ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗ ಕನ್ನಡದ ಮಹತ್ವದ ಕೃತಿಗಳಲ್ಲೊಂದು. ರಾಷ್ಟ್ರಕವಿ ಕುವೆಂಪು ಅವರು ಕಗ್ಗವನ್ನು ಕುರಿತು ಹೇಳಿದ ಈ ಮಾತುಗಳು ಅದರ ಸತ್ವಕ್ಕೆ ಹಿಡಿದ ಕನ್ನಡಿಯೆನ್ನಬಹುದು.
ಹಸ್ತಕ್ಕೆ ಬರಿ ನಕ್ಕೆ; ಓದುತ್ತ ಓದುತ್ತ
ಮಸ್ತಕಕ್ಕಿಟ್ಟು ಗಂಭೀರವಾದೆ
ವಿಸ್ತರದ ದರ್ಶನಕೆ ತುತ್ತತುದಿಯಲಿ ನಿನ್ನ
ಪುಸ್ತಕಕೆ ಕೈಮುಗಿದೆ - ಮಂಕುತಿಮ್ಮ || (ಕುವೆಂಪು)
ಕನ್ನಡ ಸಾಹಿತ್ಯದಲ್ಲಿ ಆಸಕ್ತಿಯಿರುವವರೆಲ್ಲರೂ ಒಂದಲ್ಲ ಒಂದು ಬಾರಿ "ಕಗ್ಗ"ವನ್ನು ಎಡತಾಕಿರುತ್ತೇವೆ. ಒಳ್ಳೆಯ "ಜೀವನ ದರ್ಶನ"ವಾಗಿಯೋ, ಇಲ್ಲವೇ ಉತ್ತಮ ಸಾಹಿತ್ಯ ಕೃತಿಯಾಗಿಯೋ, ಕಗ್ಗ ನಮ್ಮೆಲ್ಲರ ಬಾಳಿನಲ್ಲಿ ಒಮ್ಮೆಯಾದರೂ ಸುಳಿದಾಡಿರುತ್ತದೆ. ನಾನು ಹಲವಾರು ಬಾರಿ ಸ್ವತಂತ್ರವಾಗಿ (ಬೇರೆ ಯಾವುದೇ ಸಹಾಯವಿಲ್ಲದೆ), ನಿಘಂಟನ್ನು…