ಪುಸ್ತಕ ಸಂಪದ

  • ನಾನು ಕೂಡಾ ಎಲ್ಲಾ ಪುಸ್ತಕ ಪ್ರೇಮಿಗಳಂತೆ! ಓದಿದ್ದಕ್ಕಿಂತ ಹೆಚ್ಚಾಗಿ ಆ ಪುಸ್ತಕ ಓದಬೇಕು, ಈ ಪುಸ್ತಕ ಓದಬೇಕು ಎನ್ನುವ ಪಟ್ಟಿಯೇ ದೊಡ್ಡದು! ಜೊತೆಗೆ ಒಮ್ಮೆ ಓದಲು ಕುಳಿತರೆ, ಆ ಪುಸ್ತಕ ಪೂರ್ತಿ ಮುಗಿಯುವ ತನಕ ಕುಳಿತಲ್ಲಿಂದ ಏಳಲು ಮನಸ್ಸೇ ಬಾರದು. ಹಾಗಾಗಿ ದೊಡ್ಡ ಪುಸ್ತಕಗಳನ್ನು ಓದುವ ಸಾಹಸವೇ ಮಾಡುವುದಿಲ್ಲ. ಮಾಡಿದರೂ ಅದೆಲ್ಲಾ ರಜವಿರುವಾಗ ಮಾತ್ರ. ಏನಿದ್ದರೂ ಸಣ್ಣ ಕಥೆಗಳು, ಚುಟುಕಗಳು, ಪ್ರಬಂಧಗಳು. ಅದರಲ್ಲೂ ಈ ಲಘು ಹರಟೆಗಳೆಂದರೆ ಬಲು ಪ್ರೀತಿ. ಸಮಯ ಸಿಕ್ಕಾಗಲೆಲ್ಲಾ ಯಾವುದನ್ನು ಓದಬೇಕು ಎಂದು ಯೋಚನೆ ಮಾಡುವುದರಲ್ಲೇ ನನ್ನ ವೇಳೆ ಕಳೆಯುವುದರಲ್ಲಿ ನನಗೆ ಹೆಚ್ಚಿನ ಪರಿಣತಿ! ಇಲ್ಲವೇ ತಿರುಪತಿ ಚೌರದ ಹಾಗೆ ಎಲ್ಲಾ ಪುಸ್ತಕಗಳನ್ನು ಅರ್ಧರ್ಧ ಓದುವ ಚಟ. ಆದರೆ ಈ ಸಲ ಮಾತ್ರ ಹಾಗಾಗೊಡಲಿಲ್ಲ. ಸಿಕ್ಕ ಅಲ್ಪ…

  • ದೇಸೀತನದ ಘಮಲಿಗೆ ಆಧುನಿಕತೆಯ ಬಡಿವಾರ

    ಚ. ಹ. ರಘುನಾಥರ ಬಿಡಿ ಬರಹಗಳನ್ನು ಓದಿದಾಗೆಲ್ಲಾ ಅವರೊಬ್ಬ ಸಾಹಿತ್ಯದ ವಿನಮ್ರ ವಿದ್ಯಾರ್ಥಿಯೆಂದು ಮತ್ತೆ ಮತ್ತೆ ಮನದಟ್ಟಾಗುತ್ತದೆ. ಸೂಕ್ಷ್ಮ ಮನಸ್ಸಿನ ಅಂತರ್ಮುಖೀ ವ್ಯಕ್ತಿತ್ವವೊಂದು ಸುತ್ತಣ ವಿವರಗಳನ್ನು, ಘಟನೆಗಳನ್ನು ಗಮನಿಸಿದ, ಗ್ರಹಿಸಿದ ಮತ್ತವುಗಳನ್ನು ಅತಿ ವಿಶಿಷ್ಟತೆಯಿಂದ ಬರಹಗಳನ್ನಾಗಿಸುವ ಕಲೆ ಅವರಿಗೆ ಸಿದ್ಧಿಸಿದೆ. ಈಗಾಗಲೇ ಕವಿಯಾಗಿ, ಕಥೆಗಾರನಾಗಿ ಹೊಸ ಪೀಳಿಗೆಯ ಲೇಖಕರ ನಡುವೆ ತಮ್ಮದೇ ಛಾಪನ್ನಿರಿಸಿಕೊಂಡಿರುವ ರಘುನಾಥರ ಪ್ರಬಂಧ ಸಂಕಲನ " ರಾಗಿಮುದ್ದೆ" ದೇಸೀತನದ ಘಮಲನ್ನು ನೆನಪಿಸುತ್ತಲೇ ಆಧುನಿಕ ಬಡಿವಾರಗಳನ್ನು ಅಣಕಿಸುತ್ತದೆ, ವಿಮರ್ಶಿಸುತ್ತದೆ.

    ಆತ್ಮೀಯತೆಯಿಂದ ನೇರವಾಗಿ ಸಹಜವಾಗಿ ಸಂಕೋಚಗಳಿಲ್ಲದೆ ತಮಗನಿಸಿದ್ದನ್ನು ದಿಟವಾಗಿ…

  • 'ಬೆಳಗೆರೆ ಕೃಷ್ಣಶಾಸ್ತ್ರಿ'ಗಳು ಬರೆದಿರುವ ಅವರ ಸ್ವಾನುಭವದ ಒಂದು ಕಥನ- 'ಯೇಗ್ದಾಗೆಲ್ಲಾ ಐತೆ'. 'ಮುಕುಂದೂರು ಸ್ವಾಮಿ'ಗಳ ನಿತ್ಯ ಜೀವನದ ತಂತುಗಳನ್ನು ತಮ್ಮ ಅನುಭವಗಳೊಂದಿಗೆ ಹೇಳುತ್ತಾ ಹೋಗುವ ರೀತಿ ನಿಜಕ್ಕೂ ಅಪ್ಯಾಯಮಾನವಾದುದು. ಕನ್ನಡ ಆಧ್ಯಾತ್ಮಿಕ ರಂಗದಲ್ಲಿ ತಮ್ಮದೇ ಆದ ಸ್ಥಾನವನ್ನು ಹೊಂದಿರುವ ಕೃಷ್ಣಶಾಸ್ತ್ರಿಗಳು ಪ್ರಸ್ತುತ ಬರಹದಲ್ಲಿ ಯಾವುದೋ ಒಂದು ಅರಿಯದ ಲೋಕಕ್ಕೆ ನಮ್ಮನ್ನು ಕರೆದುಕೊಂಡುಹೋಗುತ್ತಾರೆ. ಈ ಅನುಭವವನ್ನು ಪಡೆಯಲೋಸುಗವಾದರೂ ಪ್ರತಿಯೊಬ್ಬರೂ ಇದನ್ನು ಓದಲೇಬೇಕಿದೆ. ನಾನು 'ಅಶಿಸ್ತಿನಿಂದ ಬದುಕಿರಿ ಆರೋಗ್ಯವಾಗಿರಿ' ಎಂಬ ಪುಸ್ತಕವನ್ನು ಓದುವಾಗ ಕೃಷ್ಣಶಾಸ್ತ್ರಿಗಳ 'ಯೇಗ್ದಾಗೆಲ್ಲಾ ಐತೆ' ಪುಸ್ತಕದ ಬಗೆಗೆ ಉಲ್ಲೇಖವಿದುದ್ದನು ಕಂಡು ಮನೆಯಲ್ಲಿಯೇ ಇದ್ದೂ ನಾನಿನ್ನು ಓದದಿದ್ದ ಪುಸ್ತಕದ ಬಗೆಗೆ ಗಮನ…

  • ನಾನು ಈ ಮುಂಚೆ ಭೈರಪ್ಪನವರ ಕಾದಂಬರಿಗಳನ್ನು ಯಾಕೋ ಹೆಚ್ಚು ಓದಿಯೇ ಇಲ್ಲ. ಅದರಿಂದ ನಾನು ಎಂತಹ ತಪ್ಪು ಮಾಡಿದ್ದೆನೆಂದು ನನಗೆ ಇತ್ತೀಚೆಗೆ ತಿಳಿಯಹತ್ತಿತ್ತು. ಅವರ ಆವರಣ,ದಾಟು,ಗೃಹಭಂಗ ಕಾದಂಬರಿಗಳನ್ನು ಅವು ದೊರೆತಾಗಿನಿಂದ ಒಂದೇ ಉಸಿರಿಗೆ ಓದಿ ಮುಗಿಸಿದ್ದೆ. ಆದರೆ ಭೈರಪ್ಪನವರ 'ಪರ್ವ' ಕಾದಂಬರಿ ಮನೆಯಲ್ಲೆ ಇದ್ದರೂ ಆಮೇಲೆ ಓದಿದರಾಯ್ತೆಂಬ ಉದಾಸೀನ. ಅವರ ಕಾದಂಬರಿಗಳ ಮೇಲೆ ಒಲವು ಬೆಳೆದಿದ್ದರೂ,ಇದು ಮಹಾಭಾರತದ ಕಥೆಯಲ್ಲವೇ ಓದೋಣ ಎಂಬ ಮುಂದೂಡುವಿಕೆಯ ನಂತರ ಕಳೆದ ವಾರ ಅದನ್ನು ಕೈಗೆ ತೆಗೆದುಕೊಂಡೆ. ಕಾದಂಬರಿಯ ಆರಂಭ ಶಲ್ಯ ಮತ್ತು ಆತನ ಮೊಮ್ಮಗಳ ಮಾತಿನೊಂದಿಗೆ ಆಗುವುದರೊಂದಿಗೆ ನಾನೂ ಅಲ್ಲೇ ಕುಳಿತು ಕುತೂಹಲದಿಂದ ಆಲಿಸುತ್ತಿರುವವಳ ಹಾಗೆ ನಾನೂ ಕೆಲವು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದು ಸಮಾಧಾನಗೊಂಡು ಮುಂದುವರೆದಂತೆ…

  • ಪೌಲೋ ಕೊಯ್ಲೋನ ಅಲ್ಕೆಮಿಸ್ಟ್ ಕಥೆ ಓದಿದೆ. ಸರಳವಾದ ಕಥೆ ಓದುತ್ತಿದ್ದಂತೆ ನಮ್ಮದೇ ನೆಲದ ಹಲವು ಕಥೆಗಳನ್ನು ನೆನಪಿಸಿತು. ಡೆಸ್ಟಿನಿ ಅಥವಾ ನಿಜವಾದ ನೆಲೆಯನ್ನು ಹುಡುಕುವವರು ದಾರಿಯಲ್ಲಿ ಬರುವ ಎಡರುಗಳಿಗೆ ಹೆದರುವದಿಲ್ಲ, ಅವರ ಆತ್ಮ ಸ್ಥೈರ್ಯ ದೊಡ್ಡದು, ಎಂತಹ ಪರೀಕ್ಷೆಯ ಗಳಿಗೆಯಲ್ಲೂ ಅವರು ಕಂಗೆಡುವದಿಲ್ಲ. ಹುಡುಕಾಟದ ಹಾದಿಯ ಶಕುನಗಳನ್ನು ಗ್ರಹಿಸುತ್ತಾರೆ. ತಮ್ಮ ಎದೆಯಾಳದ ಧ್ವನಿಯನ್ನು ಯಾವಾಗಲೂ ಕೇಳುತ್ತಾರೆ, ಅದರಂತೆ ನಡೆಯುತ್ತಾರೆ. ತಮ್ಮ ಹತ್ತಿರ ಭವಿಷ್ಯದೊಳಗೆ ಇಣುಕುವ ಯಂತ್ರವಿದ್ದರೂ ಅದರ ನೆರವನ್ನು ಪಡೆಯುವದಿಲ್ಲ ಬದಲಿಗೆ ತಮ್ಮದೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಈ ಗುಣಗಳಿಗೆ ದೇಶ ಕಾಲಗಳ ಎಲ್ಲೆ ಇಲ್ಲ. ಇವುಗಳಲ್ಲಿ ಕೆಲವು ಅಲ್ಕೆಮಿಸ್ಟಿನ ಸಾಂಟಿಯಾಗೋಗೆ ಸ್ವಾಭಾವಿಕವಾಗಿ ಬಂದಿರುತ್ತವೆ, ಇನ್ನು ಕೆಲವನ್ನು…

  • ಮನುಷ್ಯನ ಬದುಕೇ ಒಂದು ಪಯಣ. ಇದು ನಿರಂತರವೂ ಹೌದು. ಅವನು ತನ್ನ ಪಯಣದಲ್ಲಿ ಎದುರಿಸ ಬೇಕಾದ ಮತ್ತು ಎದುರಾಗಬಹುದಾದ ಸಂಗತಿಗಳನ್ನು ತಿಳಿದುಕೊಂಡು ತನ್ನ ಪಯಣದ ದಾರಿಯನ್ನು ಸುಗಮಗೊಳಿಸಲು ಪ್ರಯತ್ನಿಸುತ್ತಾನೆ. ಆದರೆ ಈ ಪಯಣ ಅವನ ಅನುಭವದ ಮೂಟೆಯಾಗಬಹುದು ಅಥವಾ ಮುಂದಿನ ಪೀಳಿಗೆಯ ಊಹನೆಯೂ ಆಗಿರಬಹುದು. ಇಂತಹ ಅದೆಷ್ಟೋ ಕಥನಕಗಳು ನಮಗೆ ದೊರೆಯುತ್ತವೆ. ಅದರಲ್ಲೂ ಪಾಶ್ಚಾತ್ಯರು ಸಾಹಸಿಗಳು ಮತ್ತು ಧೈರ್ಯಶಾಲಿಗಳು. ಅವರ ಒಂದೊಂದು ಸಾಹಸಗಳೂ ಹೊಸ ಹೊಸ ಆವಿಷ್ಕಾರಗಳಿಗೆ ನಾಂದಿಯೂ ಹೌದು. ಅಂತಹ ಅನುಭವ ಕಥನಗಳು ಓದುಗನಲ್ಲಿಯೂ ಕುತೂಹಲ ಮೂಡಿಸಿ, ಹೊಸದೊಂದು ಅನುಭವವನ್ನು ಬಿಚ್ಚಿಡುತ್ತವೆ. ಅಂತಹ ಪಯಣದ, ಅದರಲ್ಲೂ ಸಮುದ್ರಯಾನದ ಪ್ರಯಾಣವನ್ನು `ಪಶ್ಚಿಮದ ಪಯಣಿಗರು' ಅನ್ನುವ ಪುಸ್ತಕದ ಮೂಲಕ ಕನ್ನಡಿಗರಿಗಾಗಿ ಅನುವಾದಿಸಿರುವವರು ಬಿ. ಎಸ್.…

  • ’ಹಳ್ಳ ಬಂತು ಹಳ್ಳ’: ಇತಿಹಾಸದ ಹಿಂದಿನ ಕಥನ ಒಂದು ಕಾಲದ ಇತಿಹಾಸವನ್ನು ತಿಳಿಯಲು ಆ ಕಾಲಕ್ಕೆ ಸಂಬಂಧಿಸಿದ ಇತಿಹಾಸ ಪುಸ್ತಕಗಳನ್ನಷ್ಟೇ ಓದಿದರೆ ಸಾಲದು. ಆ ತಿಳುವಳಿಕೆ ಅಪೂರ್ಣ ಮತ್ತು ಸೀಮಿತವಾದುದಾಗಿರುತ್ತದೆ. ಆ ಕಾಲದಲ್ಲಿ ಆಳಿದ್ದವರ ಮತ್ತು ಹೆಚ್ಚೆಂದರೆ, ಅವರ ವಿರುದ್ಧ ಪಾಳೆಯದವರ ದೃಷ್ಟಿಕೋನಗಳ ಮೂಲಕ ಅಥವಾ ಅವೆರಡರ ನಡುವಿನ ಸಂಘರ್ಷದಲ್ಲಿ ಮೂಡುವ ಬದುಕಿನ ಸ್ಥೂಲ ಚಿತ್ರವಷ್ಟೇ ಅಲ್ಲಿ ದೊರಕಬಹುದು. ಈಚಿನ ದಿನಗಳಲ್ಲಿ ಇತಿಹಾಸವೆಂಬುದು ಸಾಹಿತ್ಯ, ಸಂಸ್ಕೃತಿ, ಸಮಾಜಶಾಸ್ತ್ರ ಇತ್ಯಾದಿ ನೆಲೆಗಳ ಒಂದು ಬಹುಶಿಸ್ತೀಯ ಅಧ್ಯಯನವಾಗಿ ಬೆಳೆಯುತ್ತಿರುವುದಾದರೂ, ಅದಕ್ಕಿನ್ನೂ ತಾನು ದಾಖಲಿಸುವ ಕಾಲಾವಧಿಯ ಮಾನವ ಸ್ಪಂದನೆಯ ಜೀವಂತ ಚಿತ್ರವನ್ನು ಕೊಡುವ ಶಕ್ತಿ ಸಂಪನ್ನವಾಗಿಲ್ಲ. ಬಹುಶಃ ಅದು ಅದರ ಉದ್ದೇಶವೂ ಆಗಿರಲಿಕ್ಕಿಲ್ಲ. ಅದರ…

  • "ಭಕ್ತಾಷ್ಟಕ," ಪುಸ್ತಕದ ಸಂಪಾದಕ ಕರ್ತೃ, ಡಾ. ಶ್ರೀಪಾದ್ ರವರು, ಒಬ್ಬ ಭೌತಶಾಸ್ತ್ರದ ವಿದ್ಯಾರ್ಥಿ. ತಮ್ಮ ಪ್ರಮುಖ ಕೃಷಿ, ವಿಜ್ಞಾನವಾದಾಗ್ಯೂ ಪಾರಮಾರ್ಥದಲ್ಲಿ ವಿಶೇಷವಾದ ಆಸಕ್ತಿ, ಗೌರವ, ಹಾಗೂ ಒಲವುಳ್ಳವರು. ಇದಕ್ಕೆ ಅವರ ಮನೆತನದ ಪರಿಸರವೇ ಪ್ರಮುಖಕಾರಣ. ವಿಚಾರವಂತ ತಂದೆತಾಯಿ, ಅಜ್ಜ ಅಜ್ಜಿ, ಚಿಕ್ಕಪ್ಪ ಇವರುಗಳ ಆಶೀರ್ವಾದ ಹಾಗೂ ಜೀವನಶೈಲಿ, ಲೇಖಕರ ಹೃದಯದಲ್ಲಿ ಎಲ್ಲೋ ಒಂದು ಕಡೆ ಅಚ್ಚಾಗಿರುವ ಕಾರಣದಿಂದಲೇ, ಶ್ರೀಯವರ ಉಪನ್ಯಾಸಗಳನ್ನು ಆಲಿಸುತ್ತಿದ್ದಂತೆಯೇ ಆ ಸಂಸ್ಕಾರ ಅವರಲ್ಲಿ ಜಾಗೃತವಾಗಿ, ಈ ಒಂದು ಸತ್ಕಾರ್ಯಕ್ಕೆ ಎಡೆಮಾಡಿ ಕೊಟ್ಟಿರುವುದು, ಅವರನ್ನು ತೀರಾ ಹತ್ತಿರದಿಂದ ಗಮನಿಸುತ್ತಿರುವ ನನ್ನ ಗಮನಕ್ಕೆ ಬರುತ್ತಿದೆ. ನನಗೆ ಅತ್ಯಂತ ಸಂತೋಷವೆಂದರೆ, ಇಂದಿನ ನವಯುವಕರು, ಅಧ್ಯಾತ್ಮದಲ್ಲಿ ಆಸಕ್ತಿಯನ್ನು ಹೊಂದಿ ಅದನ್ನು…

  • ಲೇಖಕನ ಬಗ್ಗೆ – ಜೋನಾಥನ್ ಸ್ವಿಫ್ಟ್ ಒಬ್ಬ ಹದಿನೇಳನೇ ಶತಮಾನದ ವಿಭಿನ್ನ ವ್ಯಕ್ತಿ. ಈತ ಜನರನ್ನು ಒಂದು ಒಂದು ಪಂಗಡವಾಗ್ ಪ್ರೀತಿಸಿದ, ವ್ಯಕ್ತಿಗತವಾಗಿ ದ್ವೇಷಿಸಿದ. ಮಾನವ ಸ್ವಾತಂತ್ರ್ಯದ ಪ್ರತಿಪಾದಕನಾಗಿದ್ದ ಜೋನಾಥನ್ ಒಬ್ಬ ಸಾಹಸಿ ಹಾಗೂ ವಿಕ್ಶಿಪ್ತ ಮನದ ವ್ಯಕ್ತಿ. ತನ್ನ ಕಷ್ಟ ಜೀವನದ ಮಧ್ಯೆ ಹಲವರಲ್ಲಿ ಕೆಲಸ ಮಾಡಿ ಮಾನವ ಪ್ರವೃತ್ತಿ, ಅಭ್ಯಾಸ, ಅಭಿವ್ಯಕ್ತಿಗಳನ್ನು ತಿಳಿದುಕೊಂಡ. ತನ್ನ ಗಲಿವರ್ ಟ್ರಾವಲ್ಸ್ ನಿಂದ ಲೋಕಪ್ರಸಿದ್ಧನಾದ. ರಾಜಕೀಯ ಚಾತುರ್ಯ ಹೊಂದಿದ್ದ ಅವನು ಸ್ಕಾಟ್ಲಾಂಡ್ ನ ಅನೇಕ ಗೆಲುವಿಗೂ ಕಾರಣೀಕರ್ತನಾದ. ಇಬ್ಬರೊಂದಿಗೆ ಸಂಸಾರ ಅನುಭವಿಸಿದ – ಅವರಲ್ಲಿ ಒಬ್ಬಳನ್ನು ಪ್ರೀತಿಸಿದ. ಆದರೆ ಜೀವನದ ಕೊನೆಯಲ್ಲಿ ಭಯ, ಒಂಟಿತನ ಅನುಭವಿಸಿ ತನ್ನ ೭೬ನೇ ವಯಸ್ಸಿನಲ್ಲಿ ಮಡಿದ. ವಾಯೇಜ್ ಟು ಲಿಲ್ಲಿಪುಟ್ ನಲ್ಲಿನ…

  • ಕನ್ನಡದ ಶ್ರೇಷ್ಠ ಬರಹಗಾರರಲ್ಲಿ ಪೂರ್ಣಚಂದ್ರ ತೇಜಸ್ವಿಯವರು ಒಬ್ಬರು. ಅವರ ಪ್ರತಿಯೊಂದು ಕೃತಿಗಳು ವಿಶಿಷ್ಟವಾದವುಗಳು. ನಾನು ಅವರ ಜುಗಾರಿ ಕ್ರಾಸ್ ಕಾದಂಬರಿಯನ್ನು ಇತ್ತೀಚಿಗೆ ಪುನಃ ಓದಿದೆ. ಈ ಕಾದಂಬರಿ ಕಾಣಬರುವ ವಿಚಾರಗಳನ್ನು ನನಗೆ ಅನಿಸಿದ ಮಟ್ಟಿಗೆ ಇಲ್ಲಿ ಹಂಚಿಕೊಳ್ಳುತ್ತೇನೆ.

      ಇದೊಂದು ಕೇವಲ ೨೪ ಗಂಟೆಗಳ ಅವಧಿಯಲ್ಲಿ ನಡೆಯುವ ಪತ್ತೆದಾರಿ ಕಾದಂಬರಿಯಾಗಿದೆ. ಈ ಘಟನೆ ನಡೆಯುವ ಪ್ರದೇಶ ಮಂಗಳೂರು - ಬೆಂಗಳೂರು ರಸ್ತೆಯಲ್ಲಿರುವ ಜುಗಾರಿ ಕ್ರಾಸ್ ಮತ್ತು ದೇವಪುರಗಳಲ್ಲಿ. ಕಾದಂಬರಿಯಲ್ಲಿ ರಹಸ್ಯವಾಗಿ ನಡೆಯುವ ಅಪರಾಧ ಪ್ರಕರಣಗಳು ಒಂದು ಕಥೆಯಾದರೆ, ಪತ್ತೆದಾರ ಅವುಗಳನ್ನು ಬಯಲಿಗೆಳೆಯುವ ಕತೆ ಇನ್ನೊಂದು. ಬಸ್ಸಿನಲ್ಲಿ ಪ್ರಯಾಣ ಮಾಡುವ ಸುರೇಶ ಮತ್ತು ಗೌರಿಯರ ಒಂದು ದಿನದ ಅನುಭವ ಓದುಗನಿಗೆ ಒಂದು ಯುಗದ ಅನುಭವವನ್ನು…