ಸಂಬಾರ ಪದಾರ್ಥಗಳು ಪುಸ್ತಕ ಬರೆದ ಡಾ.ವಸುಂದರಾ ಭೂಪತಿ ವೃತ್ತಿಯಲ್ಲಿ ಖ್ಯಾತ ವೈದ್ಯೆ. ಪೃವೃತ್ತಿಯಲ್ಲಿ ಸಾಹಿತಿಯಾದ ಇವರ ಹಲವಾರು ಪುಸ್ತಕಗಳು ಪ್ರಕಟಗೊಂಡಿವೆ. ಇಂಗ್ಲಿಷ್, ಹಿಂದಿ ಭಾಷೆಗೆ ಇವರ ಹಲವು ಪುಸ್ತಕಗಳು ಅನುವಾದಗೊಂಡಿವೆ. ಇವರು ಸಹಲೇಖಕಿಯಾಗಿ ರಚಿಸಿದ ‘ಮನೆಯಂಗಳದಲ್ಲಿ ಔಷಧಿವನ' ಪುಸ್ತಕ ಹಲವಾರು ಮುದ್ರಣಗಳನ್ನು ಕಂಡಿದ್ದು, ಈ ಕೃತಿಗಾಗಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ ‘ಶ್ರೇಷ್ಟ ಲೇಖಕಿ' ಪುರಸ್ಕಾರ ದೊರೆತಿದೆ.
ಪ್ರಾಚೀನ ಕಾಲದಿಂದಲೂ ಭಾರತದ ಸಂಬಾರ ಜಿನಸುಗಳು ವಿದೇಶಗಳಿಗೂ ರಫ್ತಾಗುತ್ತಿದ್ದು ಲೋಕ ಪ್ರಸಿದ್ಧಿ ಪಡೆದಿದ್ದವು. ಅಡುಗೆಗಷ್ಟೇ ಅಲ್ಲದೆ ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಹಲವು ವಿಧದ ಸಾಮಾನ್ಯ ಕಾಯಿಲೆಗಳ ನಿವಾರಣೆಗೆ…