ನಾಡಿನ ಖ್ಯಾತ ಸಾಹಿತಿವರೇಣ್ಯರಾದವರಿಂದ ರಚಿಸಲ್ಪಟ್ಟ ೬೪ ಶ್ರೇಷ್ಠ ಕವನಗಳು, ಕವಿಕಾವ್ಯ ಪರಿಚಯ ಇವುಗಳನ್ನು ಒಳಗೊಂಡ ಹೊತ್ತಗೆಯೇ ‘ನನ್ನದು ಈ ಕನ್ನಡ ನಾಡು'. ಕನ್ನಡ ನಾಡು ನುಡಿಯ ಬಗ್ಗೆ ಯುವಜನರಲ್ಲಿ ಆಸಕ್ತಿ ಮೂಡಿಸಬೇಕೆಂಬ ಉದ್ದೇಶದಿಂದ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹೊರತಂದ ಕವನಗಳ ಗುಚ್ಛವಿದು. ಮುನ್ನುಡಿ,ಹಿನ್ನುಡಿ ಎಂದು ಪ್ರತ್ಯೇಕವಾಗಿ ಇಲ್ಲ. ಪ್ರಧಾನ ಸಂಪಾದಕರಾದ ಬಿ.ಎಂ.ಇದಿನಬ್ಬ ಇವರೇ ಪುಸ್ತಕವನ್ನು ಹೊರತಂದ ಆಶಯವನ್ನು ಬರೆದಿರುತ್ತಾರೆ.
ನಮ್ಮ ಕನ್ನಡ ನಾಡು ನುಡಿಗೆ ಈಗ ಒದಗಿರುವ ಅವಸ್ಥೆಯನ್ನು ಸರಿಪಡಿಸುವಲ್ಲಿ ಒಂದಷ್ಟು ಕವನಗಳು ಸಹಕಾರಿಯಾಗಬಹುದೆಂಬ ಆಶಯ ಸಂಪಾದಕರದು. ಪಂಜೆ ಮಂಗೇಶರಾಯರ ಬಂತ್ಯೆ ಬಂತೈ ತೆಂಕಣಗಾಳಿ, ಬೆನಗಲ್ ರಾಮರಾವ್ ಅವರ ಕನ್ನಡಾಂಬೆಯ…