ಪುಸ್ತಕ ಸಂಪದ

  • Unaccustomed Earth ಹೆಸರಿನ ನೀಳ್ಗಥೆಗಳ ಸಂಕಲನ ಹೊರಬಿದ್ದಿದೆ. ಮನುಷ್ಯ ಸಂಬಂಧಗಳು, ಅವನ ಭಾವನೆಗಳು ಕ್ರಮೇಣ ಅರ್ಥಕಳೆದುಕೊಳ್ಳುವುದನ್ನು, ಸಡಿಲಗೊಳ್ಳುವುದನ್ನು ಮೌನವಾದ ತಲ್ಲಣಗಳಲ್ಲಿ ಗುರುತಿಸುತ್ತಲೇ ಅವುಗಳಿಂದ ಆತ ಬಿಡುಗಡೆ ಪಡೆಯುವ ಹಂತದಲ್ಲಿ ಅಥವಾ ಬಿಡುಗಡೆ ಪಡೆದ ನಂತರ ಉಳಿಯುವ ಶಿಲ್ಕು ಏನಿದೆ ಅದರಲ್ಲಿ ಆ ಸಂಬಂಧಗಳ, ಭಾವನೆಗಳ ಪ್ರಾಮಾಣಿಕತೆಯನ್ನು ಅರಸುವ ಕತೆಗಳು, ಬೇರೆ ಹೊಸ ಸಂಬಂಧದ ಹುರುಪಿನ ಆಳದಲ್ಲಿ ಹಳೆಯ ಸಂಬಂಧದ ನೆರಳುಗಳನ್ನು ಕಾಣುವ ಕಥೆಗಳು, ನಡುವಯಸ್ಸಿನಲ್ಲಿ ಸಂಬಂಧಗಳು ಪಡೆದುಕೊಂಡ ಅನಿವಾರ್ಯ ಆಕಾರ ವಿಕಾರಗಳನ್ನು ಮೌನವಾಗಿ ಚಿತ್ರಿಸುತ್ತ ಅವರ ಅಥವಾ ಎಳೆಯರ ಹೊಸ ಸಂಬಂಧಗಳನ್ನು ನಿರೂಪಿಸುವ ಕಥೆಗಳು ಇಲ್ಲಿವೆ. ಹೆಚ್ಚಾಗಿ ಇಲ್ಲಿ ಗಂಡು ಹೆಣ್ಣು ಸಂಬಂಧಗಳೇ ಪ್ರಾಮುಖ್ಯ ಪಡೆದಂತಿದೆಯಾದರೂ ತಂದೆ ಮಗಳು, ತಾಯಿ…

  • ಕೃತಿ: ‘ತಲೆಮಾರು’ 

    ಬಂಜಗೆರೆಯವರು ಅನುವಾದಿಸಿದ ಅಕ್ಸರ್ ಹೇಲಿಯ ವಿಶ್ವವಿಖ್ಯಾತ ಕಾದಂಬರಿ ರೂಟ್ಸ್. ತಲೆಮಾರು ಎನ್ನುವ ಹೆಸರಿನಲ್ಲಿ ಈ ಸಂಗ್ರಹಾನುವಾದ ಪ್ರಕಟವಾದದ್ದು 2003ರಲ್ಲಿ. ರೂಟ್ಸ್ ಹೇಲಿಯ ಕುಟುಂಬ ಚರಿತ್ರೆಯ ದಾಖಲೆ. 1976ರಲ್ಲಿ ಪ್ರಕಟವಾದದ್ದು. ಇದು ಮುವ್ವತ್ತೇಳು ಭಾಷೆಗಳಿಗೆ ಅನುವಾದಗೊಂಡಿದೆಯಂತೆ. ಇದಕ್ಕೆ ಮಿಲಿಯಗಟ್ಟಲೆ ಪ್ರತಿಗಳ ಮಾರಾಟದ ದಾಖಲೆಯಿದೆ. ಕಿರು ಧಾರಾವಾಹಿಯಾಗಿ ಟಿವಿಯಲ್ಲಿ ಪ್ರಸಾರವಾದಾಗ ಸುಮಾರು ನೂರ ಮೂವತ್ತು ಮಿಲಿಯನ್ ಜನ ವೀಕ್ಷಿಸಿದರೆಂದು ಅಂದಾಜು.

    ಯಾವಾಗಲೂ ಚರಿತ್ರೆಯನ್ನು ಬರೆಯುವವರು ಗೆದ್ದ ಜನ. ಸೋತವರಿಗೆ ಚರಿತ್ರೆಯಿಲ್ಲ ಎನ್ನುತ್ತಾರೆ ಜಿ.ರಾಜಶೇಖರ. ಮೇಲೆ ಹೇಳಿದ ಪುಸ್ತಕಗಳು ಸೋತವರ ಚರಿತ್ರೆ.

    ಬಂಜಗೆರೆಯವರು ಈಚೆಗೆ ಕೆನ್ಯಾದ ಕೆಲವು ಕತೆಗಳನ್ನು ಕೂಡ ಕನ್ನಡಕ್ಕೆ…

  • ನಮ್ಮ ಅತ್ಯುತ್ತಮ ಕಥೆಗಾರರಲ್ಲಿ ಒಬ್ಬರೆಂದು ಈಗಾಗಲೇ ಗುರುತಿಸಿಕೊಂಡಿರುವ ಗೋಪಾಲಕೃಷ್ಣ ಪೈಯವರು ನಿಜಕ್ಕೂ ಕೆಲವು ಒಳ್ಳೊಳ್ಳೆಯ ಚೀನೀ ಕಥೆಗಳನ್ನು ಆಯ್ದು ಅನುವಾದಿಸಿಕೊಟ್ಟಿದ್ದಾರೆ. ಈ ಸಂಕಲನದಲ್ಲಿರುವ ಒಟ್ಟು ಹದಿನಾರು ಕಥೆಗಳಲ್ಲಿ ಒಂದೆರಡನ್ನು ಬಿಟ್ಟರೆ ಉಳಿದ ಎಲ್ಲಾ ಕಥೆಗಳೂ ತಮ್ಮದೇ ಆದ ಒಂದು ಗುಂಗು ಆವರಿಸುವಂತೆ ಮಾಡುವಲ್ಲಿ, ನಮ್ಮ ಒಳಗನ್ನು ತಟ್ಟುವಲ್ಲಿ, ಮತ್ತೆ ನೆನೆದಾಗ ವಾಹ್ ಅನಿಸುವಂತೆ ಮಾಡುವಲ್ಲಿ ಸಫಲವಾಗಿವೆ. ಈ ಎಲ್ಲ ಅಂಶಗಳಿಗಾಗಿ ನಾವು ಮೊದಲು ಅಭಿನಂದಿಸಬೇಕಾದ್ದು ಪೈಯವರನ್ನೆ. ಅವರ ಅನುವಾದ ಅಷ್ಟು ಸೊಗಸಾಗಿದೆ. ಅನುವಾದ ಅನಿಸದ ಹಾಗಿದೆ. ಈ ಸಂಕಲನದ ಪಾತ್ರಗಳು ಬಹುಕಾಲ ಮನಸ್ಸಿನಲ್ಲಿ ಉಳಿದು ನಮ್ಮ ನಿಮ್ಮ ನಡುವಿನ ವ್ಯಕ್ತಿಗಳಾಗಿ ಬಿಡುವುದು ಈ ಸಂಕಲನದ ಬಹುಮುಖ್ಯ ಸಾಧನೆ.

    ಪುಟಗಳು 248+xiv

  • ಇದೊಂದು ಪುಟ್ಟ ಪುಸ್ತಕ. ಐವತ್ತು ಅರವತ್ತು ಪುಟಗಳಲ್ಲಿ ಒಂದೆರಡನ್ನು ಬಿಟ್ಟರೆ ಉಳಿದವೆಲ್ಲ ಪುಟ್ಟ ಪುಟ್ಟ ಕಥೆಗಳೇ. ಈ ಪುಸ್ತಕ ಕೂಡ ಸಾಹಿತ್ಯದ ವಲಯದಲ್ಲಿ ಪ್ರಚಲಿತವಿರುವ ಸದ್ದುಗದ್ದಲ ಎಬ್ಬಿಸಿದಂತಿಲ್ಲ. ಅದೇ ರೀತಿ ತಣ್ಣಗೇ ಮನಸ್ಸನ್ನು ಆವರಿಸುವ ಇಲ್ಲಿನ ಏಳು ಕಥೆಗಳು ನಮ್ಮನ್ನು ನಿಜಕ್ಕೂ ಚಕಿತಗೊಳಿಸುತ್ತವೆ. ಇಲ್ಲಿನ ಕತೆಗಳ ಹಂದರ, ಆಪ್ತ ನಿರೂಪಣೆ, ಜಾಣತನವನ್ನು ಮರೆಮಾಚದ ತಾಂತ್ರಿಕ ಕಲೆಗಾರಿಕೆ, ಸಹಜವಾಗಿ ಒಂದು ವಾತಾವರಣವನ್ನು ತನ್ನ ಕತೆಯ ಸುತ್ತ ನಿರ್ಮಿಸಿಕೊಳ್ಳುವ ಸರಳ ಶೈಲಿ, ಎಲ್ಲವನ್ನೂ ಮೀರಿಸುವ ಮಾನವೀಯ ಕಳಕಳಿಯ ತುಡಿತ ಯಾರನ್ನೂ ಸೆಳೆಯುವಂತಿವೆ. ಈ ಪುಸ್ತಕದ ಹೆಸರೇ ಮುದ್ದಾಗಿದೆ, ಬಾಳೆಗಿಡ ಗೊನೆಹಾಕಿತು! ಕತೆಗಾರ ಬಿ.ಎಂ.ಬಶೀರ್.

  • ಜರ್ಮನ್ ಕಾದಂಬರಿಕಾರ ಹರ್ಮನ್ ಹೆಸ್ ಬರೆದ ನಾರ್ಸಿಸಸ್ ಮತ್ತು ಗೋಲ್ಡಮಂಡ್ (ಇಂಗ್ಲೀಷಿಗೆ ಉರ್ಸುಲ್ ಮೊಲಿನಾರೊ, ಕನ್ನಡಕ್ಕೆ ಡಿ. ಆರ್. ಮಿರ್ಜಿ) ಒಂದು ಉತ್ತಮ ಪುಸ್ತಕ. ಕಾದಂಬರಿಯ ನಡುನಡುವೆ ನಡುನಡುವೆ ನಮ್ಮ ಕಂಬಾರರ (ಚಕೋರಿ, ಶಿಖರಸೂರ್ಯ) ಮಾತೃಪರಂಪರೆ, ಪಿತೃಪರಂಪರೆಯ ನೆನಪಾದರೆ ಅಚ್ಚರಿಯಿಲ್ಲ!

    ಅನುವಾದ ಸಿಬಿಲ್ ಕಾದಂಬರಿಯಷ್ಟು ಕಲಾತ್ಮಕವಾಗಿದೆ ಅನಿಸುವುದಿಲ್ಲ ನಿಜ. ಆದರೆ ಡಿ.ಆರ್.ಮಿರ್ಜಿಯವರು ಕೃತಿಯ ಸೊಗಡನ್ನು ಉಳಿಸಿಕೊಡಲು ವಹಿಸಿದ ಶ್ರಮ ಎದ್ದು ಕಾಣುತ್ತದೆ. 1946ರ ನೊಬೆಲ್ ಪಾರಿತೋಷಕ ವಿಜೇತ ಕೃತಿಯನ್ನು ಐಬಿಎಚ್ ನವರು ಪ್ರಕಟಿಸಿದ್ದಾರೆ. ಇನ್ನೂರ ತೊಂಭತ್ತನಾಲ್ಕು ಪುಟಗಳ ಈ ಕಾದಂಬರಿಯ ಬೆಲೆ ನೂರ ಎಂಭತ್ತು ರೂಪಾಯಿಗಳು.

    ಅನೇಕ ಒಳನೋಟಗಳಿಂದ ಬದುಕನ್ನು ಕೆಣಕುವ ಈ ಕೃತಿ ಓದಿ ಮುಗಿದ ಮೇಲೂ ಕಾಡಬಲ್ಲಷ್ಟು…

  • ಸಿ.ಎನ್ ರಾಮಚಂದ್ರರ ಮೊತ್ತ ಮತ್ತು ಇತರ ಕಥೆಗಳು ಸಂಕಲನದಲ್ಲಿ ಒಟ್ಟು ಹತ್ತು ಕಥೆಗಳಿವೆ. ತೀರ ಆಪ್ತವಾದ ಧಾಟಿಯಲ್ಲಿ, ಸ್ವಗತದ ವಿನಯವಂತಿಕೆಯನ್ನು ಪಡೆದಿರುವ ಈ ಕಥೆಗಳು ಅದೇ ಕಾರಣಕ್ಕೆ ಓದಿಗೆ ಒಂದು ಬಗೆಯ ಆಹ್ವಾನವನ್ನು ನೀಡುವಂತಿವೆ.

    ಕೃತಿ: ಮೊತ್ತ ಮತ್ತು ಇತರ ಕಥೆಗಳು(ಕಥಾ ಸಂಕಲನ)

    ಪುಟ ಸಂಖ್ಯೆ: 120 

    (ಶ್ರೀ ಮಹಾಬಲಮೂರ್ತಿ ಕೂಡ್ಲೆಕೆರೆಯವರ "ಒಂದಲ್ಲಾ ಒಂದೂರಿನಲ್ಲಿ" ಹೆಸರಿನ ಕಥೆಗಳಿಗಾಗಿಯೇ ಇರುವ ಹೊಸ ಪತ್ರಿಕೆಯಲ್ಲಿ ಪ್ರಕಟಿತ ಲೇಖನದ ಆಯ್ದ ಭಾಗ.)

  • ಪ್ರಹ್ಲಾದ ಅಗಸನಕಟ್ಟೆಯವರ `ಮನದ ಮುಂದಣ ಮಾಯೆ' ಸಂಕಲನಕ್ಕೆ ಸಾಹಿತ್ಯ ಅಕೆಡಮಿಯ ಪುರಸ್ಕಾರ ಸಂದಿದೆ. ಈ ಸಂಕಲನದಲ್ಲಿ ಒಟ್ಟು ಹನ್ನೆರಡು ಕಥೆಗಳಿವೆ. ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘ ಹೊರತಂದಿದೆ.

    ಅಗಸನಕಟ್ಟೆಯವರ ಕಥೆಗಳ ಓದು ಒಂದು ಚೇತೋಹಾರಿ ಅನುಭವವನ್ನು ನೀಡುವ ಕಸು ಹೊಂದಿವೆ. ಇನ್ನಷ್ಟು ಮತ್ತಷ್ಟು ಇಂಥ ಕಥೆಗಳನ್ನು ಓದುವ ಆಸೆಯನ್ನು ಇವು ಹುಟ್ಟಿಸುತ್ತವೆ. ಇಲ್ಲಿನ ಪ್ರತಿಯೊಂದು ಕಥೆಯೂ ನಮಗೆ ಯಾವುದೋ ಹೊಸ ಒಳನೋಟ, ಜೀವನ ದರ್ಶನ, ಬದುಕಿಗೆ ಒಂದು ಕಾಣ್ಕೆ ನೀಡುತ್ತವೆ ಎನ್ನಲಾಗದು. ಆದರೆ ಈ ಓದು ಕೊಡುವ ಖುಶಿ ಕೇವಲ ಮನರಂಜನೆಯದ್ದಲ್ಲ. ಅದು ನಿರ್ಮಿಸುವ ಒಂದು ವಾತಾವರಣ, ಅವು ತೆರೆದು ತೋರಿಸುವ ಒಂದು ಸಹಜ ಬದುಕು, ಥಟ್ಟನೇ ಅಪ್ತವಾಗುವ ಅವರ ನಿರೂಪಣಾ ವಿಧಾನ, ನಡುನಡುವೆ ಬರುವ ಅನನ್ಯವಾದ ಕೆಲವು ಅಪರೂಪದ…

  • ಕೇಶವ ಮಳಗಿಯವರ ನೇರಳೆ ಮರ ಒಂದು ವಿಶಿಷ್ಟ ಕಥಾನಕ! ಒಬ್ಬ ಬರಹಗಾರನ ತಳಮಳಗಳನ್ನು ವಯಸ್ಸಿನ ಹಲವು ಹಂತಗಳಲ್ಲಿ, ಬದುಕಿನ ಹಲವು ತಿರುವುಗಳಲ್ಲಿ ಮತ್ತು ಮನಸ್ಸಿನ ಹಲವು ಪಾತಳಿಗಳಲ್ಲಿ ಅವು ದಾಖಲಾಗುವ ವಿಸ್ಮಯವನ್ನು, ದಾಖಲಾಗುತ್ತ ಅವು ಮಾಡುವ ಚಮತ್ಕಾರವನ್ನು ಮಳಗಿಯವರು ಅಕ್ಷರಗಳಲ್ಲಿ ಹಿಡಿದುಕೊಡಲು ಇಲ್ಲಿ ಪ್ರಯತ್ನಿಸಿದ್ದಾರೆ. ಅನುಭವವೊಂದು ಬರಹಗಾರನನ್ನು ಕಾಡುತ್ತ, ತಟ್ಟುತ್ತ, ತಡವುತ್ತ, ತದುಕುತ್ತ, ಸಂತೈಸುತ್ತ, ಪೊರೆಯುತ್ತ, ತೊರೆಯುತ್ತ, ತಲ್ಲಣಗಳಿಗೆ ನೂಕುತ್ತ ಮತ್ತು ಕೈಹಿಡಿದೆತ್ತುತ್ತ ಕಥೆಗಾರನನ್ನು ಬೆಳೆಸುವ ಬಗೆಯೇ ವಿಲಕ್ಷಣವಾದದ್ದು. ಬರಹಗಾರನ ಸೂಕ್ಷ್ಮಪ್ರಜ್ಞ್ಮೆ ಅದನ್ನು ಗಮನಿಸುವ ಬಗೆ, ಅದಕ್ಕೆ ಸ್ಪಂದಿಸುವ ಬಗೆ ಮತ್ತು ಅದೆಲ್ಲ ತನ್ನ ಮೇಲೆ ಉಂಟು ಮಾಡುತ್ತಿರುವುದನ್ನು ಅರ್ಥೈಸಿಕೊಳ್ಳುತ್ತ, ಮುಂದೆ ತಾನು ಅವನ್ನು…

  • ಸುನೀತಾಗೆ ಮಲ್ಲಿಗೆ ಎಂದರೆ ಇಷ್ಟ (ಕಥಾ ಸಂಕಲನ)

    ಸುಂದರ ಪ್ರಕಾಶನ `ಚಿತ್ರಶ್ರೀ', 43, ಕಲಾಮಂದಿರ, 5ನೆಯ ಅಡ್ಡರಸ್ತೆ ಅ.ನ.ಸುಬ್ಬರಾವ್ ರಸ್ತೆ, ಹನುಮಂತನಗರ, ಬೆಂಗಳೂರು - 560 019

    ಪುಟಗಳು:105+6

    ಇದು ಭಾಸ್ಕರ ಹೆಗಡೆಯವರ ಮೊದಲ ಕಥಾಸಂಕಲನ. ಇಲ್ಲಿನ ಹತ್ತೂ ಕಥೆಗಳಲ್ಲಿನ ಸಮಾನ ಅಂಶ ಯಾವುದು ಎಂದು ಯೋಚಿಸಿದರೆ ಮನುಷ್ಯನ ಆಳದಲ್ಲಿ ಹುದುಗಿರುವ ತಣ್ಣನೆಯ ಕ್ರೌರ್ಯ, ಎಲ್ಲೋ ಧಿಗ್ಗನೆ ಎದ್ದು ಬರುವ ಮಾನವೀಯ ಪ್ರೀತಿಯ ಸೆಲೆ, ಮನುಷ್ಯ ಸಂಬಂಧಗಳು ಕೂಡುವ, ಕಾಡುವ ಅನನ್ಯ ಪರಿ, ಆಧುನಿಕತೆ ನುಂಗುತ್ತಿರುವ ಅವನ ಸ್ಮೃತಿಗಳು, ಭ್ರಷ್ಟನಾಗುತ್ತಿರುವ ಅವನ ಹಪಹಪಿ ಎಲ್ಲವೂ ಕಣ್ಣೆದುರು ಬರುತ್ತದೆ. ಹೀಗೆ ಬದುಕನ್ನು ಅದರ ವಿಶಿಷ್ಟತೆಯಲ್ಲಿ ಮತ್ತು ಸಮಗ್ರತೆಯಲ್ಲಿ ಒಟ್ಟಿಗೇ ಹಿಡಿಯಲು ಭಾಸ್ಕರ ಹೆಗಡೆಯವರು…

  • ಹೋದವಾರ ಜಾನ್ ಸ್ಟೈನ್ಬೆಕ್ ಬರೆದ ’ದಿ ಪರ್ಲ’ ಓದಿದೆ. ಸುಮಾರು ೧೧೦ ಪುಟಗಳ ಚಿಕ್ಕ ಪುಸ್ತಕ. ೧೯೪೫ರಲ್ಲಿ ಬರೆದದ್ದು. ಲೈಬ್ರರಿಯ ಸೆಕೆಂಡ್ ಹ್ಯಾಂಡ್ ಪುಸ್ತಕಗಳ ಮಾರಾಟದಲ್ಲಿ ೨೫ ಸೆಂಟಿಗೆ ಕೊಂಡ ಪುಸ್ತಕ. ಸರಳ ಕಥೆ, ಅದ್ಭುತ ಎನಿಸುವಂತಹ ನಿರೂಪಣೆ. ದಿನನಿತ್ಯ ತನ್ನ ಸೊಂಟಕ್ಕೊಂದು ದೊಡ್ಡ ಕಲ್ಲನ್ನು ಕಟ್ಟಿಕೊಂಡು ಸಮುದ್ರದ ತಳಕ್ಕೆ ಇಳಿದು ಅಲ್ಲಿನ ಚಿಪ್ಪುಗಳಲ್ಲಿ ಮುತ್ತು ಹುಡುಕುವ ಕಾಯಕದ ಕೀನೊ ಕಥಾನಾಯಕ. ಯುವಾನ ಅವನ ಹೆಂಡತಿ ಹಾಗೂ ಅವರಿಗೊಬ್ಬ ಮಗ ಕೊಯೊಟಿಟೊ. ಒಂದಾನೊಂದು ದಿನ ಕೊಯೊಟಿಟೊನಿಗೆ ಚೇಳು ಕುಟುಕುತ್ತದೆ. ಕುಟುಕಿದ ಕ್ಷಣವೇ ಯುವಾನ ಚೇಳು ಕುಟುಕಿದ ಸ್ಥಳದಿಂದ ವಿಷವನ್ನು ಹೀರಿ ತೆಗೆಯುವ ಪ್ರಯತ್ನ ಮಾಡುತ್ತಾಳೆ. ಕೊನೆಗೆ ವೈದ್ಯನ ಹತ್ತಿರ ಹೋಗುವದೇ ಒಳ್ಳೆಯದು ಎಂದುಕೊಂಡು ಆ ಊರ ವೈದ್ಯನ ಮನೆಗೆ ಹೋಗುತ್ತಾರೆ. ಇವರ…