ಪುಸ್ತಕ ಸಂಪದ

  • ಇಲ್ಲಿ ಮಾಸ್ತಿಯವರು ಮೂಲ ವಾಲ್ಮೀಕಿ ರಾಮಾಯಣವನ್ನು ಆಧರಿಸಿದ್ದರೂ ತಾವು ನಂಬದ ಸಂಗತಿಗಳನ್ನು ಕೈ ಬಿಟ್ಟಿದ್ದಾರೆ. ಅವರು ಮಾಡಿಕೊಂಡಿರುವ ಬದಲಾವಣೆಗಳನ್ನು ಇತರರು ಒಪ್ಪಲಿಕ್ಕಿಲ್ಲ . ಆದರೆ ಈ ಕಾರಣದಿಂದ ಅವರು ತಮ್ಮ ನಂಬುಗೆಗಳನ್ನು ಬದಲಾಯಿಸಲು ಒಪ್ಪುವದಿಲ್ಲ .ಪವಾಡಗಳನ್ನು ಸಹಜ ಸಂಗತಿಗಳನ್ನಾಗಿ ಇವರು ಮಾರ್ಪಡಿಸಿ ಕಾವ್ಯವನ್ನು ರಚಿಸಿದ್ದಾರೆ. ಈ ಕಾವ್ಯ ಜನರಿಗೆ ರುಚಿಸಿತೇ ತಾವು ಧನ್ಯ; ರುಚಿಸಲಿಲ್ಲ , ದೈವ ತಮಗೆ ಅನುಗ್ರಹಿಸಿದ ಭಾಗ್ಯ ಇಷ್ಟೇ ಎಂದು ಸಮಾಧಾನ ಪಟ್ಟುಕೊಳ್ಳುತ್ತಾರೆ.

    ಇಲ್ಲಿ ಇರುವ ಮುದ್ರಣದೋಷಗಳನ್ನು ಕುರಿತು ಹೀಗೆ ಹೇಳುತ್ತಾರೆ- 'ಸಹೃದಯರಾದ ವಾಚಕರು ಇವನ್ನು ಕಂಡಾಗ ಇದು ಏನು ಎಂದು ಯೋಚಿಸಿ ಒಗಟು ಬಿಡಿಸುವಂತೆ ತಪ್ಪನ್ನು ಕಂಡುಹಿಡಿದು ತಿದ್ದಿಕೊಳ್ಳಬೇಕು . ಇದು ಶ್ರಮ; ಆದರೆ ಬುದ್ದಿಗೆ ಒಂದು…

  • ಇತ್ತೀಚೆಗೆ ಎರಡು ಪುಸ್ತಕ ಓದಿದೆ . ಒಂದು ಇಂಗ್ಲೀಷಿನಿಂದ ಶ್ರೀ ಬೇಳೂರು ಸುದರ್ಶನರವರು ಮಾಡಿರುವ ಅನುವಾದ - ಸ್ಕಲ್ ಮಂತ್ರ ( ನೋಡಿ (ದಟ್ಸ್ ಕನ್ನಡ ಸಂಪರ್ಕ)) ಆದರೆ ಅದರ ಅನುವಾದ ಬಹಳ ಚೆನ್ನಾಗಿದೆ. ( ಒಂದೇ ಒಂದು ತಪ್ಪು ಗಮನಿಸಿದೆ. ಅದೂ ಯಾಕೆ ಎಂದರೆ , ಸರಾಗ ಓದಿಗೆ ಅಡ್ಡಿಯಾದದ್ದಕ್ಕೆ - ಮುದ್ರಣ ದೋಷಗಳನ್ನು ಸಹಜವಾಗಿ ನಾವು ಗಮನಿಸುವದಿಲ್ಲ - ಆದರೆ ತಪ್ಪು ಪದಕ್ಕೆ ಒಂದು ಬೇರೆ ಅರ್ಥವಿದ್ದಾಗ ನಮ್ಮ ಓದು ಎಡವುತ್ತದೆ ) 'ರಸ್ತೆಯನ್ನು ಅಗಲಿಸಿದ್ದಾರೆ' ಎಂಬುದು ಆ ವಾಕ್ಯ. ಅಗಲಿಸು ಎನ್ನುವದು ಅಗಲು ಶಬ್ದದ ರೂಪ. ಅಗಲ ಎಂಬುದರದ್ದಲ್ಲ . ವಾಕ್ಯದ ಉದ್ದೇಶ ಅಗಲ ಮಾಡಿದ್ದಾರೆ ಎಂಬುವದು. ಅನುವಾದ ಸುಲಲಿತವಾಗಿ ಚೆನ್ನಾಗಿದೆ. ಆದರೆ ಕಥೆ ಸರಳವಾಗಿ ಇಲ್ಲ. ಘಟನೆಗಳು, ಪಾತ್ರಗಳನ್ನು ಅನುಸರಿಸಲು ಆಗುವದಿಲ್ಲ.…