ಪುಸ್ತಕ ಸಂಪದ

  • ಕನ್ನಡದ ಶ್ರೇಷ್ಠ ಬರಹಗಾರರಲ್ಲಿ ಪೂರ್ಣಚಂದ್ರ ತೇಜಸ್ವಿಯವರು ಒಬ್ಬರು. ಅವರ ಪ್ರತಿಯೊಂದು ಕೃತಿಗಳು ವಿಶಿಷ್ಟವಾದವುಗಳು. ನಾನು ಅವರ ಜುಗಾರಿ ಕ್ರಾಸ್ ಕಾದಂಬರಿಯನ್ನು ಇತ್ತೀಚಿಗೆ ಪುನಃ ಓದಿದೆ. ಈ ಕಾದಂಬರಿ ಕಾಣಬರುವ ವಿಚಾರಗಳನ್ನು ನನಗೆ ಅನಿಸಿದ ಮಟ್ಟಿಗೆ ಇಲ್ಲಿ ಹಂಚಿಕೊಳ್ಳುತ್ತೇನೆ.

      ಇದೊಂದು ಕೇವಲ ೨೪ ಗಂಟೆಗಳ ಅವಧಿಯಲ್ಲಿ ನಡೆಯುವ ಪತ್ತೆದಾರಿ ಕಾದಂಬರಿಯಾಗಿದೆ. ಈ ಘಟನೆ ನಡೆಯುವ ಪ್ರದೇಶ ಮಂಗಳೂರು - ಬೆಂಗಳೂರು ರಸ್ತೆಯಲ್ಲಿರುವ ಜುಗಾರಿ ಕ್ರಾಸ್ ಮತ್ತು ದೇವಪುರಗಳಲ್ಲಿ. ಕಾದಂಬರಿಯಲ್ಲಿ ರಹಸ್ಯವಾಗಿ ನಡೆಯುವ ಅಪರಾಧ ಪ್ರಕರಣಗಳು ಒಂದು ಕಥೆಯಾದರೆ, ಪತ್ತೆದಾರ ಅವುಗಳನ್ನು ಬಯಲಿಗೆಳೆಯುವ ಕತೆ ಇನ್ನೊಂದು. ಬಸ್ಸಿನಲ್ಲಿ ಪ್ರಯಾಣ ಮಾಡುವ ಸುರೇಶ ಮತ್ತು ಗೌರಿಯರ ಒಂದು ದಿನದ ಅನುಭವ ಓದುಗನಿಗೆ ಒಂದು ಯುಗದ ಅನುಭವವನ್ನು…

  • "ಧಾರವಾಡದ ಬೀದಿಯಲ್ಲಿ, ಒಂದು ಕೈಯಲ್ಲಿ ಚೀಲ ಮತ್ತೊಂದು ಕೈಯಲ್ಲಿ ಮಗುವನ್ನು ಹಿಡಿದು, ಗಿರಾಕಿಗಾಗಿ ಕಾಯುತ್ತ ನಿಂತ ದೇವತೆ; ಬದಲಾದ ಆರ್ಥಿಕ ಸ್ಥಿತಿಯಲ್ಲಿ ಬದುಕಿನ ಹೋರಾಟ ನಡೆಸುವ ಕುಟುಂಬ; ದಟ್ಟ ಅಡವಿಯನ್ನು ಬರಿದಾಗಿಸುತ್ತಿರುವ ಲಾರಿಗಳು; ಬಾರ್‌ನಲ್ಲಿ, ಡ್ಯಾನ್ಸ್ ಮಾಡುತ್ತ ಸಹಜ ಬದುಕಿಗೆ ಹಂಬಲಿಸುವ ಹುಡುಗಿಯರು; ಇವರೆಲ್ಲರ ಮಧ್ಯವೇ ಒಂದು ಕೈಯಲ್ಲಿ ತಂಗಿಯನ್ನು, ಮತ್ತೊಂದು ಕೈಯಲ್ಲಿ ತಮ್ಮನನ್ನು ಹಿಡಿದುಕೊಂಡು, ಧೀರೋದಾತ್ತ ಹೆಜ್ಜೆ ಇಟ್ಟು ನಡೆದುಹೋದ ಬಾಲಕ; ಪಕ್ಕದಲ್ಲಿಯೆ ಹಾಲಿಲ್ಲದೆ ಮಲಗಿರುವ ಪುಟ್ಟ ಮಗು, ಅದನ್ನ ಕಂಡರೂ ಕಾಣದಂತೆ ಸರಿದು ಹೋದ ನನ್ನ ಸಣ್ಣತನ; ಪತ್ರಗಳಲ್ಲಿಯೂ ದೂರವಾಗಿಯೆ ಉಳಿಯುವ ಸಂಬಂಧದ ನಂಟು; ಪ್ರತಿಯೊಂದರಲ್ಲಿಯೂ ಸಾಕ್ಷಿಗಾಗಿ ಹುಡುಕುವ ವ್ಯವಸ್ಥೆ; ತಲೆತಲಾಂತರದಿಂದ ಬಂದ ಅಪ್ಪ ಮಗನ ನಡುವಿನ ಬಿರುಕು…

  • ರೂಪಕದ ಭಾಷೆಯವರೆಂದೇ ಗುರುತಿಸಲ್ಪಡುವ, ಹಲವಾರು ಹೃದ್ಯ ಕತೆಗಳನ್ನು ಕನ್ನಡಕ್ಕೆ ನೀಡಿರುವ, ಅನನ್ಯ ರೀತಿಯಲ್ಲಿ ಕವಿಭಾವ ಪುನರ್‌ಸೃಷ್ಟಿ ಮಾಡಬಲ್ಲ, ಆಪ್ತ ನುಡಿಚಿತ್ರಗಳ ಕುಶಲ ಕಲೆಗಾರ ಜಯಂತ್ ಕಾಯ್ಕಿಣಿ ಜನ್ಮತಃ ಕವಿ. ಅವರ ಕತೆಗಳೂ, `ಬೊಗಸೆಯಲ್ಲಿ ಮಳೆ'ಯಂಥ ಅಂಕಣಗಳೂ, ಎಲ್ಲವೂ ಈ ಅರ್ಥದಲ್ಲಿ ಕವನಗಳೇ. ಆದಾಗ್ಯೂ, ಜಯಂತ್ ಇವತ್ತಿನ ಕನ್ನಡ ಸಾಹಿತ್ಯ ಪರಿಸರದಲ್ಲಿ ಬಹಳ ಮುಖ್ಯವಾಗುವುದು ಅವರಿಗೆ ಮಾನವೀಯತೆಯಲ್ಲಿ, ಮನುಷ್ಯನ ಹೃದಯವಂತಿಕೆಯಲ್ಲಿ, ಮನುಷ್ಯ ಸಂಬಂಧಗಳಲ್ಲಿ, ಮಾನವ ಪ್ರೀತಿಯಲ್ಲಿ ಮತ್ತು ಶಿಶುಸಹಜ ಮುಗ್ಧತೆಯಲ್ಲಿ ಇರುವ ಅಚಲವಾದ ನಂಬುಗೆಗಾಗಿ. ಅವರ ಸಾಹಿತ್ಯದ ಮೂಲಸೆಲೆಯೇ ಈ ಪ್ರೀತಿ ಮತ್ತು ಮನೋವೈಶಾಲ್ಯ ಎನಿಸುತ್ತದೆ.

    ಜಯಂತರ ಕತೆಗಳಲ್ಲಿ ಕಂಡು ಬರುವ ಆಶಯ, ಅವರು ನಮಗೆ ಕಟ್ಟಿಕೊಡುವ ನೋಟ ಮತ್ತು ಅದಕ್ಕೆ ಅವರು…

  • ಶ್ರೀನಿವಾಸ ವೈದ್ಯರು ಇವನ್ನೆಲ್ಲ ಕಥಾರೂಪಿ ಹರಟೆ, ಹರಟೆ ರೂಪಿ ವ್ಯಕ್ತಿ ಚಿತ್ರಣ ಅಥವಾ ಶುದ್ಧ ತಲೆಹರಟೆ ರೂಪಿ ಹರಟೆ ಎಂದು ಕರೆದಿದ್ದಾರೆ. ಅಂದರೆ ಎಲ್ಲದರಲ್ಲೂ ಹರಟೆಯ ಅಂಶ ಸ್ವಲ್ಪ ಹೆಚ್ಚೇ ಇದ್ದರೆ ಅದು ದೋಷವಲ್ಲ, ಗುಣ ಎಂದೇ ಪರಿಗಣಿಸುವುದು ಅನಿವಾರ್ಯ. ಆದರೆ ಇಲ್ಲಿ ಬರುವ ಎಲ್ಲ ವ್ಯಕ್ತಿಗಳೂ ಘಟನೆಗಳೂ ಕಾಲ್ಪನಿಕ. ಈ ಸ್ಥೂಲ ಪರಿಚಯದೊಂದಿಗೇ ಇಲ್ಲಿನ ಕತೆಗಳನ್ನು ಪ್ರವೇಶಿಸಿದರೆ ಗುಂಗು ಹತ್ತಿಸುವ ವಿವರಗಳು, ಹೃದಯದ ಭಾವಕ್ಕೆ ಮೆದುಳಿನ ತರ್ಕದ ಸ್ಪರ್ಶ, ಹಾಗೆ ಲಾಜಿಕ್‌ಗೆ ಭಾವದ ಸಂವೇದನೆ, ಹೊಸದೇ ಆದ ಬಿಂಬ ಪ್ರತಿಬಿಂಬಗಳ ಕೊಲಾಜ್ ಹುಟ್ಟಿಸುವ ಒಂದು ವಿಶಿಷ್ಟ ಲಯವಿನ್ಯಾಸ ಎದುರಾಗುತ್ತದೆ. ಮನಸ್ಸು ಉಲ್ಲಾಸಗೊಳ್ಳುತ್ತ, ಚುರುಕುಗೊಳ್ಳುತ್ತ, ಮುದುಡುತ್ತ, ಅರಳುತ್ತ ಹೊಸ ಲೋಕವೊಂದನ್ನು ತಡಕುತ್ತದೆ. ಅಷ್ಟೇ ಗಾಢವಾಗಿ…

  • "ಒಂದು ಬದಿ ಸಹ್ಯಾದ್ರಿ, ಒಂದು ಬದಿ ಕಡಲು

    ನಡು ಮಧ್ಯದಲಿ ಅಡಕೆ ತೆಂಗುಗಳ ಮಡಲು

    ಸಿರಿಗನ್ನಡದ ಚಪ್ಪರವೆ ನನ್ನ ಜಿಲ್ಲೆ

    ಇಲ್ಲಿಯೇ ಇನ್ನೊಮ್ಮೆ ಹುಟ್ಟುವೆನು ನಲ್ಲೆ "

    ದಿನಕರ ದೇಸಾಯಿಯವರ ಈ ಚುಟುಕದಿಂದಲೇ ವಿವೇಕ ತಮ್ಮ ಕಾದಂಬರಿಗೆ ಒಂದು ಬದಿ ಕಡಲು ಎನ್ನುವ ಹೆಸರನ್ನು ಆಯ್ದಿದ್ದಾರೆ. ಒಂದು ಊರು ನಮಗೆ ನಮ್ಮ ಬಾಲ್ಯದಲ್ಲಿ ಕಂಡಂತೆಯೇ ನಮ್ಮ ತಾರುಣ್ಯದಲ್ಲಿ, ಯೌವನದಲ್ಲಿ, ನಡುವಯಸ್ಸಿನಲ್ಲಿ ಮತ್ತು ಮುದಿತನದಲ್ಲಿ ಕಾಣುವುದಿಲ್ಲ. ಊರು ಕಾಲಮಾನಕ್ಕೆ ತಕ್ಕಂತೆ ಬದಲಾಗುವುದು ಸಹಜ ವಿದ್ಯಮಾನವೇ. ಆದರೆ ಅದು ಬದಲಾಗುವ ಪ್ರಕ್ರಿಯೆ ತುಂಬ ಕುತೂಹಲಕರ. ಪೇಟೆ ಆಧುನಿಕ ಸ್ವರೂಪ ಪಡೆದುಕೊಳ್ಳುವುದು, ಕಟ್ಟಡಗಳೇಳುವುದು ಇತ್ಯಾದಿ ಕಣ್ಣಿಗೆ ಹೊಡೆದು ಕಾಣಿಸುತ್ತದೆ, ಅದರಲ್ಲೇನೂ ವಿಶೇಷವಿಲ್ಲ. ಆದರೆ ಊರು…

  • ಬಾಳಾಸಾಹೇಬ ಲೋಕಾಪುರ ಅವರು ತಮ್ಮ `ಹುತ್ತ' ಕಾದಂಬರಿಯ ಮೂಲಕ ಬದುಕಿನ ಹಲವು ಮೂಲಭೂತ ಪ್ರಶ್ನೆಗಳಿಗೆ ಮುಖಾಮುಖಿಯಾಗಿದ್ದಾರೆ ಮತ್ತು ತಮ್ಮ ಓದುಗನೂ ಅವುಗಳಿಗೆ ಮುಖಾಮುಖಿಯಾಗುವಂತೆ ಮಾಡಿದ್ದಾರೆ. ತುಂಬ ಪ್ರಾಮಾಣಿಕವಾದ ಬದುಕಿನ ಸತ್ಯದ ಶೋಧ ಇಲ್ಲಿದ್ದು ಕಾದಂಬರಿ ಓದಿನಾಚೆ ಒಂದು ಜಿಜ್ಞಾಸೆಯಾಗಿ ಓದುಗನೊಳಗೆ ಬೆಳೆಯುವ ಕಸು ಹೊಂದಿದೆ. ಅಷ್ಟೇ ಮಹತ್ವದ್ದಾಗಿ ಇದನ್ನು ಸಾಧಿಸುವಾಗ ಅವರು ಕಾದಂಬರಿ ಪ್ರಕಾರದ ಎಲ್ಲ ಅಂಶಗಳಿಗೂ ಸೂಕ್ತ ನ್ಯಾಯ ಸಲ್ಲಿಸಿರುವುದು ಕೂಡ ಗಮನಾರ್ಹವಾಗಿದೆ. ಇಲ್ಲಿನ ಭಾಷೆ, ವಿವರಗಳು ಕಟ್ಟಿಕೊಡುವ ಒಂದು ವಾತಾವರಣ, ಇವುಗಳಿಂದ ಅಲ್ಲಿನ ಬದುಕು ಜೀವಂತಗೊಳ್ಳುವ ಪರಿ ನಿಜಕ್ಕೂ ತುಂಬ ಸಹಜವಾಗಿ, ಲಾಲಿತ್ಯಪೂರ್ಣವಾಗಿ ಬಂದಿದೆ.

  • ( ಇಲ್ಲಿ ಬರೆದದ್ದೆಲ್ಲವೂ ನಾನು ಬರೆದಿದ್ದಲ್ಲ ; ನಾನು ಆಯ್ದ ವಾಕ್ಯಗಳೇ ಬಹಳ - ಶ್ರೀಕಾಂತ ಮಿಶ್ರೀಕೋಟಿ) ಪ್ರಸಿದ್ಧ ತತ್ವಶಾಸ್ತ್ರಜ್ಞ , ಚಿಂತಕ, ಕಾದಂಬರಿಕಾರನ ಪ್ರಸಿದ್ಧ ಕೃತಿ ’ಲೆಮೊ’ ದ ಅನುವಾದವೇ ’ಪದಚರಿತ’ . ಇದು ಅವನ ಬಾಲ್ಯದ ’ಆತ್ಮಚರಿತ್ರೆ’ ; ಅವನನ್ನು ಕಾಡಿದ ಬರೆದಿಟ್ಟ ಶಬ್ದಗಳ ಜತೆ ನಡೆಸಿದ ಒಂದು ಸುದೀರ್ಘ ಪ್ರಣಯ ಪ್ರಸಂಗ. ಈ ಪುಸ್ತಕ ಜೀವನಾನುಭವದ ಸಂದರ್ಭದಲ್ಲಿ ಪುಸ್ತಕಗಳ ಮತ್ತು ಭಾಷೆಯ ಉಪಯುಕ್ತತೆ ಮತ್ತು ಉಪಯೋಗದ ಬಗ್ಗೆ ನಡೆಸಿರುವ ವಿಶಿಷ್ಟ ಸಂಶೋಧನೆ ಮತ್ತು ಮೌಲ್ಯಮಾಪನ. ಇದನ್ನು ಅನುವಾದ ಮಾಡಿದವರು ರಾಜಕಾರಣಿ ಕೆ. ಎಚ್. ಶ್ರೀನಿವಾಸರು . ಸುಮಾರು ಮೂರ್ನಾಲ್ಕು ವರ್ಷ ತಮ್ಮ ರಾಜಕಾರಣದ ನಡುವೆ ಶ್ರಮಿಸಿದ್ದಾರೆ . ಪುಸ್ತಕವನ್ನು ಮೂಲದಲ್ಲಿ ಅರ್ಥ ಮಾಡಿಕೊಳ್ಳುವದೇ ಕಷ್ಟ ; ಪುಸ್ತಕ ಅಂತಹದು ; ಅಂಥದ್ದನ್ನು…

  • Unaccustomed Earth ಹೆಸರಿನ ನೀಳ್ಗಥೆಗಳ ಸಂಕಲನ ಹೊರಬಿದ್ದಿದೆ. ಮನುಷ್ಯ ಸಂಬಂಧಗಳು, ಅವನ ಭಾವನೆಗಳು ಕ್ರಮೇಣ ಅರ್ಥಕಳೆದುಕೊಳ್ಳುವುದನ್ನು, ಸಡಿಲಗೊಳ್ಳುವುದನ್ನು ಮೌನವಾದ ತಲ್ಲಣಗಳಲ್ಲಿ ಗುರುತಿಸುತ್ತಲೇ ಅವುಗಳಿಂದ ಆತ ಬಿಡುಗಡೆ ಪಡೆಯುವ ಹಂತದಲ್ಲಿ ಅಥವಾ ಬಿಡುಗಡೆ ಪಡೆದ ನಂತರ ಉಳಿಯುವ ಶಿಲ್ಕು ಏನಿದೆ ಅದರಲ್ಲಿ ಆ ಸಂಬಂಧಗಳ, ಭಾವನೆಗಳ ಪ್ರಾಮಾಣಿಕತೆಯನ್ನು ಅರಸುವ ಕತೆಗಳು, ಬೇರೆ ಹೊಸ ಸಂಬಂಧದ ಹುರುಪಿನ ಆಳದಲ್ಲಿ ಹಳೆಯ ಸಂಬಂಧದ ನೆರಳುಗಳನ್ನು ಕಾಣುವ ಕಥೆಗಳು, ನಡುವಯಸ್ಸಿನಲ್ಲಿ ಸಂಬಂಧಗಳು ಪಡೆದುಕೊಂಡ ಅನಿವಾರ್ಯ ಆಕಾರ ವಿಕಾರಗಳನ್ನು ಮೌನವಾಗಿ ಚಿತ್ರಿಸುತ್ತ ಅವರ ಅಥವಾ ಎಳೆಯರ ಹೊಸ ಸಂಬಂಧಗಳನ್ನು ನಿರೂಪಿಸುವ ಕಥೆಗಳು ಇಲ್ಲಿವೆ. ಹೆಚ್ಚಾಗಿ ಇಲ್ಲಿ ಗಂಡು ಹೆಣ್ಣು ಸಂಬಂಧಗಳೇ ಪ್ರಾಮುಖ್ಯ ಪಡೆದಂತಿದೆಯಾದರೂ ತಂದೆ ಮಗಳು, ತಾಯಿ…

  • ಕೃತಿ: ‘ತಲೆಮಾರು’ 

    ಬಂಜಗೆರೆಯವರು ಅನುವಾದಿಸಿದ ಅಕ್ಸರ್ ಹೇಲಿಯ ವಿಶ್ವವಿಖ್ಯಾತ ಕಾದಂಬರಿ ರೂಟ್ಸ್. ತಲೆಮಾರು ಎನ್ನುವ ಹೆಸರಿನಲ್ಲಿ ಈ ಸಂಗ್ರಹಾನುವಾದ ಪ್ರಕಟವಾದದ್ದು 2003ರಲ್ಲಿ. ರೂಟ್ಸ್ ಹೇಲಿಯ ಕುಟುಂಬ ಚರಿತ್ರೆಯ ದಾಖಲೆ. 1976ರಲ್ಲಿ ಪ್ರಕಟವಾದದ್ದು. ಇದು ಮುವ್ವತ್ತೇಳು ಭಾಷೆಗಳಿಗೆ ಅನುವಾದಗೊಂಡಿದೆಯಂತೆ. ಇದಕ್ಕೆ ಮಿಲಿಯಗಟ್ಟಲೆ ಪ್ರತಿಗಳ ಮಾರಾಟದ ದಾಖಲೆಯಿದೆ. ಕಿರು ಧಾರಾವಾಹಿಯಾಗಿ ಟಿವಿಯಲ್ಲಿ ಪ್ರಸಾರವಾದಾಗ ಸುಮಾರು ನೂರ ಮೂವತ್ತು ಮಿಲಿಯನ್ ಜನ ವೀಕ್ಷಿಸಿದರೆಂದು ಅಂದಾಜು.

    ಯಾವಾಗಲೂ ಚರಿತ್ರೆಯನ್ನು ಬರೆಯುವವರು ಗೆದ್ದ ಜನ. ಸೋತವರಿಗೆ ಚರಿತ್ರೆಯಿಲ್ಲ ಎನ್ನುತ್ತಾರೆ ಜಿ.ರಾಜಶೇಖರ. ಮೇಲೆ ಹೇಳಿದ ಪುಸ್ತಕಗಳು ಸೋತವರ ಚರಿತ್ರೆ.

    ಬಂಜಗೆರೆಯವರು ಈಚೆಗೆ ಕೆನ್ಯಾದ ಕೆಲವು ಕತೆಗಳನ್ನು ಕೂಡ ಕನ್ನಡಕ್ಕೆ…

  • ನಮ್ಮ ಅತ್ಯುತ್ತಮ ಕಥೆಗಾರರಲ್ಲಿ ಒಬ್ಬರೆಂದು ಈಗಾಗಲೇ ಗುರುತಿಸಿಕೊಂಡಿರುವ ಗೋಪಾಲಕೃಷ್ಣ ಪೈಯವರು ನಿಜಕ್ಕೂ ಕೆಲವು ಒಳ್ಳೊಳ್ಳೆಯ ಚೀನೀ ಕಥೆಗಳನ್ನು ಆಯ್ದು ಅನುವಾದಿಸಿಕೊಟ್ಟಿದ್ದಾರೆ. ಈ ಸಂಕಲನದಲ್ಲಿರುವ ಒಟ್ಟು ಹದಿನಾರು ಕಥೆಗಳಲ್ಲಿ ಒಂದೆರಡನ್ನು ಬಿಟ್ಟರೆ ಉಳಿದ ಎಲ್ಲಾ ಕಥೆಗಳೂ ತಮ್ಮದೇ ಆದ ಒಂದು ಗುಂಗು ಆವರಿಸುವಂತೆ ಮಾಡುವಲ್ಲಿ, ನಮ್ಮ ಒಳಗನ್ನು ತಟ್ಟುವಲ್ಲಿ, ಮತ್ತೆ ನೆನೆದಾಗ ವಾಹ್ ಅನಿಸುವಂತೆ ಮಾಡುವಲ್ಲಿ ಸಫಲವಾಗಿವೆ. ಈ ಎಲ್ಲ ಅಂಶಗಳಿಗಾಗಿ ನಾವು ಮೊದಲು ಅಭಿನಂದಿಸಬೇಕಾದ್ದು ಪೈಯವರನ್ನೆ. ಅವರ ಅನುವಾದ ಅಷ್ಟು ಸೊಗಸಾಗಿದೆ. ಅನುವಾದ ಅನಿಸದ ಹಾಗಿದೆ. ಈ ಸಂಕಲನದ ಪಾತ್ರಗಳು ಬಹುಕಾಲ ಮನಸ್ಸಿನಲ್ಲಿ ಉಳಿದು ನಮ್ಮ ನಿಮ್ಮ ನಡುವಿನ ವ್ಯಕ್ತಿಗಳಾಗಿ ಬಿಡುವುದು ಈ ಸಂಕಲನದ ಬಹುಮುಖ್ಯ ಸಾಧನೆ.

    ಪುಟಗಳು 248+xiv