ಎಲ್ಲರಿಗೂ ಖುಷಿ ಕೊಡುವ ಮಕ್ಕಳ ಕವನಗಳು ಎಂದಾಗ ನಮಗೆ ನೆನಪಾಗುವುದು ಪಂಜೆ ಮಂಗೇಶರಾಯರು, ಕು.ವೆಂ. ಪುಟ್ಟಪ್ಪನವರು, ರಾಜರತ್ನಂ, ದಿನಕರ ದೇಸಾಯಿ ಹಾಗೂ ಹೊಯಿಸಳರು ಬರೆದ ಮಕ್ಕಳ ಕವನಗಳು. ಇಂದಿಗೂ ನಮ್ಮ ಬಾಯಲ್ಲಾಡುವ ಮಕ್ಕಳ ಕವನಗಳನ್ನು ಬರೆದ ಅಂದಿನ ಕಾಲದ ಈ ಕನ್ನಡ ಕವಿಗಳ ಜೊತೆಗೆ ನೆನಪಾಗುವವರು ಲಯಬದ್ಧ ಮಕ್ಕಳ ಹಾಡುಗಳನ್ನು ಬರೆದ ಡಾ.ಎಚ್.ಎಸ್. ವೆಂಕಟೇಶ ಮೂರ್ತಿ, ಡಾ.ಎನ್.ಎಸ್. ಲಕ್ಷ್ಮಿ ನಾರಾಯಣ ಭಟ್ಟ, ಪಳಕಳ ಸೀತಾರಾಮ ಭಟ್ಟ, ಡಾ. ಸುಮತೀಂದ್ರ ನಾಡಿಗ ಹಾಗೂ ಶ್ರೀನಿವಾಸ ಉಡುಪ.
ಇಂತಹ ಹಳೆಯ ಹಾಗೂ ಹೊಸ ಮಕ್ಕಳ ಕವನಗಳು ಸಿ.ಡಿ.ಗಳಲ್ಲಿ ಸಿಗುವಂತಾದಾಗ ಅವನ್ನು ಕೇಳಬೇಕು, ಮಕ್ಕಳಿಗೆ ಕಲಿಸಬೇಕು ಎಂಬವರಿಗೆಲ್ಲ ಹಣ್ಣು ಸಿಕ್ಕಂತಾಯಿತು. ಇನ್ನಷ್ಟು ಹೊಸ ಮಕ್ಕಳ ಕವನಗಳು ಬೇಕೆಂಬವರಿಗೆ "ಹಲೋ ಹಲೋ ಚಂದಮಾಮ” ಎಂಬ ನಲುವತ್ತು ಕವನಗಳ…