ಅಂಕಣಕಾರ, ಲೇಖಕ ರೋಹಿತ್ ಚಕ್ರತೀರ್ಥ ಇವರು ವಿಶ್ವವಾಣಿ ಪತ್ರಿಕೆಯಲ್ಲಿ ‘ಚಕ್ರವ್ಯೂಹ' ಎಂಬ ಅಂಕಣವನ್ನು ಬರೆಯುತ್ತಿದ್ದರು. ಆ ಅಂಕಣ ಬರಹಗಳಿಂದ ಆಯ್ದ ಕೆಲವು ವ್ಯಕ್ತಿಚಿತ್ರಗಳನ್ನು ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ. ರೋಹಿತ್ ಅವರ ಬರಹಗಳು ಸಾಕಷ್ಟು ಅಧ್ಯಯನ ಮಾಡಿ ಬರೆದವುಗಳಾಗಿರುತ್ತವೆ. ಏಕೆಂದರೆ ವ್ಯಕ್ತಿ ಚಿತ್ರಗಳನ್ನು ರೂಪಿಸುವಾಗ ಅವರ ಬಗ್ಗೆ ನಿಖರವಾದ ದಾಖಲೆಗಳಿರುವುದು ಅತ್ಯಂತ ಅವಶ್ಯಕ. ಅಯೋಧ್ಯಾ ಪ್ರಕಾಶನದವರು ಈ ಪುಸ್ತಕದ ಜೊತೆಗೆ ಇನ್ನೊಂದು ಪುಸ್ತಕವನ್ನೂ ಹೊರತಂದಿದ್ದಾರೆ. ಅದರ ಹೆಸರು ಗಂಧದ ಮಾಲೆ. ಅವೂ ವ್ಯಕ್ತಿ ಚಿತ್ರಗಳದ್ದೇ ಕಥನ.
ಪುಸ್ತಕದ ಬೆನ್ನುಡಿಯಲ್ಲಿ ಬರೆದ ವಾಕ್ಯಗಳು ಹೀಗಿವೆ ‘ಕಾಲೇಜು ಶಿಕ್ಷಣ ಪಡೆದು ಯಾವುದಾದರೂ ದೊಡ್ಡ ಉದ್ಯೋಗ ಹಿಡಿದು ತನ್ನ ಮಗ ಲಕ್ಷಾಂತರ ರೂಪಾಯಿ ಸಂಪಾದಿಸಬೇಕೆಂದು ತಂದೆ ಅತ್ತ…