ಪುಸ್ತಕ ಸಂಪದ

  • ಸಾಹಿತ್ಯದ ಆತ್ಮಕಥನಗಳು ಕನ್ನಡಕ್ಕೆ ಬಂದಾಗ ಓದುಗರಿಗೆ ನವಿರೇಳಿಸಿದ್ದವು. ನೋವು, ಹತಾಶೆ, ಶೋಷಣೆ, ಅಮಾನವೀಯತೆಗಳನ್ನು ಅನುಭವಿಸಿದವರಿಂದಲೇ ನೇರವಾಗಿ ಆತ್ಮಕಥನಗಳಾಗಿ ಕನ್ನಡ ಓದುಗರಿಗೆ ಮರಾಠಿ ಸಾಹಿತ್ಯದಿಂದ ಇತರೆ ಭಾಷೆಗಳಿಂದಲೂ ಲಭಿಸಿತ್ತು. ಆದರೆ ಮಹಿಳೆಯೊಬ್ಬರು ಲೈಂಗಿಕ ಕಾರ್ಯಕರ್ತೆಯಾಗಿ ಅನುಭವಿಸಿದ ನೋವನ್ನು ಕಣ್ಣೋಟದಿಂದ ಕಂಡ ಜಗತ್ತನ್ನು ಅನಾವರಣಗೊಳಿಸಿದ ಆತ್ಮಕಥನ ಕನ್ನಡದಲ್ಲಿ ಬಂದಿರುವುದು ವಿಶೇಷ. ಮೂಲತ: ಮಲೆಯಾಳಂ ಭಾಷೆಯ ಜ್ಞಾನ್ ಲೈಂಗಿಕ ತೊಳಿಲಾಳಿ ಎಂಬ ನಳಿನಿ ಜಮೀಲಾರ ಆತ್ಮಕಥನವನ್ನು ಸೆಕ್ಸ್ ವರ್ಕರ್ ಒಬ್ಬಳ ಆತ್ಮಕಥನ ಎಂದು ಕನ್ನಡಕ್ಕೆ ಅನುವಾದಿಸಿದವರು ಕೆ.ನಾರಾಯಣಸ್ವಾಮಿಯವರು. ನೇರ, ದಿಟ್ಟ, ನಿರ್ಭಿಡೆಯಿಂದ ತಮ್ಮ ಬದುಕನ್ನು ಅಕ್ಷರ ರೂಪದಲ್ಲಿ ಹಿಡಿದಿಟ್ಟ ನಳಿನಿ ಜಮೀಲಾರ ಆತ್ಮಕಥನವನ್ನು ಓದುತ್ತ ಹೋದಂತೆ ನಮಗರಿಯದ…
  • ಕುಂವೀ ಆತ್ಮಕಥನ - ಗಾಂಧಿ ಕ್ಲಾಸು ಇತ್ತೀಚೆಗೆ ಬಿಡುಗಡೆಯಾದ ಬಹು…

  • ಗಾಯದ ತುಟಿಗಳಿಂದ ಮುರಿದ ಕೊಳಲನೂದಬೇಕಿದೆ’-ಎಂದು ವಾಸ್ತವದ ಸಂಕಟಗಳನ್ನು ತೆರೆದಿಡುವ ಶ್ರೀ ವೀರಣ್ಣ ಮಡಿವಾಳರ ತಮ್ಮ ಮೊದಲ ಕವನ ಸಂಕಲನ ‘ನೆಲದ ಕರುಣೆಯ ದನಿ’ ಯ ಮೂಲಕ ಸಾರಸ್ವತ ಲೋಕಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಮೊದಲ ಸಂಕಲನ ತರುವ ಎಲ್ಲ ಕವಿಗಳಿಗೂ ಇರುವ ಹಾಗೇ ವೀರಣ್ಣನವರಿಗೂ ಇಲ್ಲಿನ ಕವಿತೆಗಳ ಆಯ್ಕೆಯಲ್ಲಿ ದ್ವಂದ್ವಗಳು ಕಾಡಿರುವ ಕುರುಹುಗಳಿವೆ. ಮೊದಲ ಸಂಕಲನ ಪ್ರಕಟಿಸುವ ಕವಿಗೆ ಕಾಡುವ ವಿಚಿತ್ರ ಸಮಸ್ಯೆಯೆಂದರೆ ಎಲ್ಲವನ್ನೂ ಮೊಗೆ ಮೊಗೆದು ಹೇಳಬೇಕು ಎಂಬ ಉತ್ಸಾಹ ಮತ್ತು ಅಂಥ ಉತ್ಸಾಹದ ಜೊತೆಗೇ ಹೇಳುವ ರೀತಿಯಲ್ಲಿ ಬಳಸಬೇಕಾದ ಮಾರ್ಗದ ಅನುಸೂಚಿ.

    ಕವಿಯೂ ಒಬ್ಬ ಸಾಮಾಜಿಕನೇ ಆಗಿರುವುದರಿಂದ ಅವನಿಗೂ ಎಲ್ಲರ ಹಾಗೇ ಬದುಕಿನ ಪರಿಕರಗಳು, ಅದಕ್ಕಾಗಿ ಮಾಡಬೇಕಿರುವ ತ್ಯಾಗ ಮತ್ತು ಸವಾಲುಗಳು ಹಾಗೇ ಬದುಕಿನ…

  • ಕನ್ನಡದ ಪುಸ್ತಕಲೋಕದಲ್ಲಿ ಅವಿಷ್ಕಾರಗಳು ನಡೀತಾನೇ ಇರುತ್ತವೆ. ಮಕ್ಕಳ ಸಾಹಿತ್ಯದಲ್ಲೂ ಇಂತಹ ಪ್ರಯೋಗಗಳಿಗೆ ಕೊರೆತೆಯಿಲ್ಲ. ಮಕ್ಕಳ ಮನ ತಟ್ಟುವ...ಮನರಂಜಿಸುವ ಅದೆಷ್ಟೋ ಪುಸ್ತಕಗಳು ಪ್ರಕಟಗೊಂಡಿವೆ. ಕಾಮಿಕ್ ಪುಸ್ತಕಗಳು ಇದೆ ಸಾಲಿಗೆ ಸೇರುವ ಮತ್ತೊಂದು ಸಚಿತ್ರ ಸಾಹಿತ್ಯವೆಂತಲೇ ಹೇಳಬಹುದು. ಆದ್ರೆ, ಸಾಹಿತಿ ತಿರುಮಲೆ ಎಂ.ಎಸ್.ರಾಮಮೂರ್ತಿ ನಿಜಕ್ಕೂ ಹೊಸ ಪ್ರಯೋಗ ಮಾಡಿದ್ದಾರೆ. ಅಂದ್ರೆ, ಮಕ್ಕಳ ಇಷ್ಟಪಡುವ ವಿಷಯವನ್ನೆ ಆಧರಿಸಿ ಇಡೀ ಕಾದಂಬರಿಯನ್ನ ರಚಿಸಿದ್ದಾರೆ..

    ಕಾದಂಬರಿ ಮುಖ ಪುಟ ನೋಡಿದರೆ ಮಕ್ಕಳ ಪುಸ್ತಕವೇ ಅಂತಹ ಹಿರಿಯರು ದೂರ ಸರಿಯಬಹುದು. ಆದ್ರೆ, ಓದುತ್ತಾ..ಓದುತ್ತಾ ಹೋದಂತೆ ಕಾದಂಬರಿ ಆಪ್ತವಾಗುತ್ತದೆ. ಕಾಡು ಪ್ರಾಣಿಗಳ ಜೀವನದ ಅರಿವು ಮೂಡುತ್ತಾ ಹೋಗುತ್ತದೆ. ಮೊದಲ ಅಧ್ಯಾಯದಲ್ಲೆ ಲೇಖಕರು ಓದುಗರನ್ನ ಹಿಡಿದಿಡುವ…

  •   (ನನ್ನ ಈ ಲೇಖನ ಆಗಸ್ಟ್ ೮, ೨೦೧೦ರ ’ಕರ್ಮವೀರ’ದಲ್ಲಿ ಪ್ರಕಟವಾಗಿದೆ.)

      ಎಸ್.ಎಲ್. ಭೈರಪ್ಪನವರು ಮತ್ತೊಮ್ಮೆ ನಮ್ಮ ಮನ-ಮಸ್ತಿಷ್ಕಗಳಿಗೆ ಚುರುಕು ಮುಟ್ಟಿಸಿದ್ದಾರೆ. ’ಕವಲು’ ಕಾದಂಬರಿಯನ್ನು ಕೊಟಿದ್ದಾರೆ.
      ’ಭಾರತೀಯ ಸಮಾಜದಲ್ಲಿ ಕವಲುದಾರಿ ಹಿಡಿಯುತ್ತಿರುವ ಮೌಲ್ಯಗಳನ್ನು ಹೃದಯ ಕಲಕುವಂತೆ ಶೋಧಿಸುತ್ತಾ ಸಮಕಾಲೀನ ಜೀವನಕ್ಕೆ ಕನ್ನಡಿಯಾಗಿರುವ ಕಾದಂಬರಿ ಇದು’ ಎಂಬ ಪೂರ್ವನುಡಿ ಹೊಂದಿರುವ ಈ ಕಾದಂಬರಿಯು ತನ್ನೀ ಹಾದಿಯಲ್ಲಿ, ದಾಂಪತ್ಯಜೀವನವೇ ಮೊದಲಾಗಿ ಭಾರತೀಯ ಕುಟುಂಬಪದ್ಧತಿಯು ಹಿಡಿಯುತ್ತಿರುವ ಕವಲುದಾರಿಯನ್ನು ಬೆಟ್ಟುಮಾಡಿ ತೋರಿಸುತ್ತದಲ್ಲದೆ ಆಧುನಿಕ ಸ್ತ್ರೀವಿಮೋಚನಾ ಸಿದ್ಧಾಂತವು ಭಾರತೀಯ ಕುಟುಂಬಗಳಲ್ಲಿ ತಂದಿಕ್ಕುವ ತುಮುಲಗಳನ್ನು, ಹುಟ್ಟುಹಾಕುವ ಘರ್ಷಣೆಗಳನ್ನು ಅನಾವರಣಗೊಳಿಸುತ್ತ, ಇದರಿಂದಾಗಿ…

  •   ಈಚೆಗೆ ನನ್ನ ಕೈಗೊಂದು ಮೌಲಿಕ ಕೃತಿ ಸಿಕ್ಕಿತು. ಕೊಂಡಜ್ಜಿ ಕೆ. ವೆಂಕಟೇಶ್ ಸಂಪಾದಿಸಿರುವ ’ಭೈರಪ್ಪಾಭಿನಂದನಾ’ ಗ್ರಂಥ ಅದು. ೧೯೯೩ರಲ್ಲಿ ಪ್ರಥಮ ಮುದ್ರಣವಾಗಿ ಹೊರಬಂದು ೨೦೦೫ರಲ್ಲಿ ದ್ವಿತೀಯ ಮತ್ತು ವಿಸ್ತೃತ ಮುದ್ರಣ ಕಂಡಿರುವ ಈ ಪುಸ್ತಕ ಅದುಹೇಗೋ ಇದುವರೆಗೆ ನನ್ನ ದೃಷ್ಟಿಯಿಂದ ತಪ್ಪಿಸಿಕೊಂಡುಬಿಟ್ಟಿತ್ತು! ಓದುತ್ತಹೋದಂತೆ ಈ ಕೃತಿಯು ನನ್ನನ್ನು ಹಿಡಿದಿಟ್ಟು ಕುಳ್ಳಿರಿಸಿ ಓದಿಸಿಕೊಂಡಿತು.
      ನಮ್ಮ ನಡುವಿನ ಶ್ರೇಷ್ಠ ಸಾಹಿತಿ ಎಸ್.ಎಲ್. ಭೈರಪ್ಪನವರ ಬಗ್ಗೆ ಮತ್ತು ಅವರ ಅನೇಕ ಕೃತಿಗಳ ಬಗ್ಗೆ ವಿದ್ವತ್ಪೂರ್ಣ ಹಾಗೂ ಚಿಂತನಶೀಲ ಲೇಖನಗಳು ಈ ಪುಸ್ತಕದಲ್ಲಿವೆ. ವಿವಿಧೆಡೆ ಪ್ರಕಟಗೊಂಡಿದ್ದ ಲೇಖನಗಳು ಮತ್ತು ಈ ಪುಸ್ತಕಕ್ಕಾಗಿಯೇ ಬರೆದಿರುವ ಬರಹಗಳು ಹೀಗೆ ಒಟ್ಟು ಅರವತ್ತಕ್ಕೂ ಹೆಚ್ಚು ಲೇಖನಗಳನ್ನು ಪುಸ್ತಕವು ಒಳಗೊಂಡಿದೆ.…


  • ಈ ಕಡಲ ತುಂಬ ಅವಿಶ್ರಾಂತ ಅಲೆಗಳು. . . . . .                             
           
    ‘ಕಡಲಿಗೆಷ್ಟೊಂದು ಬಾಗಿಲು’ ರೂಪ ಹಾಸನ ಅವರ ನಲವತ್ತು ಪದ್ಯಗಳ ಮೂರನೆಯ ಸಂಕಲನ. ‘ಒಂದಷ್ಟು ಹಸಿಮಣ್ಣು’ ‘ಬಾಗಿಲಾಚೆಯ ಮೌನ’ ಸಂಕಲನಗಳಿಂದ ಸಾರಸ್ವತ ಲೋಕದ ಹೆಬ್ಬಾಗಿಲು ಬಡಿದು ಅಲ್ಲಿ ಈಗಾಗಲೇ ಪ್ರತಿಷ್ಠಾಪನೆಗೊಂಡ ಕೆಲ ಹೆಸರುಗಳಲ್ಲಿ ರೂಪ ಅವರೂ ಒಬ್ಬರು. ವಿವಿಧ ಕವಿಗೋಷ್ಠಿಗಳ ಖಾಯಂ ಹೆಸರುಗಳಲ್ಲಿ ಒಬ್ಬರಾಗಿರುವ ರೂಪ, ಪದ್ಯ ಬರೆಯುವದರ ಜೊತೆಜೊತೆಗೆ ನಾಡಿನ ಬಹುತೇಕ ಯುವ ಬರಹಗಾರರೊಂದಿಗೆ ಸಾಹಿತ್ಯಕ ಒಡನಾಟಗಳನ್ನಿಟ್ಟುಕೊಂಡಿರುವ ಕಾರಣಕ್ಕೂ ವರ್ತಮಾನದ ತವಕ ತಲ್ಲಣಗಳ ಅಭಿವ್ಯಕ್ತಿಯನ್ನು ಪದ್ಯಗಳ ಮೂಲಕ ಸಹಜವಾಗಿ ಮತ್ತು ಕೃತ್ರಿಮತೆಯಿಲ್ಲದೇ ಪ್ರದರ್ಶಿಸಬಲ್ಲರು. ಸ.ಉಷಾ, ಪ್ರತಿಭಾ, ಸುನಂದಾ ಕಡಮೆ ಮುಂತಾದವರು…

  • ಕೃತಿ: ಅವ್ವನ ಅಂಗನವಾಡಿ
    ಡಾ.ಅರುಣ ಜೋಳದಕೂಡ್ಲಿಗಿ ವಾಚಕರವಾಣಿ ಮತ್ತು ಓದುಗರ ಪತ್ರದ ಮೂಲಕ ನಿರಂತರವಾಗಿ ತಮ್ಮ ಸುತ್ತಲಿನ ಅನ್ಯಾಯಗಳನ್ನು ಕುಂದುಕೊರತೆಗಳನ್ನೂ ಅವರಿವರ ಕತೆ-ಕವಿತೆಗಳಿಗೆ ಪ್ರತಿಕ್ರಿಯೆಗಳನ್ನು  ಬರೆಯುತ್ತಲೇ ಕವಿಯಾಗಿ ಅರಳಿದವರು. ಕಾವ್ಯ ಸ್ಪರ್ಧೆಗಳಲ್ಲೂ ತಮ್ಮ ಕವಿತೆಗಳಿಗೆ ಬಹುಮಾನಗಳನ್ನು ಪಡೆಯುವ ಮೂಲಕ ಎಡ ಪಂಥೀಯ ಆಶಯಗಳನ್ನು, ಸಮಾನತೆಯ ಕನಸುಗಳನ್ನೂ ತಮ್ಮ ಬರಗಳುದ್ದಕ್ಕೂ ಕಾಣಿಸುತ್ತಲೇ ಬಂದವರು. ಈಗಾಗಲೇ ‘ನೆರಳು ಮಾತಾಡುವ ಹೊತ್ತು’ (೨೦೦೪) ಕವನ ಸಂಕಲನವನ್ನೂ, ಮತ್ತು ‘ಸೊಂಡೂರಿನ ಭೂ ಹೋರಾಟಗಳು’ (೨೦೦೮) ಅಧ್ಯಯನ ಕೃತಿಯನ್ನೂ  ಪ್ರಕಟಿಸಿ ಸಾರಸ್ವತ ಲೋಕದಲ್ಲಿ ದಾಖಲಾಗಿರುವವರು. ಅವರ ಎರಡನೇ ಕವನ ಸಂಕಲನ ‘ಅವ್ವನ ಅಂಗನವಾಡಿ’.

    ಒಟ್ಟು ೪೧ ಪದ್ಯಗಳೆಂದು ಕರೆದಿರುವ ರಚನೆಗಳು ಈ…

  • ಇಷ್ಟು ದಿವಸ ನಾನ್ಯಾಕೆ ಸಂಪದಕ್ಕೆ ಬರಲಿಲ್ಲ?  (ಯಾರೂ ಕೇಳಲೇ ಇಲ್ಲ! :() ಆದರೂ ನಾನೇ ಹೇಳಿಬಿಡುತ್ತೇನೆ.  ಪರ್ವ ಓದಲು ಶುರು ಮಾಡಿದಂದಿನಿಂದ ಬೇರಾವುದನ್ನೂ ಓದಲಾಗಲೇ ಇಲ್ಲ.    ಪರ್ವ -  ನನ್ನ ಇಷ್ಟು ವರ್ಷಗಳ ಓದಿನಲ್ಲಿ ನನ್ನ ಮನದ ಮೇಲೆ ಬಹು ಪರಿಣಾಮ ಬೀರಿದ ಪುಸ್ತಕ.  ಕುಳಿತಿದ್ದರೂ, ನಿಂತಿದ್ದರೂ, ಕನಸಿನಲ್ಲೂ, ಪಾತ್ರಗಳ ಗುಂಗು.  ಪ್ರತಿಯೊಂದು ಪಾತ್ರದ ಚಿತ್ರಣವನ್ನು ಓದುತ್ತಿದ್ದಾಗಲೂ ನಾನೇ ಆ ಪಾತ್ರವೇನೋ ಎಂಬಂತಹ, ನನ್ನ ಬಗ್ಗೆಯೇ ಬರೆದಿದ್ದಾರೋ ಎಂಬಂತಹ ಭಾವ ಮನದೊಳಗೆ ಆವರಿಸಿಬಿಡುತ್ತಿತ್ತು.  ನಾನೇ ಕುಂತಿ ಯಾಗಿದ್ದೆ, ನಾನೇ ದ್ರೌಪದಿಯಾಗಿದ್ದೆ, ನಾನೇ ಎಲ್ಲವೂ ಆಗಿದ್ದೆ.  ಪ್ರತಿಯೊಂದು ಪಾತ್ರವನ್ನು ಕಲ್ಪನೆಯಲ್ಲಿ ಅನುಭವಿಸುತ್ತಿದ್ದೆ. ಹಾಗಾಗಿ ಆಯಾ ದಿನಗಳಂದು ಕನಸಿನಲ್ಲಿಯೂ ಕೂಡ ನಾನೇ ಆ ಪಾತ್ರವಾಗಿದ್ದೆ.  ಯಾಕೆ…

  • ಹೀಗೆ ಸುಮ್ಮನೆ ಪುಸ್ತಕಗಳ ಮೇಲೆ ಕಣ್ಣಾಡಿಸುತ್ತಿದ್ದಾಗ, ಡೇವಿಡ್ ಜೆ ಶ್ವಾರ್ಜ್ ಬರೆದ "Magic of thinking big" ಪುಸ್ತಕ ಕಣ್ಣಿಗೆ ಬಿದ್ದಿತು. ಇಂಗ್ಲಿಷಿನಲ್ಲಿ ಪರ್ಸನಾಲಿಟಿ ಡೆವಲಪ್ ಮೆಂಟ್ ಬಗ್ಗೆ ಸಹಸ್ರ ಸಹಸ್ರ ಪುಸ್ತಕಗಳು ಸಿಗುತ್ತವೆ, ಕನ್ನಡದಲ್ಲಿ ಇಂತಹ ಪುಸ್ತಕಗಳು ಬಹಳ ಕಡಿಮೆ. ಯಂಡಮೂರಿಯವರ ವಿಜಯಕ್ಕೆ ಐದು ಮೆಟ್ಟಿಲುಗಳು ಅಥವಾ ಶಿವ್ ಖೇರಾ ಅವರ "ನೀವೂ ಗೆಲ್ಲಬಲ್ಲಿರಿ" ಪುಸ್ತಕಗಳ ಅನುವಾದ ಬಿಟ್ಟರೆ ಅಂತಹ ಪ್ರಯತ್ನ ಬಂದಿದ್ದು ರವಿ ಬೆಳಗೆರೆ ಅವರಿಂದ.

    ಆದರೆ ಕನ್ನಡ ಕಾದಂಬರಿಗಳಲ್ಲಿ ತರಾಸು ಚಿತ್ರಿಸುವ ವ್ಯಕ್ತಿ ಚಿತ್ರಗಳಿಂದ ಪರ್ಸನಾಲಿಟಿ ಡೆವಲಪ್ ಮೆಂಟ್ ಕಲಿಯುವುದಾದರೆ ಅದರ ಸೊಬಗೇ ಬೇರೆ. ಪೂಚಂತೆ ಸೃಷ್ಟಿಸಿದ ಜುಗಾರಿ ಕ್ರಾಸ್ ನ ಸುರೇಶನ ವ್ಯಕ್ತಿತ್ವವಾಗಲೀ ,ಕುವೆಂಪುರವರ…