ಮುಖಾಂತರ ಹೊಸ ಕಾದಂಬರಿ

ಮುಖಾಂತರ ಹೊಸ ಕಾದಂಬರಿ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ನಾ. ಮೊಗಸಾಲೆ
ಪ್ರಕಾಶಕರು
ಮನೋಹರ‌ ಗ್ರಂಥಮಾಲೆ, ಧಾರವಾಡ‌
ಪುಸ್ತಕದ ಬೆಲೆ
ರೂ.550/‍‍ (600 ಪುಟಗಳು)

ಕನ್ನಡ‌ದ‌ ಹೆಸರಾಂತ‌ ಕಾದಂಬರಿಕಾರ‌ ಹಾಗೂ ಕವಿ, ಡಾ. ನಾ. ಮೊಗಸಾಲೆಯವರ‌ ಮತ್ತೊಂದು ಬ್ಱುಹತ್ ಕಾದಂಬರಿ 'ಮುಖಾಂತರ‌' ಇದೀಗ‌ ಧಾರವಾಡದ‌ ಪ್ರಸಿದ್ಧ‌ 'ಮನೋಹರ‌ ಗ್ರಂಥಮಾಲೆ' ಯಿಂದ‌ ಪ್ರಕಟಗೊಂಡಿದೆ. ಅವ‌ ಹಿಂದಿನ‌ ಬ್ರುಹತ್ ಕಾದಂಬರಿ 'ಉಲ್ಲಂಘ‌ನೆ' ದಕ್ಷಿಣ‌ ಕನ್ನಡ‌ ಜಿಲ್ಲೆಯ‌ ಬಂಟ‌ ಸಮಾಜದ‌ ಮೂರು ತಲೆಮಾರುಗಳ‌ ಜೀವನ‌ ವಿಧಾನದಲ್ಲಾ ಏರುಪೇರುಗಳನ್ನು ಚಿತ್ರಿಸಿತ್ತು. ಅದು ಮರಾಠಿ ಮತ್ತು ತೆಲುಗು ಬಾಷೆಗಳಿಗೆ ಅನುವಾದವಾಗಿದೆ.ಈಗ‌ ಪ್ರಕಟಗೊಂಡಿರುವ‌ ಮುಖಾಂತರ‌ ಕಾದಂಬರಿಯು ಕಾಸರಗೋದು ,ದಕ್ಷಿಣಕನ್ನಡ‌ ಪ್ರದೇಶದ‌ ಬ್ರಾಹ್ಮಣರು, ಅವರ‌ ಒಳ‌ ಪಂಗಡಗಳಲ್ಲಿ ಮ್?ಮೂರು ತಲೆಮಾರಿನಲ್ಲಾದ‌ ಬದಲಾವಣೆಗಳು, ಸ್ವಾತ0ತ್ರ್ಯ‌ ಚಳುವಳಿಯ‌ ಪ್ರಬಾವಗಳು‍ಇವನ್ನೆಲ್ಲ‌ ನಿರುದ್ವಿಗ್ನವಾದ‌ ಸಮತೋಲಿತ‌ ಷೈಲಿಯಲ್ಲಿ ನಿರೂಪಿಸುತ್ತದೆ. ನಮ್ಮ‌ ಪ್ರಬುದ್ಧ‌ ವಿಮರ್ಶಕರಾದ‌ ಡಿ.ಎ. ಶಂಕರ್, ನರಹಳ್ಳಿ ಬಾಲಸುಬ್ರಮಣ್ಯ‌, ಮಾಧವ‌ ಕುಲಕರ್ಣಿ ‍ ಇವರುಗಳೆಲ್ಲಾ ಇದನ್ನು ಮೆಚ್ಚಿಕೊಂಡು ಬರೆದಿದಾರೆಂದ‌ ಮೇಲೆ, ಹೆಚ್ಚಿನ‌ ಪರಿಚಯ‌ ಬಹುಶ: ಅನಗತ್ಯ‌.