‘ಕಪಿಧ್ವಜ ಮೊದಲಾದ ಕೆಲವು ಸತ್ಯಸಾಯೀ ಕತೆಗಳು' ಈ ಕೃತಿಯನ್ನು ರಚಿಸಿದವರು ಖ್ಯಾತ ಸಾಹಿತಿ ಜಿ.ಪಿ.ರಾಜರತ್ನಂ ಅವರು. ಇವರು ಮಕ್ಕಳ ಸಾಹಿತಿ ಎಂದೂ ಖ್ಯಾತಿಯನ್ನು ಪಡೆದಿದ್ದಾರೆ. ಭಗವಾನ್ ಶ್ರೀ ಸತ್ಯಸಾಯಿಬಾಬಾ ಅವರ ‘Sathya Sai Speaks’ ಸಂಪುಟಗಳಿಂದ ಈ ಕತೆಗಳನ್ನು ಆಯ್ದುಕೊಳ್ಳಲಾಗಿದೆ. ಈ ಕತೆಗಳು ‘ಸುಧಾ’ ಹಾಗೂ ‘ಮಯೂರ' ಪತ್ರಿಕೆಗಳಲ್ಲಿ ಈಗಾಗಲೇ ಪ್ರಕಟವಾಗಿವೆ.
ಕೃತಿಯ ಬಗ್ಗೆ ಖ್ಯಾತ ಸಾಹಿತಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಅವರು ತಮ್ಮ ಬೆನ್ನುಡಿಯಲ್ಲಿ “ತಮ್ಮ ಅನ್ಯದುರ್ಲಭ ವ್ಯಕ್ತಿತ್ವ ಮತ್ತು ವೈವಿಧ್ಯತರ ಬರವಣಿಗೆಯಿಂದ ಕನ್ನಡ ಸಾಹಿತ್ಯಕ್ಕೆ ಬೆಲೆ ಬಾಳುವ ಬಳುವಳಿಯನ್ನು ಓದಿಸಿರುವ ಮಹನೀಯ ಚೇತನ ಡಾ. ಜಿ.ಪಿ.ರಾಜರತ್ನಂ. ಸುದೀರ್ಘ ಕಾಲದ ಬಹು ವಿಫುಲ ಬರಹಗಳ…