ರವಿ ಬೆಳಗೆರೆಯವರ ನಿಧನದ ಬಳಿಕ ಹೊರಬಂದ ಕೆಲವು ಪುಸ್ತಕಗಳಲ್ಲಿ ‘ರೇಖಾ’ ಪುಸ್ತಕವೂ ಒಂದು. ಬಹಳ ಸಮಯದಿಂದ ಹೊರಬರಲು ಕಾಯುತ್ತಿದ್ದ ಪುಸ್ತಕವು ಅವರ ನಿಧನದ ನಂತರ ಬೆಳಕು ಕಾಣುತ್ತಿರುವುದು ವಿಪರ್ಯಾಸವೇ ಸರಿ. ಆದರೂ ರವಿ ಬೆಳಗೆರೆಯವರು ರೇಖಾಳ ಜೀವನದ ಬಗ್ಗೆ ಬರೆಯಲು ಮಾಡಿದ ಸಿದ್ಧತೆಗಳನ್ನು ಮೆಚ್ಚಲೇ ಬೇಕು. ಸಾಮಾನ್ಯ ಜನರಿಗೆ ತಿಳಿಯದೇ ಇರುವ ಹಲವಾರು ಸಂಗತಿಗಳು ಹಾಗೂ ಭಾವಚಿತ್ರಗಳು ಈ ಪುಸ್ತಕದಲ್ಲಿವೆ.
ರೇಖಾ ೧೯೫೪ರಲ್ಲಿ ತಮಿಳು ಚಿತ್ರ ರಂಗದ ಆರಾಧ್ಯ ದೈವವಾಗಿದ್ದ ಜೆಮಿನಿ ಗಣೇಶನ್ ಮತ್ತು ತಮಿಳು ನಟಿ ಪುಷ್ಪವಲ್ಲಿಯ ಕೂಸಾಗಿ ಹುಟ್ಟಿದವಳು ರೇಖಾ. ಪುಷ್ಪವಲ್ಲಿಯನ್ನು ಜೆಮಿನಿ ಗಣೇಶನ್ ಅಧಿಕೃತವಾಗಿಯೇನೂ ಮದುವೆಯಾಗಿರಲಿಲ್ಲ. ಅವನಿಗೆ ಆಗಲೇ ಮದುವೆಯಾಗಿ ಮಕ್ಕಳಿದ್ದವು.…