ಕನ್ನಡ ನಾಡು-ನುಡಿಗೆ ಒದಗಿರುವ ದುಃಸ್ಥಿತಿ, ಕಾವೇರಿ ತೀರ್ಪಿನಂತಹ ಅನ್ಯಾಯ ನಮಗೆ ಆಗಿದ್ದರೂ, "ಮುಂದಿನ ವಾರ ಅಧಿವೇಶನ ಸೇರಿ, ವಿಚಾರ ಮಾಡಿ, ಆನಂತರ ನಮ್ಮ ಮುಂದಿನ ಕ್ರಮದ ಬಗ್ಗೆ ತೀರ್ಮಾನ ಮಾಡಿದರಾಯಿತು; ಈಗೇನು ಅಂತಹ ಅರ್ಜೆಂಟು?" ಎನ್ನುವಂತೆ ಸುಮ್ಮನಿರುವ ನಮ್ಮ ಮಂತ್ರಿ-ಮಹೋದಯರು, ಇವೇ ಮೊದಲಾದ ಹತ್ತಾರು ವಿಚಾರಗಳು ನಮ್ಮನ್ನು ಆಗಾಗ ಕಾಡುತ್ತಿರುತ್ತವೆ ಅಲ್ಲವೇ? ಆಶ್ಚರ್ಯವೆಂದರೆ ಇದೇ ರೀತಿಯ ಸಮಸ್ಯೆಗಳೇ ಸುಮಾರು ಅರವತ್ತು ವರ್ಷಗಳ ಹಿಂದೆಯೂ (ಅಂದರೆ ಏಕೀಕರಣಕ್ಕೂ ಹತ್ತು ವರ್ಷ ಮೊದಲು) ನಮ್ಮನ್ನು ಕಾಡುತ್ತಿದ್ದವು, ಇವೇನೂ ಹೊಸ ಸಮಸ್ಯೆಗಳಲ್ಲ ಎನ್ನುವ ಮಾತನ್ನು ನಿಮ್ಮ ಮುಂದಿಟ್ಟರೆ ನಂಬುತ್ತೀರಾ? ಪ್ರಾಯಶಃ ನಂಬಲಿಕ್ಕಿಲ್ಲ. ನೀವಷ್ಟೇ ಯಾಕೆ, ವಾರದ ಹಿಂದೆ ಯಾರಾದರೂ ಈ ರೀತಿ ನನಗೆ ಹೇಳಿದ್ದರೆ, ನಾನೂ ಸಹ ಅವರ ಮಾತನ್ನು…
ಪುಸ್ತಕ ಸಂಪದ
ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗ ಕನ್ನಡದ ಮಹತ್ವದ ಕೃತಿಗಳಲ್ಲೊಂದು. ರಾಷ್ಟ್ರಕವಿ ಕುವೆಂಪು ಅವರು ಕಗ್ಗವನ್ನು ಕುರಿತು ಹೇಳಿದ ಈ ಮಾತುಗಳು ಅದರ ಸತ್ವಕ್ಕೆ ಹಿಡಿದ ಕನ್ನಡಿಯೆನ್ನಬಹುದು.
ಹಸ್ತಕ್ಕೆ ಬರಿ ನಕ್ಕೆ; ಓದುತ್ತ ಓದುತ್ತ
ಮಸ್ತಕಕ್ಕಿಟ್ಟು ಗಂಭೀರವಾದೆ
ವಿಸ್ತರದ ದರ್ಶನಕೆ ತುತ್ತತುದಿಯಲಿ ನಿನ್ನ
ಪುಸ್ತಕಕೆ ಕೈಮುಗಿದೆ - ಮಂಕುತಿಮ್ಮ || (ಕುವೆಂಪು)ಕನ್ನಡ ಸಾಹಿತ್ಯದಲ್ಲಿ ಆಸಕ್ತಿಯಿರುವವರೆಲ್ಲರೂ ಒಂದಲ್ಲ ಒಂದು ಬಾರಿ "ಕಗ್ಗ"ವನ್ನು ಎಡತಾಕಿರುತ್ತೇವೆ. ಒಳ್ಳೆಯ "ಜೀವನ ದರ್ಶನ"ವಾಗಿಯೋ, ಇಲ್ಲವೇ ಉತ್ತಮ ಸಾಹಿತ್ಯ ಕೃತಿಯಾಗಿಯೋ, ಕಗ್ಗ ನಮ್ಮೆಲ್ಲರ ಬಾಳಿನಲ್ಲಿ ಒಮ್ಮೆಯಾದರೂ ಸುಳಿದಾಡಿರುತ್ತದೆ. ನಾನು ಹಲವಾರು ಬಾರಿ ಸ್ವತಂತ್ರವಾಗಿ (ಬೇರೆ ಯಾವುದೇ ಸಹಾಯವಿಲ್ಲದೆ), ನಿಘಂಟನ್ನು…
ಕನ್ನಡಮ್ಮನ ಕನಕ ವರ್ಷದ ಕಾಣಿಕೆ
ಕನ್ನಡಮ್ಮನ ಕೂರ್ಮೆಯ ಕುವರ ಕುವರಿಯರಿಗೊಂದು ಕಳಕಳಿಯ ಕರೆ. ಕನ್ನಡ ಕಾವ್ಯಾಸಕ್ತ ಜ್ಞಾನಪಿಪಾಸುಗಳಿಗೊಂದು
ಮನಃಪೂರ್ವಕ ಮೊರೆ. ಕನ್ನಡಮ್ಮನ ಕನಕ ವರ್ಷದ ಈ ಕಲ್ಯಾಣಕಾರಿ ಕಾಲದಲ್ಲಿ ಕನ್ನಡದ ಆಧುನಿಕ ಅಶ್ವಿನಿ ದೇವತೆಗಳಂತಹ
ಕನ್ನಡ ಕಿಂಕರರೀರ್ವರ ಜ್ಞಾ ನ ಶಕ್ತಿ, ಇಚ್ಚಾ ಶಕ್ತಿ, ಕ್ರಿಯಾ ಶಕ್ತಿಗಳ ತ್ರಿವೇಣಿ ಸಂಗಮದ ಫಲಸ್ವರೂಪದ ಪ್ರತೀಕವಾಗಿ
ಪ್ರಕಾಶಿಸುತ್ತಿರುವುದೊಂದು ದಿವ್ಯಕೃತಿ. ಹಿಮಗಿರಿಯ ಗೌರಿಶಂಕರ ಶಿಖರವನ್ನೇರಿದ ತೇನ್ ಸಿಂಗ್ ಹಿಲರಿಯವರಂತಹ
ಆ ಪರ್ವತಾರೋಹಿಗಳ ಸಾಹಸಕ್ಕೆ ಸಮನಾದ ಕನ್ನಡ ಕಾವ್ಯ ಶಿಖರಾರೋಹಿಗಳಂತಿರುವ ಸಾಹಸಿಗರೀರ್ವರು ಸಂಗ್ರಹಿಸಿರುವ
ಈ ಮೇರು ಕೃತಿ ಯಾವುದು ಬಲ್ಲಿರಾ? ಇದೇ ಕನ್ನಡದ ಪ್ರಪ್ರಥಮ ಶಿಲಾಶಾಸನ ಹಲ್ಮಿಡಿ ಶಾಸನದಿಂದ…
ಚರಿತ್ರೆಯೆ೦ದರೆ ರಾಜರ ಕತೆ, ಯುದ್ದ್ಧಗಳ ಮಾಹಿತಿ ಎ೦ದು ತಿಳಿದಿದ್ದ ನನಗೆ ಚರಿತ್ರೆಯೆ೦ದರೆ ಅಷ್ಟು ಆಸಕ್ತಿಯಿರಲಿಲ್ಲಾ. ಆದರೆ ಮುಗಳಿಯವರ ಕನ್ನಡ ಸಾಹಿತ್ಯ ಚರಿತ್ರೆಯನ್ನು ಓದಿದ ನ೦ತರ ಚರಿತ್ರೆಯ ಬಗ್ಗೆಯಿದ್ದ ಕಲ್ಪನೆ, ಮತ್ತು ತಿರಸ್ಕಾರವೆರಡು ಬದಲಾವಣೆಗೊ೦ಡಿದೆ. ವರ್ತಮಾನದಲ್ಲಿ ಆಶಾವದಿಯಾಗಿರದ ಮನಸ್ಸು ಚರಿತ್ರೆಯಲ್ಲಿ ಬೆಳಕನ್ನು ಕಾಣುವುದ್ದಕ್ಕೆ ಪರಿತಪಿಸುತ್ತದೆ. ಅದಕ್ಕಾಗಿ ಬಹುಶ: ನಾವು ಚರಿತ್ರೆಯನ್ನು ಓದುವುದು. ಚರಿತ್ರೆಯನ್ನು ಕೇಳುವುದು ಇನ್ನೂ ಅನುಭವಕಾರಿ.
ಹಾಗಿದ್ದರೆ ನಮ್ಮ ಕನ್ನಡ ಸಾಹಿತ್ಯ ಚರಿತ್ರೆ ಏನು ?? ಎ೦ಬ ಪ್ರಶ್ನೆ ನನ್ನ ಮು೦ದೆ
ಇತ್ತು. ಓದುತ್ತಾ ಓದುತ್ತಾ ರಾತ್ರಿ ಎರಡು ಮೂರೊ ಘ೦ಟೆಯಗಿರ ಬಹುದು.
ಮನೆಯಲ್ಲಿ ತ೦ದೆಯವರು Light off ಮಾಡು ಅ೦ತಾ ಒ೦ದು ಹತ್ತು ಸರಿ
…ಇಲ್ಲಿ ಮಾಸ್ತಿಯವರು ಮೂಲ ವಾಲ್ಮೀಕಿ ರಾಮಾಯಣವನ್ನು ಆಧರಿಸಿದ್ದರೂ ತಾವು ನಂಬದ ಸಂಗತಿಗಳನ್ನು ಕೈ ಬಿಟ್ಟಿದ್ದಾರೆ. ಅವರು ಮಾಡಿಕೊಂಡಿರುವ ಬದಲಾವಣೆಗಳನ್ನು ಇತರರು ಒಪ್ಪಲಿಕ್ಕಿಲ್ಲ . ಆದರೆ ಈ ಕಾರಣದಿಂದ ಅವರು ತಮ್ಮ ನಂಬುಗೆಗಳನ್ನು ಬದಲಾಯಿಸಲು ಒಪ್ಪುವದಿಲ್ಲ .ಪವಾಡಗಳನ್ನು ಸಹಜ ಸಂಗತಿಗಳನ್ನಾಗಿ ಇವರು ಮಾರ್ಪಡಿಸಿ ಕಾವ್ಯವನ್ನು ರಚಿಸಿದ್ದಾರೆ. ಈ ಕಾವ್ಯ ಜನರಿಗೆ ರುಚಿಸಿತೇ ತಾವು ಧನ್ಯ; ರುಚಿಸಲಿಲ್ಲ , ದೈವ ತಮಗೆ ಅನುಗ್ರಹಿಸಿದ ಭಾಗ್ಯ ಇಷ್ಟೇ ಎಂದು ಸಮಾಧಾನ ಪಟ್ಟುಕೊಳ್ಳುತ್ತಾರೆ.
ಇಲ್ಲಿ ಇರುವ ಮುದ್ರಣದೋಷಗಳನ್ನು ಕುರಿತು ಹೀಗೆ ಹೇಳುತ್ತಾರೆ- 'ಸಹೃದಯರಾದ ವಾಚಕರು ಇವನ್ನು ಕಂಡಾಗ ಇದು ಏನು ಎಂದು ಯೋಚಿಸಿ ಒಗಟು ಬಿಡಿಸುವಂತೆ ತಪ್ಪನ್ನು ಕಂಡುಹಿಡಿದು ತಿದ್ದಿಕೊಳ್ಳಬೇಕು . ಇದು ಶ್ರಮ; ಆದರೆ ಬುದ್ದಿಗೆ ಒಂದು…ಇತ್ತೀಚೆಗೆ ಎರಡು ಪುಸ್ತಕ ಓದಿದೆ . ಒಂದು ಇಂಗ್ಲೀಷಿನಿಂದ ಶ್ರೀ ಬೇಳೂರು ಸುದರ್ಶನರವರು ಮಾಡಿರುವ ಅನುವಾದ - ಸ್ಕಲ್ ಮಂತ್ರ ( ನೋಡಿ (ದಟ್ಸ್ ಕನ್ನಡ ಸಂಪರ್ಕ)) ಆದರೆ ಅದರ ಅನುವಾದ ಬಹಳ ಚೆನ್ನಾಗಿದೆ. ( ಒಂದೇ ಒಂದು ತಪ್ಪು ಗಮನಿಸಿದೆ. ಅದೂ ಯಾಕೆ ಎಂದರೆ , ಸರಾಗ ಓದಿಗೆ ಅಡ್ಡಿಯಾದದ್ದಕ್ಕೆ - ಮುದ್ರಣ ದೋಷಗಳನ್ನು ಸಹಜವಾಗಿ ನಾವು ಗಮನಿಸುವದಿಲ್ಲ - ಆದರೆ ತಪ್ಪು ಪದಕ್ಕೆ ಒಂದು ಬೇರೆ ಅರ್ಥವಿದ್ದಾಗ ನಮ್ಮ ಓದು ಎಡವುತ್ತದೆ ) 'ರಸ್ತೆಯನ್ನು ಅಗಲಿಸಿದ್ದಾರೆ' ಎಂಬುದು ಆ ವಾಕ್ಯ. ಅಗಲಿಸು ಎನ್ನುವದು ಅಗಲು ಶಬ್ದದ ರೂಪ. ಅಗಲ ಎಂಬುದರದ್ದಲ್ಲ . ವಾಕ್ಯದ ಉದ್ದೇಶ ಅಗಲ ಮಾಡಿದ್ದಾರೆ ಎಂಬುವದು. ಅನುವಾದ ಸುಲಲಿತವಾಗಿ ಚೆನ್ನಾಗಿದೆ. ಆದರೆ ಕಥೆ ಸರಳವಾಗಿ ಇಲ್ಲ. ಘಟನೆಗಳು, ಪಾತ್ರಗಳನ್ನು ಅನುಸರಿಸಲು ಆಗುವದಿಲ್ಲ.…