ಒಂಟಿ ಕಾಲಿನ ಎವರೆಸ್ಟ್ ಸಾಹಸಿ- ಅರುಣಿಮಾ ಸಿನ್ಹಾ

ಒಂಟಿ ಕಾಲಿನ ಎವರೆಸ್ಟ್ ಸಾಹಸಿ- ಅರುಣಿಮಾ ಸಿನ್ಹಾ

ಪುಸ್ತಕದ ಲೇಖಕ/ಕವಿಯ ಹೆಸರು
ನವೀನ್ ಕುಮಾರ್ ಜೀ ಕೇ
ಪ್ರಕಾಶಕರು
ನವಕರ್ನಾಟಕ ಪುಸ್ತಕ ಪ್ರಕಾಶನ
ಪುಸ್ತಕದ ಬೆಲೆ
25

ಬದುಕಿನಲ್ಲಿ ಇಂತಹ ಕ್ಷಣಗಳಿರುತ್ತವೆ, ಆಗಬಾರದ್ದು ಆಗಿಹೋಗಿರುತ್ತದೆ. ಶಾಶ್ವತ ಊನಕ್ಕೆ ಕಾರಣವಾಗಿರುತ್ತದೆ.
ವ್ಯವಸ್ಥೆಯಿಂದಲೋ, ಇನ್ನೊಬ್ಬರಿಂದಲೋ ಹತ್ತಿರದವರಿಂದಲೋ ದೂರದವರಿಂದಲೋ ನೋವುಂಡ ಕಾರಣಕ್ಕೆ ಜೀವನದ ಬಗ್ಗೆ ನಿರಾಶರಾಗಿ,  ಬದುಕಿಗೆ ವಿದಾಯ ಹೇಳುವವರು ಉಂಟು. ಅಯ್ಯೋ ಹೀಗಾಯಿತೆ, ಇದೆಂತಹ ನನ್ನ ಹಣೆಯ ಬರಹ ಎಂದು ಹಲುಬುತ್ತ, ಅವರಿವರ ಅನುಕಂಪವನ್ನು ಹಾಸಿ ಹೊದ್ದು ಮಲಗುವವರೂ ಉಂಟು.
ಆದರೆ ಬದುಕಿನ ನೋವುನಲಿವುಗಳ ಏರಿಳಿತದಲ್ಲಿ ಈಜಾಡಿಯೂ ಬದುಕನ್ನು ಪ್ರೀತಿಸಿದವರು ಅಪರೂಪ.

ಇಂತಹವರು ಭೊರ್ಗರೆಯುವ ನದಿಯ ಮಧ್ಯದ ಬಂಡೆಯಂತೆ ಗಟ್ಟಿಯಾಗಿ ನಿಂತಿರುತ್ತಾರೆ. ಕೆಲವೊಮ್ಮೆ ಬದುಕೇ ಇವರ ಸಾಹಸ ಮತ್ತು ಇಚ್ಛಾಶಕ್ತಿಗೆ  ಮಣಿದು ಹಾದಿ ತೆರೆಯುತ್ತದೆ. ಇಂತಹ ಅಪರೂಪದ ಕೆಚ್ಚೆದೆಯ ಸಾಧಕಿ ಅರುಣಿಮಾ ಸಿನ್ಹಾ.

ದೈಹಿಕ ಊನಗಳು ಇವರ ಬದುಕಿನ ಸಾಹಸಯಾತ್ರೆಯಲ್ಲಿ ಮಿತಿಯಾಗಲೇ ಇಲ್ಲ. ತಮ್ಮ ಅಂಗವಿಕಲತೆಯನ್ನು ಸವಾಲಿನಂತೆ ಎದುರಿಸಿ ಹೊಸ ಎತ್ತರವನ್ನು ಏರಿದವರು ಅರುಣಿಮಾ. ಹಾಗೆ ಅವರು ಏರಿ ನಿಂತದ್ದು ಎವರೆಸ್ಟ್‌ ಎತ್ತರದಲ್ಲಿ !

ಅವರ ಬದುಕಿನ ಕಿರು ಪರಿಚಯಮಾಡಿಸುವ ಪ್ರಯತ್ನವೇ ಈ ಪುಸ್ತಕ‌, ಮಕ್ಕಳು ಅವಶ್ಯವಾಗಿ ಓದಲೇಬೇಕಾದ ಪುಸ್ತಕ‌,

‍ಜೀ ಕೇ ನ

Comments

Submitted by Nagaraj Bhadra Sun, 06/07/2015 - 18:42

ಸಾಧನೆಗೆ ಅಂಗವಿಕಲತೆವು ಅಡ್ಡಿ ಬರುವುದಿಲ್ಲ ಅಂಥ ದೇಶದ ಲಕ್ಷಾಂತರ. ಅಂಗವಿಕಲರಿಗೆ ಸಾರಿ ಹೇಳಿದ್ದಾರೆ.
ಸಾಧನೆ ದೃಢ ಸಂಕಲ್ಪ ,ಮನಸ್ಸು ಬೇಕು.ಅವರಿಗೊಂದು ನನ್ನ ಸಲಾಂ.

Submitted by naveengkn Sun, 06/07/2015 - 20:16

In reply to by Nagaraj Bhadra

ನಿಮ್ಮ ಮಾತು ಸತ್ಯ ನಾಗರಾಜರೆ, ಸಾಧನೆಯ ಹಾದಿಯ ಕಣ್ಮಣಿ ಆಕೆ,,,,, ಪ್ರತಿಕ್ರಿಯೆಗೆ ಧನ್ಯವಾದಗಳು ಸರ್

Submitted by kavinagaraj Thu, 06/11/2015 - 15:46

ನೀವು ಕಳಿಸಿದ ಪುಸ್ತಕ ಓದಿದೆ. ಅರುಣಿಮಾ ಸಿನ್ಹಾ ಸಾಧಕರಿಗೆ ಮಾರ್ಗದರ್ಶಿಯಾಗಿದ್ದಾಳೆ. ಅವಳ ಛಲ, ಮನೋಬಲ ಮೆಚ್ಚುವಂತಹದು, ಅನುಕರಣೀಯವಾದುದು. ಅಭಿನಂದನೆಗಳು, ನವೀನರೇ.