ಮಹಿಳೆಯ ಬದುಕಿನ ವಿವಿಧ ಮುಖಗಳನ್ನು ಹಾಗೂ ಭಾವಲೋಕದ ವಿವಿಧ ಬಣ್ಣಗಳನ್ನು ಚಿತ್ರಿಸುವ ಹದಿಮೂರು ಕತೆಗಳು ಸುಮಂಗಲಾ ಅವರ ಈ ಕಥಾ ಸಂಕಲನದಲ್ಲಿವೆ. “ಮುತ್ತಿನ ಬುಗುಡಿ” ಎಂಬ ಮೊದಲ ಕತೆ, ತನ್ನ ಕೊನೆಯ ದಿನಗಳಲ್ಲಿ ಕ್ಯಾನ್ಸರಿನಿಂದ ಜರ್ಝರಿತಳಾಗುವ ಅಜ್ಜಿಯೊಬ್ಬಳದು. ತನ್ನ ಅಂತ್ಯ ಸಮೀಪಿಸುತ್ತಿದ್ದಂತೆ, ಬದುಕಿನುದ್ದಕ್ಕೂ ತನ್ನ ಕಿವಿಯಲ್ಲಿದ್ದ ಮುತ್ತಿನ ಬುಗುಡಿಯನ್ನು ಅಚಾನಕ್ಕಾಗಿ ಎರಡನೆಯ ಮಗನ ಸ್ನೇಹಿತೆಗೆ ದಾನ ಮಾಡ್ತಾಳೆ. ಮೊದಲ ಸೊಸೆಗೆ ಅಥವಾ ಎರಡನೇ ಸೊಸೆಗೆ ಕೊಡಬಹುದಾಗಿತ್ತು. ಈ ಕ್ರಿಯೆಯ ಜಿಜ್ನಾಸೆ ಮತ್ತು ಆಕೆಯ ಮರಣಾ ನಂತರದ ಘಟನಾವಳಿಗಳು ಕತೆಯ ಹೂರಣ.
ಎರಡನೇ ಕತೆ ಸಂಕಲನದ ಶೀರ್ಷಿಕೆ “ಕಾಲಿಟ್ಟಲ್ಲಿ ಕಾಲುದಾರಿ”. ಕೆಲವು ದಿನಗಳ ರಜೆಯಲ್ಲಿ ದೂರದೂರಿನಿಂದ ತನ್ನೂರಿಗೆ ಮರಳಿದ ಯುವತಿ ತೆರೆದಿಡುವ ಕಥನ. ಅಲ್ಲಿ, ಅಪ್ಪ ಮತ್ತು…