ಪುಸ್ತಕದ ಲೇಖಕಿಯಾದ ಡಾ.ಪೂರ್ಣಿಮಾ ಕೊಡೂರು ಇವರು ಸ್ವತಃ ಆಯುರ್ವೇದ ವೈದ್ಯೆಯೂ ಆಗಿರುವುದರಿಂದ ತಮ್ಮ ವೈದ್ಯಕೀಯ ವೃತ್ತಿಯ ಜೊತೆಗೆ ಜನರಿಗೆ ಆಪ್ತವಾಗುವ ರೀತಿಯಲ್ಲಿ ಆಯುರ್ವೇದ ಮನೆ ಮದ್ದುಗಳನ್ನು ನೀಡಿದ್ದಾರೆ. ಈ ಪುಸ್ತಕದಲ್ಲಿ ನಮಗೆ ಬರುವ ಹಲವಾರು ಕಾಯಿಲೆಗಳಿಗೆ ಮನೆ ಮದ್ದುಗಳ ವಿವರಗಳಿವೆ. ನಾವಿಂದು ನಮಗೆ ಬರುವ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಿಕೊಳ್ಳುತ್ತೇವೆ. ಆದರೆ ಯಾವಾಗ ಕಾಯಿಲೆ ವಾಸಿಯಾಯಿತಾ, ಸುಮ್ಮನಾಗಿ ಬಿಡುತ್ತೇವೆ. ಹೀಗೆ ಸುಮ್ಮನಾಗುವ ಬದಲು ನಮಗೆ ಬಂದ ಕಾಯಿಲೆ ಏನು? ಯಾಕಾಗಿ ಬಂತು? ಇದರ ಹಿಂದಿನ ನೈಜ ಕಾರಣಗಳೇನು? ಎಂಬುವುದನ್ನು ಅರ್ಥೈಸಿಕೊಳ್ಳಲು ವಿಫಲರಾಗುತ್ತೇವೆ. ಇದನ್ನು ನಾವು ಪರಿಣತಿ ಪಡೆದ ವೈದ್ಯರಷ್ಟು ತಿಳಿದು ಕೊಳ್ಳದೇ ಹೋದರೂ, ನಮ್ಮ ಮಟ್ಟದಲ್ಲಿ ನಾವೊಂದಿಷ್ಟು…
ಪುಸ್ತಕ ಸಂಪದ
ನೊಬೆಲ್ ಬಹುಮಾನ ಪುರಸ್ಕೃತ ಆಂಗ್ಲ, ಸ್ಪಾನಿಷ್ ಲೇಖಕರಾದ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಇವರ ‘No one writes to the Colonel’ ಎಂಬ ಕಾದಂಬರಿಯನ್ನು ಕನ್ನಡಕ್ಕೆ ತಂದವರು ಶ್ರೀನಿವಾಸ ವೈದ್ಯ ಇವರು. ಶ್ರೀನಿವಾಸ ವೈದ್ಯ ಇವರು ಸೃಜನ ಶೀಲ ಸಾಹಿತ್ಯದಲ್ಲಿ ಅಪಾರ ಹೆಸರು ಗಳಿಸಿದ್ದಾರೆ. ಬರೆದದ್ದು ಕಡಿಮೆಯಾದರೂ ಬರೆದುದನ್ನು ಗಮನಿಸಲೇ ಬೇಕಾದ ಬರಹಗಳು ಇವರು ರಚಿಸಿದ್ದಾರೆ. ಈ ಮೇಲಿನ ಆಂಗ್ಲ ಭಾಷೆಯ ಕಿರು ಕಾದಂಬರಿಯನ್ನು ಕನ್ನಡಕ್ಕೆ ತರಬೇಕೆಂಬ ತುಡಿತದಿಂದಲೇ ಸೊಗಸಾಗಿ ಅನುವಾದ ಮಾಡಿದ್ದಾರೆ. ಈ ಕೃತಿಯ ಮೂಲ ಸ್ಪಾನಿಷ್ ಆದರೂ ಅದನ್ನು ಜೆ.ಎನ್. ಬರ್ನ್ ಸ್ಟಿನ್ ಎಂಬವರು ಆಂಗ್ಲಕ್ಕೆ ಭಾಷಾಂತರಿಸಿದ್ದಾರೆ. ಈ ಕೃತಿಯಲ್ಲಿ ಸ್ಪಾನಿಷ್ ಜನರ ಜೀವನ ಕ್ರಮ, ನಡೆ-ನುಡಿ, ನಂಬುಗೆ ಆಚರಣೆಗಳ ಬಗ್ಗೆಯೂ ಲೇಖಕರು…
ತೇಜೋ-ತುಂಗಭದ್ರ ಎನ್ನುವ ಈ ಬೃಹತ್ ಕಾದಂಬರಿಯು ಹೆಸರೇ ಹೇಳುವಂತೆ ೨ ನದಿ ದಂಡೆಯಲ್ಲಿ ಬರುವ ಲಿಸ್ಬನ್, ವಿಜಯನಗರ, ಗೋವಾ ನಗರಗಳಲ್ಲಿ ಕತೆ ಮುಂದುವರೆಯುತ್ತದೆ. ೧೫-೧೬ನೇ ಶತಮಾನದ ಹಳೆಯ ಕತೆಯಾದರೂ ಸಾರಾಂಶವು ಈಗಿನ ವರ್ತಮಾನಕ್ಕೆ ಹತ್ತಿರವಾಗುತ್ತೆ. ಆ ಶತಮಾನದ ಸಮಯದಲ್ಲಿದ್ದ ಸತಿ ಪದ್ಧತಿ, ಯಹೂದಿಗಳ ಹತ್ಯೆ, ಗುಲಾಮರ ಚಟುವಟಿಕೆಗಳು ಮತ್ತು ಅವರ ಯಾತನಾಮಯ ದಿನಗಳು ಓದುಗರ ನಿದ್ದೆಯನ್ನು ಕೆಡಿಸುತ್ತವೆ. ಲಿಸ್ಟನ್ ನಗರದಲ್ಲಿ ಶುರುವಾದ ಒಂದು ಪ್ರೇಮ ಪ್ರಸಂಗ ಭಾರತದ ತುಂಗಭದ್ರಾ ದಂಡೆಯ ವಿಜಯನಗರದಲ್ಲಿ ಹೇಗೆ ಅಂತ್ಯ ಕಾಣುತ್ತದೆ ಎಂಬುದೇ ರೋಚಕ ಸಂಗತಿ. ಲೇಖಕರಾದ ವಸುಧೇಂದ್ರ ಇವರು ಈ ಕಾದಂಬರಿ ವಿಷಯ ಸಂಗ್ರಹಣೆಗೆ ತುಂಬಾ ಕಾಲ ಸಂಶೋಧನೆ ನಡೆಸಿದ್ದಾರೆ. ಊರಿನ, ರಾಜನ ಘಟನೆಗಳ (ಉದಾ; ವಾಸ್ಕೋಡಿಗಾಮ, ಕೃಷ್ಣ ದೇವರಾಯ…
ಇಂದಿನ ದಿನಗಳಲ್ಲಿ ಎಲ್ಲರನ್ನೂ ಭೀತಿಗೊಳಗಾಗಿಸುವುದು ದೇಹದ ಸ್ಥೂಲತೆ. ದೇಹದ ತೂಕ ಅಧಿಕವಾದಂತೆಲ್ಲಾ ದೇಹ ಸ್ಥೂಲವಾಗುತ್ತದೆ. ಇದರಿಂದ ಮುಕ್ತರಾಗಲು ದೇಹದ ದಂಡನೆ ಅಗತ್ಯವಾಗಿರುತ್ತದೆ. ದೇಹದ ಸೌಷ್ಟವ, ಸಾಮರ್ಥ್ಯ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಕಿರುಹೊತ್ತಿಗೆಯಲ್ಲಿ ಅನೇಕ ಪರಿಹಾರಗಳು ಹಾಗೂ ಸ್ಥೂಲಕಾಯದಿಂದ ಅನುಭವಿಸಬೇಕಾಗ ಬಹುದಾದ ಅನಾರೋಗ್ಯಗಳ ಬಗ್ಗೆ ವಿವರಣೆಗಳಿವೆ.
ಇಂದಿನ ಒತ್ತಡದ ದಿನಗಳಲ್ಲಿ ದಿನಕ್ಕೊಂದು ರೀತಿಯ ಸಮಸ್ಯೆಗಳು ವ್ಯಕ್ತಿಗೆ ತಪ್ಪಿದಲ್ಲ. ಅದರಲ್ಲೂ ಒಂದೇ ಜಾಗದಲ್ಲಿ ಕುಳಿತು ಕೆಲಸ ಮಾಡುವವರಿಗೆ ಹಲವಾರು ಆರೋಗ್ಯದ ಸಮಸ್ಯೆಗಳು ಬರುತ್ತವೆ. ಇದರಿಂದಲೇ ಬೊಜ್ಜು ಅಥವಾ ಸ್ಥೂಲಕಾಯತೆ ಬರುತ್ತದೆ. ಅದರ ಹಿಂದೆಯೇ ಮಧುಮೇಹ, ಅಧಿಕ ರಕ್ತದೊತ್ತಡ,…
ಡಾ.ಕೆ.ಸಿ.ಶಶಿಧರ್ ಇವರು ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ , ಶಿವಮೊಗ್ಗ ಇಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಶಿವಮೊಗ್ಗ ವಿಶ್ವ ವಿದ್ಯಾಲಯವು ನೇಗಿಲ ಮಿಡಿತ ಎನ್ನುವ ಕೃಷಿ ಮಾಸ ಪತ್ರಿಕೆಯನ್ನು ಹೊರ ತಂದಾಗ ಪ್ರಥಮ ಸಂಪಾದಕರಾಗಿದ್ದರು. ‘ಮಣ್ಣ ಮಡಿಲಲ್ಲಿ' ಎನ್ನುವ ಅಂಕಣವನ್ನು ಬಹುಕಾಲ ಕೆ.ಸಿ.ಶಶಿಧರ್ ಇವರು ಬರೆಯುತ್ತಾ ಬಂದರು. ಇದು ಬಹಳಷ್ಟು ಕೃಷಿಕರ ಆಸಕ್ತಿಯನ್ನೂ ಕುದುರಿಸಿತ್ತು.
ಸುಮಾರು ೨೫ ಲೇಖನಗಳನ್ನು ಈ ಪುಸ್ತಕವು ಅಡಕ ಗೊಂಡಿದೆ. ಪೂರ್ತಿ ಪುಸ್ತಕವು ಹೊಳಪಿನ ಕಾಗದದೊಂದಿಗೆ ಛಾಯಾಚಿತ್ರಗಳೊಂದಿಗೆ ವರ್ಣರಂಜಿತವಾಗಿದೆ. ಸನ್ನಿ ಡಿ'ಸೋಜಾ, ಅವಿನಾಶ್, ಮಹದೇವ ಸ್ವಾಮಿಯವರಂಥಹ ಹಲವಾರು ಉತ್ಸಾಹಿ ಕೃಷಿಕರ ಪರಿಚಯ, ಹಲವಾರು ಬೆಳೆಗಳ ಮಾಹಿತಿ, ಸೋಲಾರ್, ಎಲ್ ಇ…
ಶ್ರೀಮತಿ ಸುಮನ್ ಕೆ. ಚಿಪ್ಳೂಣ್ ಕರ್ ಇವರು ಬರೆದ ಮುದ್ರಾ ವಿಜ್ಞಾನ ಮತ್ತು ಆರೋಗ್ಯ ಪುಸ್ತಕ ಮಾಹಿತಿ ಪೂರ್ಣವಾಗಿದೆ. ಬೆನ್ನುಡಿಯಲ್ಲಿ ಡಾ.ತಾಳ್ತಜೆ ವಸಂತ್ ಕುಮಾರ್ ಇವರು ಬರೆಯುತ್ತಾರೆ- ಜೀವನ ಪದ್ಧತಿಗಳು ನಿಸರ್ಗದ ಶಿಶುವಾದ ಮಾನವನನ್ನು ಅವನ ಮೂಲ ಶಕ್ತಿ ಸ್ರೋತದಿಂದ ಬಹುದೂರಕ್ಕೆ ಕೊಂಡೊಯ್ಯುತ್ತಿವೆ. ಆಹಾರ, ವಿಹಾರ, ಚಿಂತನೆ, ವಿಶ್ರಾಂತಿ ಮುಂತಾದ ಸಾಮಾನ್ಯ ದಿನಚರ್ಯೆಗಳು ಕೂಡಾ ಅನಿಯಂತ್ರಿತವಾಗಿ ಯೋಚನೆ-ಯೋಜನೆಗಳ ಸಾಂಗತ್ಯಗಳಿಂದ ದೂರವಾಗುತ್ತಿವೆ. ಈ ವಿಕೃತ ವಿಧಾನಗಳ ಪ್ರತ್ಯಕ್ಷ-ಪರೋಕ್ಷ ಪರಿಣಾಮಗಳು ಮನುಷ್ಯನ ಬದುಕನ್ನು ಅಸಹನೀಯಗೊಳಿಸುತ್ತಿವೆ. ಈ ಅತಂತ್ರಾವಸ್ಥೆಯಿಂದ ಪಾರಾಗಿ ಸ್ವಚ್ಚ್, ಸ್ವಸ್ಥ ಸ್ಥಿತಿಯನ್ನು ಊರ್ಜಿತಕ್ಕೆ ತರಬೇಕೆಂಬ ತುಡಿದದಿಂದ ಶೀಮತಿ ಸುಮನ್ ಇವರು ಪೂರ್ಣ ದೃಷ್ಟಿಯಿಂದ ಪ್ರಸ್ತುತ ಕೃತಿ 'ಮುದ್ರಾ ವಿಜ್ಞಾನ…
ಪತ್ರಕರ್ತ ತೀರ್ಥರಾಮ ವಳಲಂಬೆಯವರ ಲೇಖನಿಯಿಂದ ಮೂಡಿ ಬಂದ ಒಂದು ಅಪೂರ್ವ ಪುಸ್ತಕ ಎಂದರೆ ತಪ್ಪಾಗದು. ಪಾಕೇಟ್ ಸೈಜ್ ಆಕಾರ ಹೊಂದಿರುವ ಈ ಪುಸ್ತಕವನ್ನು ತೀರ್ಥರಾಮ ಇವರು ಬಹಳಷ್ಟು ಅಧ್ಯಯನ ಮಾಡಿ ಬರೆದಿದ್ದಾರೆ. ಅವರೇ ಹೇಳಿರುವಂತೆ ಈ ಪುಸ್ತಕದ ಕಲ್ಪನೆ ಸಾಕಾರಗೊಳ್ಳಬೇಕಾದರೆ ಅದಕ್ಕಾಗಿ ನಾನು ಸಾಕಷ್ಟು ಅಧ್ಯಯನ ಹಾಗೂ ಅಭ್ಯಾಸಗಳನ್ನು ಮಾಡಬೇಕಾಗಿತ್ತು. ಆಧುನಿಕ ವಿಜ್ಞಾನ ಇಷ್ಟೊಂದು ಮುಂದುವರೆದಿರುವಾಗ ಜನರನ್ನು ವೈಜ್ಞಾನಿಕವಾಗಿ ಯೋಚಿಸಲು ಪ್ರೇರೇಪಿಸಬೇಕೇ ಹೊರತು ನಮ್ಮ ಯಾವುದೇ ಬರವಣಿಗೆಯ ಸಾಲುಗಳು ಜನರಲ್ಲಿ ಗೊಂದಲಗಳನ್ನು ಮೂಡಿಸಬಾರದು ಎನ್ನುವ ನಿಲುವು ನನ್ನದಾಗಿತ್ತು. ಈ ಮಾತುಗಳನ್ನು ವಳಲಂಬೆಯವರು ಉಳಿಸಿಕೊಂಡಿದ್ದಾರೆ. ಅವರ ಬಿಡುವಿಲ್ಲದ ಕಾರ್ಯ ಚಟುವಟಿಕೆಗಳ ನಡುವೆ ಈ ಅಧ್ಯಯನ, ಯೋಗ, ಪ್ರಾಣಾಯಾಮ, ಸನ್ಮೋಹಿನಿ, ರೇಖಿ, ಮುದ್ರೆ...…
ಭಾರತದ ಸ್ವಾತಂತ್ರ್ಯದ ನಂತರ ನಡೆದ ಅತ್ಯಂತ ದೊಡ್ಡ ದುರ್ಘಟನೆಯೆಂದರೆ ಮಹಾತ್ಮಾ ಗಾಂಧೀಜಿಯವರ ಹತ್ಯೆ. ಈ ಹತ್ಯೆಯನ್ನು ಮಾಡಿದರು ನಾಥೂರಾಮ ಗೋಡ್ಸೆ ಮತ್ತು ಅವರ ಸಂಗಡಿಗರು. ೧೯೪೮ರ ಜನವರಿ ೩೦ರಂದು ನಾಥೂರಾಮ ಗೋಡ್ಸೆ ಮಹಾತ್ಮರ ಹತ್ಯೆ ಮಾಡಿದ ನಂತರ ೧೫ ನವೆಂಬರ್ ೧೯೪೯ರಂದು ನ್ಯಾಯಾಲಯವು ಲಭ್ಯ ಸಾಕ್ಷ್ಯಾಧಾರಗಳ ಅಡಿಯಲ್ಲಿ ನಾಥೂರಾಮ ಗೋಡ್ಸೆ ಮತ್ತು ನಾರಾಯಣ ಆಪ್ಟೆಯವರನ್ನು ಅಂಬಾಲ ಜೈಲಿನಲ್ಲಿ ಗಲ್ಲು ಶಿಕ್ಷೆಗೆ ಒಳಪಡಿಸಲಾಗುತ್ತೆ, ಈ ಹತ್ಯಾ ಕಾಂಡದಲ್ಲಿ ನಾಥೂರಾಮ ಗೋಡ್ಸೆಯ ಕಿರಿಯ ಸಹೋದರ ಗೋಪಾಲ ಗೋಡ್ಸೆಯೂ ಅಪರಾಧಿ ಎಂದು ನ್ಯಾಯಾಲಯವು ತೀರ್ಮಾನಿಸಿ ಅಜನ್ಮ ಗಡಿಪಾರಿನ ಶಿಕ್ಷೆಗೆ ಗುರಿ ಮಾಡುತ್ತದೆ. ೧೯೬೪ರಂದು ಶಿಕ್ಷೆ ಮುಗಿಸಿ ಹೊರಗೆ ಬಂದ ಇವರು ಗಾಂಧೀ ಹತ್ಯೆಯ ಹಿಂದಿನ ಕಾರಣಗಳು, ತೀರ್ಮಾನಗಳು ಇವುಗಳ ಬಗೆಗೆ ತಮ್ಮ ಅನಿಸಿಕೆಯನ್ನು ಬರೆದು…
'ಸ್ವಪ್ನ ಸಾರಸ್ವತ' ಹೆಸರೇ ಹೇಳುವಂತೆ ಸಾರಸ್ವತ ಸಮುದಾಯದವರ ಅನುಭವ ಕಥಾನಕದ ಸಾರ. ಇದರ ಲೇಖಕರಾದ ಗೋಪಾಲಕೃಷ್ಣ ಪೈ ಇವರು ಖ್ಯಾತ ಕವಿ ಗೋಪಾಲಕೃಷ್ಣ ಅಡಿಗರ ನಿಕಟವರ್ತಿಗಳು. ಆಳವಾದ ಶೋಧನೆಯನ್ನು ಮಾಡಿ ಈ ಕಾದಂಬರಿಯನ್ನು ಬರೆದಿದ್ದಾರೆ. ಮೂಲ ವ್ಯಕ್ತಿ, ಸ್ಥಳಗಳ ಆಶಯಗಳಿಗೆ ಧಕ್ಕೆ ಬಾರದಂತೆ ಈ ಕಾದಂಬರಿಯ ಪಾತ್ರಗಳನ್ನು ನಿರೂಪಿಸಿದ್ದಾರೆ. ಈ ನಿರಂತರ ಶೋಧದ ಫಲವೇ ಕಳೆದ ನಾಲ್ಕು ನೂರು ವರುಷಗಳಲ್ಲಿ ಹಾದು ಬಂದ ಸಾರಸ್ವತ ಸಮುದಾಯದ ಅನುಭವಗಳ ಮೂಲಕ ಚರಿತ್ರೆ ಹಾಗೂ ವರ್ತಮಾನ ಜೀವನದ ಪರಸ್ಪರ ಮುಖಾಮುಖಿಗಳನ್ನೂ ಸಂಬಂಧಗಳನ್ನೂ ವೈಯಕ್ತಿಕ ಅನುಭವದ ನೆಲೆಗಳಲ್ಲಿ ಕೌಟುಂಬಿಕ ಸಂದರ್ಭಗಳಲ್ಲಿಟ್ಟು ಪರೀಕ್ಷಿಸುತ್ತದೆ ಈ ಕಾದಂಬರಿ.
ನಾಲ್ಕು ನೂರು ವರುಷಗಳ ಹಿಂದೆ ಗೋವಾದಲ್ಲಿ ಸಂತೃಪ್ತವಾಗಿದ್ದ ಸಾರಸ್ವತ ಬ್ರಾಹ್ಮಣ ಕುಟುಂಬಗಳು ಪೋರ್ಚ್ ಗೀಸರ…
ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು ಪುಸ್ತಕವು ಬಾಂಗ್ಲಾ ಹಿಂದುಗಳ ಮೇಲಾದ ಇಸ್ಲಾಮಿಕ್ ಕ್ರೌರ್ಯದ ಕತೆಗಳನ್ನು ಹೇಳುತ್ತದೆ. ಬೆನ್ನುಡಿಯಲ್ಲಿ ಭಾರತದ ಗೃಹ ಮಂತ್ರಿ ಅಮಿತ್ ಶಾ ಬರೆಯುತ್ತಾರೆ ೧೯೪೭ರಲ್ಲಿ ಭಾರತದ ವಿಭಜನೆ ಆಗದೇ ಇರುತ್ತಿದ್ದರೆ ಇಂದು ಸಿಎಎ ಅಗತ್ಯ ಇರುತ್ತಿರಲಿಲ್ಲ. ಅದರಲ್ಲೂ ಜಾತಿಯ ಆಧಾರದಲ್ಲಿ ದೇಶವನ್ನು ವಿಭಜಿಸಿದ್ದು ದೊಡ್ಡ ತಪ್ಪು.
ಭಾರತೀಯ ಮುಸಲ್ಮಾನರು ರಾಷ್ಟ್ರಪತಿ, ಉಪರಾಷ್ಟ್ರಪತಿ, ಸಭಾಪತಿ, ಚುನಾವಣಾ ಆಯುಕ್ತರಾದರು. ಆದರೆ ಪಾಕ್-ಬಾಂಗ್ಲಾ-ಅಫ್ಘಾನಿಸ್ಥಾನದ ಅಲ್ಪಸಂಖ್ಯಾತರು ತಮ್ಮ ಧರ್ಮ, ಜೀವ ಮತ್ತು ಮಹಿಳೆಯರ ಗೌರವದ ರಕ್ಷಣೆಗಾಗಿ ಭಾರತಕ್ಕೆ ಶರಣಾರ್ಥಿಗಳಾಗಿ ಬಂದಿದ್ದಾರೆ. ಅವರ ರಕ್ಷಣೆ ನಮ್ಮ ಜವಾಬ್ದಾರಿ.
ನಾಲ್ಕು ಮಂದಿ ಲೇಖಕರು ವಿನಾಯಕ ಭಟ್ ಮೂರೂರು, ರೋಹೀತ್ ಚಕ್ರತೀರ್ಥ, ಗೀರ್ವಾಣಿ ಮತ್ತು…