಲ್ಲಿ ತೆರೆದಿದ್ದಾರೆ.

    ಇದರಲ್ಲಿ ‘ಹೀಗಾಯ್ತು.., ಬೇಡ.., ಬಿಕ್ಕು..,ಮತ್ತು ಬೆಳಕಿಗಾಗಿ…

  •  

    ಬೇಸಿಗೆಯ ಧಗೆಯಲ್ಲಿ ಮಳೆಹನಿ ಸಿಂಚನ..

    ತಾವು ಪ್ರೀತಿಸಿದವರಿಂದಲೇ ಪ್ರೀತಿ ಪಡೆದು ತಾವು ಬಯಸಿದಂತೆ ಬದುಕುವ ಅವಕಾಶ ಎಲ್ಲೋ ಕೆಲವರಿಗೆ ಸಿಗುವಂತದ್ದು.. ಅಂತಹ ಬದುಕನ್ನು ಪಡೆದ ರಾಜೇಶ್ವರಿ ತೇಜಸ್ವಿಯವರ  ಬದುಕಿನ ನೆನಪುಗಳ ಬುತ್ತಿ ‘ನನ್ನ ತೇಜಸ್ವಿ’.

    ತೇಜಸ್ವಿ ನಮ್ಮ ತಲೆಮಾರಿನ ಮಂದಿಗೆ ಹೀರೋನೇ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ನಾವುಗಳು ನಮ್ಮ ಮಕ್ಕಳಿಗೆ ಓದಿಸಲೇಬೇಕಾದ ಲೇಖಕರಲ್ಲಿ ಕೂಡ ತೇಜಸ್ವಿ ಬಹುಮುಖ್ಯರು. ಅವರ ‘ಪರಿಸರದ ಕಥೆ’ ಓದಿ ಹುಚ್ಚರಾದವರು ಅವರನ್ನು ಹುಡುಕಿ ಹೋದವರು ಅದೆಷ್ಟೋ ಮಂದಿ. ಅಂತಹವರಿಗೆ ಈ ಪುಸ್ತಕ ನಿಜಕ್ಕೂ ರಸಗವಳ.

    ಈ ಪುಸ್ತಕದಲ್ಲಿ ಏನಿದೆ? ಮೈಸೂರಿನ ಆ ಕಾಲದ ಕಾಲೇಜು ಕ್ಯಾಂಪಸ್‍, ಹಾಸ್ಟಲ್‍ಗಳು, ಕಾಲೇಜಿನ ಚಟುವಟಿಕೆಗಳು.. ಹುಡುಗರು ಹುಡುಗಿಯರು.. ಇದರ ನಡುವೆಯೇ…

  • ಬೇಸಿಗೆಯ ಧಗೆ.. ಹುಳಿಮಾವಿನ ಸಂಗ..

    ‘ನನ್ನ ಹೆಸರು ಇಂದಿರಾ.’     

    ಲಂಕೇಶರ ಮಡದಿ ಇಂದಿರಾ ಲಂಕೇಶರು ಬರೆದಿರುವ “ಹುಳಿಮಾವು ಮತ್ತು ನಾನು” ಪುಸ್ತಕದ ಮೊದಲ ಸಾಲಿದು. ಮೊದಲಿಗೆ ಲಂಕೇಶ್ ಪತ್ರಿಕೆಯಲ್ಲಿ ಅಂಕಣವಾಗಿ ಪ್ರಕಟಗೊಂಡಿದ್ದು ಈ ವರ್ಷದ ಲಂಕೇಶರ ಹುಟ್ಟುಹಬ್ಬದ ಸಂದರ್ಭದಲ್ಲಿ ಪುಸ್ತಕ ರೂಪದಲ್ಲಿ ಓದುಗರ ಕೈ ಸೇರಿತು.

    ಲಂಕೇಶ್ ಎಂಬ ದೈತ್ಯನೊಂದಿಗೆ ಒಡನಾಡಿದ, ಅವರ ಸಂಗಾತಿಯಾಗಿ ಕಂಡುಂಡ ಬದುಕಿನ ಏಳುಬೀಳುಗಳನ್ನು ಇಂದಿರಾ ಅವರು ತಣ್ಣನೆಯ ಧ್ವನಿಯಲ್ಲಿ ನಿರೂಪಿಸುತ್ತಾರೆ. ಲಂಕೇಶರಂತಹ ಅಸಾಧಾರಣ ಪ್ರತಿಭಾವಂತ, ವಿಕ್ಷಿಪ್ತ ಮನಸ್ಥಿತಿಯ ಕಲೆಗಾರನೊಂದಿಗೆ ಬದುಕಿನ 40 ಮಳೆಗಾಲಗಳನ್ನು ಕಳೆದ ಬಗೆಯನ್ನು ಅವರು ತೆರೆದಿಡುವ ಬಗೆ ಮನಮುಟ್ಟುವಂತಿದೆ.

    ಪುಸ್ತಕವನ್ನು ಓದುತ್ತಾ ಹೋದ ಹಾಗೆ ಲಂಕೇಶರ ವ್ಯಕ್ತಿತ್ವದ…