ಹುಟ್ಟಿದ ನೆಲದಿಂದ ಯಾವ್ಯಾವುದೋ ಅನಿವಾರ್ಯಗಳಿಂದ ಹೊರಗೆ ಬಂದು ನೆಲೆಸಿದ ಮನಗಳಲ್ಲಿ ತಾಯ್ನೆಲದ ತುಡಿತ, ಕಳಚಿದ ಕೊಂಡಿಯಂತಾಗಿ ಏನೋ ಆತ್ಮೀಯವಾದದ್ದನ್ನು ಕಳೆದುಕೊಂಡ ಭಾವನೆ ಸ್ವಂತ ನೆಲದಲ್ಲೆ ಸದಾ ಇರುವವರಿಗಿಂತ ಹೆಚ್ಚು ತೀವ್ರವಾಗಿ ಬಾಧಿಸುವುದು ಸಹಜ. ಅಂಥಹ ಬಾಧೆಗಳೇ ತೀವ್ರವಾಗಿ ಯಾತನೆ, ತುಡಿತಗಳಾದಾಗ , ಆ ಭಾವೋತ್ಕರ್ಷದ ತೀವ್ರತೆ ಅಭಿವ್ಯಕ್ತವಾಗಲೂ ಸೂಕ್ತ ಮಾಧ್ಯಮಕ್ಕಾಗಿ ಹುಡುಕಾಟ ನಡೆಸುವುದು ಅಷ್ಟೇ ಸಹಜ. ಆ ತುಡಿತ, ಯಾತನೆ, ಉಲ್ಲಾಸ, ಮುಗ್ಧತೆ , ಉತ್ಸಾಹಗಳೆಲ್ಲ ಕ್ರಿಯಾಶೀಲತೆಯ ಮಾರ್ಗ ಹಿಡಿದರೆ ಸೃಷ್ಟಿಯಾಗುವ ಸರಕುಗಳು ಆ ವಿಶೇಷತೆಯಿಂದಲೆ ಆಪ್ತವಾಗಿ ಆಪ್ಯಾಯಮಾನವಾಗುತ್ತವೆ. ಅಂತದೊಂದು ಅನುಭವಕ್ಕೆ ಉದಾಹರಣೆ, ಶ್ರೀಯುತ ವಸಂತರ ಮೊದಲ ಕವನ ಸಂಕಲನ "ಅಂತರ ಹಾಗು ಇತರ ಕವನಗಳು". ಸುಮಾರು ಏಳು ವರ್ಷಗಳಿಂದ ಬರೆದುಕೊಂಡುಬಂದ…
ಪುಸ್ತಕ ಸಂಪದ
ಈ ಪುಸ್ತಕದ ಒಂದೊಂದು ಲೇಖನಗಳೂ ಜೀವನ ಪಯಣಕ್ಕೆ ದಾರಿ ದೀವಿಗೆಯಂತಿದೆ. ಸೋಲನ್ನು ಮೆಟ್ಟಿ ನಿಂತ ಜನರ ಕಥೆಗಳು ನಿಜಕ್ಕೂ ಸ್ಪೂರ್ತಿದಾಯಕ. ಒಮ್ಮೆ ಕಂಬನಿ ತರಿಸುವ, ಹಾಗೆ ಮರುಕ್ಷಣ ಕಚುಗುಳಿ ಇಡುವ, ಗಾಢ ಆಲೋಚನೆಗೆ ದಾರಿ ಮಾಡಿ ಕೊನೆಗೆ ಒಂದು ಸಣ್ಣ ಪಾಠ ಹೇಳಿ ಹೋಗುವ ಲೇಖನಗಳ ಮಾಲೆ. ಬದುಕು ಕಂಡ ಅನುಭವದ ಮಾರ್ಗದರ್ಶನಗಳು ಎಂದಿಗೂ ಸರಿಯಾಗಿಯೇ ಇರುತ್ತವೆ. ಓದಿರದಿದ್ದಲ್ಲಿ ಒಮ್ಮೆ ಓದಿ ನೋಡಿ..
ಅಮ್ಮ ಹೇಳಿದ ಎಂಟು ಸುಳ್ಳುಗಳು ಪ್ರತಿಬಾರಿ ಓದಿದಾಗಲೂ ಹೊಸತೊಂದು ಅನುಭವದ ಪರಿಚಯ ಮಾಡಿಕೊಡುತ್ತದೆ. ಅವು ಸಕಾರಾತ್ಮಕವಾಗಿ ನಮ್ಮ ಮೇಲೆ ಪ್ರಭಾವ ಬೀರುತ್ತವೆ, ಹೊಸ ಬೆಳಕು ಚೆಲ್ಲುತ್ತವೆ, ನಮ್ಮ ತಪ್ಪು ನಿರ್ಧಾರಗಳನ್ನು ಬದಲಿಸಲು ಸಹಕರಿಸುತ್ತವೆ. ಇಲ್ಲಿನ ಬರಹಗಳು ನಮ್ಮ ಮನ ಮುಟ್ಟುತ್ತವೆ, ಸೋತೆನೆಂಬ ಭಾವ ಮನದಲ್ಲಿ ಮೂಡಿದಾಗ ಬೆನ್ನು…ದಿನ ನಿತ್ಯದ ಜೀವನದಲ್ಲಿ, ಸುತ್ತಮುತ್ತಲ ಆಗುಹೋಗುಗಳಲ್ಲಿ, ನೈಸರ್ಗಿಕ ವಿದ್ಯಮಾನಗಳಲ್ಲಿ ಸಂಭವಿಸುವ ಹಲವಾರು ಘಟನೆಗಳು ನಮ್ಮ ಮನಸ್ಸಿನಲ್ಲಿ ಕೌತುಕವನ್ನು, ವಿಸ್ಮಯವನ್ನು, ಪ್ರಶ್ನೆಗಳನ್ನು ಮೂಡಿಸುತ್ತವೆ. ಅದೇ ವಿಜ್ಞಾನ. ವಿಜ್ಞಾನ ನಮ್ಮ ಜೀವನದ ಅವಿಭಾಜ್ಯ ಅಂಗ. ಇಂದು ಕೃಷಿಯಲ್ಲಿ ವಿಜ್ಞಾನವಿದೆ. ಅಡುಗೆ ಮಾಡುವುದು ಕೂಡ ಒಂದು ವಿಜ್ಞಾನವೆಂದು ಪರಿಗಣಿಸಲ್ಪಟ್ಟಿದೆ.. ಬಟ್ಟೆ ತೊಳೆಯುವುದೂ ವಿಜ್ಞಾನವೇ. ಜೀವನದ ಪ್ರತಿಯೊಂದು ಚಟುವಟಿಕೆಯಲ್ಲೂ ಭೌತ, ರಸಾಯನ, ಜೀವಶಾಸ್ತ್ರಗಳಿವೆ. ಏನು? ಏಕೆ? ಹೇಗೆ? ಎಂಬ ಪ್ರಶ್ನೆಗಳನ್ನು ಮೂಡಿಸುವುದೇ ವಿಜ್ಞಾನದ ಲಕ್ಷಣ. ಆದರೆ ಈ ಪ್ರಶ್ನೆಗಳಿಗೆ ಉತ್ತರಗಳನ್ನು ಎಲ್ಲಿಂದ ಹೇಗೆ ಪಡೆಯಬೇಕೆಂಬುದು ತಿಳಿಯದೇ ಗೊಂದಲಕ್ಕೊಳಗಾಗಿ ನಾವು ಸುಮ್ಮನಾಗಿಬಿಡುತ್ತೇವೆ. ಆದರೆ ಅವೇ ಪ್ರಶ್ನೆಗಳನ್ನು ಎಳೆಯರು ನಮ್ಮ…
ಚಿತ್ರದುರ್ಗ ಎಂದಾಕ್ಷಣ ನೆನಪಿಸಿಕೊಳ್ಳುವುದು, ಗಂಡೆದೆಯ ಭಂಟ ವೀರ ಮದಕರಿ ನಾಯಕ. ತ.ರಾ.ಸು ಅವರ ಕಾದಂಬರಿ -ದುರ್ಗಾಸ್ತಮಾನದಲ್ಲಿ ಈತನ ಐತಿಹಾಸಿಕ ದಾಖಲೆಯನ್ನು ಕಣ್ಣ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟಂತಿದೆ. ಈ ಕಾದಂಬರಿಯ ಆದಿಯಿಂದ ಅಂತ್ಯದವರೆಗಿನ ಸರಳ ಭಾಷಾ ಶೈಲಿಯು ಓದುಗನನ್ನು ಎಲ್ಲಿಯೂ ನೀರಸವಾಗುವಂತೆ ಮಾಡದೆ ಸರಾಗವಾಗಿ ಓದಿಸಿಕೊಂಡೇ ಹೋಗುತ್ತದೆ. ಮುಖ್ಯವಾಗಿ ನಾಯಕನಲ್ಲಿನ ದೊರೆಯ ಲಕ್ಷಣಗಳ ಜೊತೆಗೆ ಅವನಲ್ಲಿರುವ ಮನುಷ್ಯತ್ವವೂ ಹೊರ ಹೊಮ್ಮುತ್ತದೆ. ಇದೇ ಗುಣ ದುರ್ಗದಲ್ಲಿನ ಜನರಲ್ಲಿದ್ದು, ಧರ್ಮದ ಹಿನ್ನಲೆಯಲ್ಲಿ ನ್ಯಾಯ, ನಿಷ್ಟೆ, ನೀತಿಗಳನ್ನು ಮರೆತ ಜನರಿಂದಲೇ ದುರ್ಗದ ಅಂತ್ಯವಾದುದ್ದು, ದುರ್ಗದ ದೌರ್ಭಾಗ್ಯವೇ ಸರಿ. ವೀರಾವೇಶ ಗುಣಗಳನ್ನು ಹೊಂದಿದ್ದ ಮದಕರಿನಾಯಕನನ್ನು ಸೆರೆಯಾಗಿಸದೇ ವೀರಾವೇಶದಿಂದ ಹೋರಾಡಿ ಮರಣ ಹೊಂದುವಂತೆ…
ನಿಮ್ಮ ಓದಿನ ಹಸಿವು ದೊಡ್ಡದಾಗಿಲ್ಲ ಎಂದು ಗೊತ್ತಿದ್ದೂ ಗೊತ್ತಿದ್ದೂ, ೧೪೭೪ ಪುಟಗಳುಳ್ಳ ಸುದೀರ್ಘ ಇಂಗ್ಲಿಷ್ ಕಾದಂಬರಿಯೊಂದನ್ನು ಓದಲು ಆರಿಸಿಕೊಂಡಿರಾದರೆ, ನೀವು ಖಂಡಿತವಾಗಿ ನರಕಯಾತನೆಗೆ ತಯಾರಾಗಿರಲೇಬೇಕು. ಎರಡು ತಿಂಗಳ ಕಾಲ, ಉಬ್ಬರ-ಇಳಿತಗಳ ಕಥಾ ಹಂದರದ ಜಾಡಿನಲ್ಲಿ ಬಿದ್ದು ಒದ್ದಾಡಿದ ಮೇಲೆ, ಇಂಥ ಒಳ್ಳೆಯ ಪುಸ್ತಕವನ್ನು ಈ ಹಿಂದೆಯೇ ಓದದ ತಪ್ಪಿಗಾಗಿಯೇ ಎರಡು ತಿಂಗಳ ಈ ಓದಿನ ಶಿಕ್ಷೆಯನ್ನು ಅನುಭವಿಸಬೇಕಾಯ್ತು ಎಂದು ನಿಮಗೆ ಅನ್ನಿಸಿದರೆ, ಆ ಕಾದಂಬರಿಗಾಗಿ ಅನುಭವಿಸಿದ ಕಷ್ಟ ಸಾರ್ಥಕವಾಯ್ತು ಎಂದು ನಿಮಗೆ ಗೊತ್ತಾಗುತ್ತದೆ. ನನಗೆ ಇಂಥ ಅನುಭವ ತಂದುಕೊಟ್ಟ ಇಂಗ್ಲಿಷ್ ಕಾದಂಬರಿ ಬಹು ಚರ್ಚಿತ, ವಿಮರ್ಶಕರಿಂದ ಸೈ ಎನಿಸಿಕೊಂಡ "ಎ ಸೂಟಬಲ್ ಬಾಯ್" (೧೯೯೩, ಫೀನಿಕ್ಸ್ ಹೌಸ್, ಯುಕೆ). ಅದರ ಕರ್ತೃ ವಿಕ್ರಂ ಸೇಥ್ (೧೯೫೨-).
…ಕುವೆಂಪು ಅವರ ಬರಹಗಳಲ್ಲಿ ಮಲೆನಾಡಿನ ಚಿತ್ರಗಳೂ ಒಂದು. ಚಿತ್ರಗಳಿಲ್ಲದೆ ಮಲೆನಾಡಿನ ಸೌಂದರ್ಯವನ್ನು ಕಣ್ಣಿಗೆ ಕಟ್ಟುವಂತೆ, ಅಲ್ಲಿನ ಪ್ರಕೃತಿಯ ರಮ್ಯ ಮನೋಹರ ದೃಶ್ಯವನ್ನು ಸೆರೆಹಿಡಿಯುವಂತೆ ಮಾಡುವ, ವಿವರಿಸುವ ಅದ್ಭುತ ಶಕ್ತಿ ಕುವೆಂಪು ಅವರ ಬರಹಗಳದ್ದು. ಈ ಪುಸ್ತಕದಲ್ಲಿ ಮಲೆನಾಡಿನ ಮಡಿಲಲ್ಲಿ ಹಾಯಾಗಿದ್ದ ಕುಪ್ಪಳಿ ಮನೆ, ಕವಿಶೈಲ, ಕುಪ್ಪಳಿ ಮನೆಯ ದಕ್ಷಿಣ ಭಾಗದಲ್ಲಿ ಭೀಮಾಕಾರವಾದ ಪರ್ವತ ಶ್ರೇಣಿಗಳು, ಪಶ್ಚಿಮ ಭಾಗಗಳ ಬೆಟ್ಟಗಳು, ಪೂರ್ವಕ್ಕೆ ಹರಡಿಕೊಂಡ ಅಡಿಕೆ ತೋಟಗಳು ಮುಂತಾದವುಗಳ ವರ್ಣನೆ ಅತ್ಯದ್ಭುತವಾಗಿವೆ. ಯಾವುದೇ ಚಿತ್ರಗಳಿಲ್ಲದೆಯೂ ಅವುಗಳ ವರ್ಣನೆಯನ್ನು ಸೊಗಸಾಗಿ ಮೂಡಿಸಿ, ಓದುಗನ ಮನಪಟಲದಲ್ಲಿ ಅವರ ವರ್ಣನೆಗಳು ಹಾಗೆಯೇ ಚಿತ್ರಗಳಾಗುತ್ತಿರುವಂತೆ ಕಣ್ಣಿಗೆ ಕಟ್ಟಿದಂತೆ ಭಾಸವಾಗುತ್ತದೆ. ಪ್ರಕೃತಿ ಪ್ರೇಮಿಗಳಿಗಂತೂ ಈ ಪುಸ್ತಕ…
ಎಚ್ಚೆಸ್ವಿ ಅನಾತ್ಮಕಥನದ ಈ ಬರಹಗಳು ಅವರ ಅಂತರಂಗದಲ್ಲಿ ತುಂಬಿಕೊಂಡಿರುವ ನೆನಪುಗಳ, ಮಧುರ ಭಾವನೆಗಳ, ಅಕ್ಷರ ರೂಪಗಳು. ಸಮಕಾಲೀನ ಸಂದರ್ಭದ ಮಹತ್ವದ ಕವಿ ಮತ್ತು ನಾಟಕಕಾರ ಎಂದು ಗುರುತಿಸಲ್ಪಟ್ಟಿರುವ ಎಚ್ಚೆಸ್ವಿ 'ಅನಾತ್ಮ ಕಥನ' ಅವರು ಬರೆದಿರುವ ಆತ್ಮಕಥನಾತ್ಮಕವಾದ ಆಪ್ತ ಪ್ರಬಂಧಗಳ ಸಂಕೀರ್ಣ ಸಂಪುಟ. ಕನ್ನಡ, ಇಂಗ್ಲೀಷ್ ,ಸಂಸ್ಕೃತ ಸಾಹಿತ್ಯ ಪರಂಪರೆಯೊಂದಿಗೆ ನಡೆಸಲಾದ ನಿರಂತರವಾದ ಅನುಸಂಧಾನ ಎಚ್ಚೆಸ್ವಿ ಅವರ ಭಾವಕೋಶ ಮತ್ತು ಕಾವ್ಯವ್ಯಕ್ತಿತ್ವವನ್ನು ನಿರ್ಮಿಸಿವೆ. ಹಾಗಾಗಿ ಇವರ ಬರವಣಿಗೆಯಲ್ಲಿ ಕಾಣುವ ಆಧುನಿಕತೆಯು, ಪರಂಪರೆಯೊಂದಿಗೆ ನಡೆಸಿದ ಹೋರಾಟ ಮತ್ತು ಸಂಘರ್ಷದ ಫಲವಾಗಿ ನಿಷ್ಪನ್ನವಾದಂಥದು.
ಅನಾತ್ಮಕಥನ ಬರಹಗಳು ಎಚ್ಚೆಸ್ವಿ ಅವರ ಸುತ್ತಲಿನ ಜಗತ್ತು, ಆತ್ಮೀಯ ವ್ಯಕ್ತಿಗಳು, ಘಟನೆಗಳು, ತೀರ ಕ್ಷುದ್ರ ಎನ್ನಿಸುವಂಥಹ, ತೀರಾ…ಯಾವುದೇ ಪುಸ್ತಕವನ್ನಾದರೂ ಒಮ್ಮೆ ಸಂಪೂರ್ಣ ಓದಿ ನಂತರ ಜೋಪಾನವಾಗಿ ಅದರ ಮೂಲ ಸ್ಥಾನದಲ್ಲಿಟ್ಟುಕೊಳ್ಳುವುದು ರೂಢಿ. ಆದರೆ ಈ ಬಾರಿ ಹಾಗಾಗಲಿಲ್ಲ. ಒಮ್ಮೆ ಓದಿ ಮುಗಿಸಿದ ಬಳಿಕವೂ ಮತ್ತೆ ,ಮತ್ತೆ ಓದಬೇಕೆಂದನಿಸಿದ್ದು, ಪೂರ್ಣಚಂದ್ರತೇಜಸ್ವಿಯವರ "ಕರ್ವಾಲೋ" ಪುಸ್ತಕ. ಹಾರುವ ಓತಿಕ್ಯಾತನ ಬೆನ್ನತ್ತಿ ಹೋಗುವ ಹೆಸರಾಂತ ವಿಜ್ಞಾನಿ ಕರ್ವಾಲೋ ತೀರಾ ಹಳ್ಳಿಯಲ್ಲಿ ನಡೆಯುವ ಈ ಘಟನೆಯ ಸುತ್ತ ಸುತ್ತುವ ಕಥೆ. ಹಳ್ಳಿಯ ಮಂದಣ್ಣ, ಎಂಗ್ಟ, ಕರಿಯಪ್ಪ, ಮುಂತಾದ ಆ ಹಳ್ಳಿಯ ತೀರಾ ಸಾಮಾನ್ಯ ಜನರೊಂದಿಗೆ ಮಾತ್ರ ಬೆರೆಯುವ ವಿಜ್ಞಾನಿ ಕರ್ವಾಲೋ ಹಳ್ಳಿಯ ಕೆಲವು ಪ್ರಮುಖ ಕುಳಗಳಿಗೆ ಅಂದರೆ ದೊಡ್ಡ ಮನುಷ್ಯರಿಗೆ ಒಗಟಾಗಿಯೇ ಉಳಿಯುತ್ತಾರೆ. ಜೇನುಹುಳಗಳನ್ನು ಹಿಡಿದುಕೊಂಡು ಅವುಗಳನ್ನು ಪೆಟ್ಟಿಗೆಯಲ್ಲಿ ಕೂರಿಸಿ ವಯಸ್ಸಾಗಿದ್ದರೂ ಬುದ್ದಿ ಬೆಳೆಯಲಿಲ್ಲ ಎಂಬಂತೆ…
'ವಸಂತ' ಎಂಬ ಮಾಸಪತ್ರಿಕೆಯನ್ನು ನಡೆಯಿಸತೊಡಗಿದ್ದಾಗ, ವಾಚಕರ ಅಭಿರುಚಿಯನ್ನು ಚಿಗುರಿಸುವ ಸಲುವಾಗಿ ಅದರಲ್ಲಿ ಕಥೆ,ಕಾವ್ಯ,ಕಾದಂಬರಿಗಳನ್ನು ಬರೆದು ತುಂಬಿಸಬೇಕಾಗಿ ಬಂತು. ಹೀಗೆ ಶಿವರಾಮ ಕಾರಂತರಿಗೆ ಬರಹ ಅನಿವಾರ್ಯವಾಗಿತ್ತು. ಅನಂತರ ಪತ್ರಿಕಾರಂಗದ ಉದ್ಯೋಗ ಅವರನ್ನು ಒಂದೇ ಕಡೆ ಕುಳಿತುಕೊಳ್ಳಲು ಬಿಡಲಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಒಳಗೂ ಹೊರಗೂ ಅಲೆದಾಡುತ್ತಾ ಸುತ್ತಲಿನ ಜನಜೀವನದೊಂದಿಗೆ ಬೆರೆತು, ಅಲ್ಲಿನ ಜನ, ಆಚಾರ-ವಿಚಾರ, ಪ್ರಾಕೃತಿಕ ಸೌಂದರ್ಯ,ವಿಸ್ಮಯಗಳನ್ನು ಅನುಭವಿಸುವ ಸಂದರ್ಭ ಒದಗಿ ಬಂತು. ಇಂತಹ ಅನುಭವಗಳಿಂದ ಪ್ರೇರಿತವಾಗಿ ಮೂಡಿಬಂದ ಮೊದಲ ಕಥೆಯೇ ಚೋಮನ ದುಡಿ. ಮುಂದೆ ಪುತ್ತೂರಿನಲ್ಲಿ ನೆಲೆಸಿ ಸುತ್ತಲಿನ ಕೃಷಿಕ ಜೀವನ, ನಿತ್ಯ ಜೀವನ, ಇವುಗಳೆಲ್ಲವನ್ನು ನೋಡಿ ಬರೆಯಲು ಸ್ಪೂರ್ತಿ ಪಡೆದುದೇ -ಬೆಟ್ಟದ ಜೀವ.
ಕಾರಂತರು…ಖ್ಯಾತ ಸಾಹಿತಿ ಎಸ್.ಎಲ್ ಭೈರಪ್ಪ ಅವರ ಕೃತಿ. ಬರಹಗಾರರು ತಾವು ಇಂಥದೇ ಕಾರಣಕ್ಕಾಗಿ ಬರೆಯುತ್ತೇವೆಂದು ನಿರ್ದಿಷ್ಟ ಕಾರಣವನ್ನು ಹೊಂದಿರುವುದು ಕಷ್ಟ ಸಾಧ್ಯ. ವಿಷಯದ ಆಯ್ಕೆಗಳು ಪೂರ್ವಯೋಜಿತವಾಗಿದ್ದರೂ ಬರಹವೂ ಇದೇ ರೀತಿ ಸಾಗಬೇಕೆಂದು ಅಂದುಕೊಂಡಿದ್ದರೂ ಬರವಣಿಗೆ ಸಂದರ್ಭದಲ್ಲಿ ಅವುಗಳ ತಿರುವುಗಳು ಬದಲಾಗಿಯೇ ಆಗುತ್ತವೆ. ಹೀಗೆ ಆದಂತಹ ಬದಲಾವಣೆಗಳು ಯಾವುದೇ ಎಗ್ಗಿಲ್ಲದಂತೆ ಸಾಗಿ ಬರಹಗಾರನ ವಿಚಾರ ಲಹರಿಯನ್ನು ತನ್ನ ಕೃತಿ ಅಥವಾ ಬರಹದಲ್ಲಿ ಅಭಿವ್ಯಕ್ತಗೊಳಿಸುತ್ತದೆ.
ಬರಹ ಮುಗಿಸಿದ ಮೇಲೆ ಅಥವಾ ಪ್ರತಿಯೊಬ್ಬ ಬರಹಗಾರನಿಗೂ ಈ ಪ್ರಶ್ನೆ ಒಂದು ಬಾರಿಯಾದರೂ ತನ್ನ ಮನದಲ್ಲಿ ಈ ಪ್ರಶ್ನೆ ಮೂಡುವುದು ಸಹಜ. ಖ್ಯಾತ ಸಾಹಿತಿ ಎಸ್.ಎಲ್ ಭೈರಪ್ಪ ಅವರಿಗೂ ಈ ಪ್ರಶ್ನೆ ಕಾಡದಿರಲಿಲ್ಲ. ಇದರಿಂದಾಗಿಯೇ ಮೂಡಿ ಬಂದ ಕೃತಿಯೇ "ನಾನೇಕೆ ಬರೆಯುತ್ತೇನೆ?".…