ತೂಕ ಇಳಿಕೆ ಆರೋಗ್ಯದ ಗಳಿಕೆ

ತೂಕ ಇಳಿಕೆ ಆರೋಗ್ಯದ ಗಳಿಕೆ

ಪುಸ್ತಕದ ಲೇಖಕ/ಕವಿಯ ಹೆಸರು
ಎಂ.ಎಲ್. ರಾಘವೇಂದ್ರ ರಾವ್
ಪ್ರಕಾಶಕರು
ಮಧುರ ಪ್ರಕಾಶನ, ರಾಜಾಜಿನಗರ, ಬೆಂಗಳೂರು-೫೬೦೦೧೦
ಪುಸ್ತಕದ ಬೆಲೆ
Rs 30.00, ಮುದ್ರಣ ೨೦೦೯

ಇಂದಿನ ದಿನಗಳಲ್ಲಿ ಎಲ್ಲರನ್ನೂ ಭೀತಿಗೊಳಗಾಗಿಸುವುದು ದೇಹದ ಸ್ಥೂಲತೆ. ದೇಹದ ತೂಕ ಅಧಿಕವಾದಂತೆಲ್ಲಾ ದೇಹ ಸ್ಥೂಲವಾಗುತ್ತದೆ. ಇದರಿಂದ ಮುಕ್ತರಾಗಲು ದೇಹದ ದಂಡನೆ ಅಗತ್ಯವಾಗಿರುತ್ತದೆ. ದೇಹದ ಸೌಷ್ಟವ, ಸಾಮರ್ಥ್ಯ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಕಿರುಹೊತ್ತಿಗೆಯಲ್ಲಿ ಅನೇಕ ಪರಿಹಾರಗಳು ಹಾಗೂ ಸ್ಥೂಲಕಾಯದಿಂದ ಅನುಭವಿಸಬೇಕಾಗ ಬಹುದಾದ ಅನಾರೋಗ್ಯಗಳ ಬಗ್ಗೆ ವಿವರಣೆಗಳಿವೆ.

ಇಂದಿನ ಒತ್ತಡದ ದಿನಗಳಲ್ಲಿ ದಿನಕ್ಕೊಂದು ರೀತಿಯ ಸಮಸ್ಯೆಗಳು ವ್ಯಕ್ತಿಗೆ ತಪ್ಪಿದಲ್ಲ. ಅದರಲ್ಲೂ ಒಂದೇ ಜಾಗದಲ್ಲಿ ಕುಳಿತು ಕೆಲಸ ಮಾಡುವವರಿಗೆ ಹಲವಾರು ಆರೋಗ್ಯದ ಸಮಸ್ಯೆಗಳು ಬರುತ್ತವೆ. ಇದರಿಂದಲೇ ಬೊಜ್ಜು ಅಥವಾ ಸ್ಥೂಲಕಾಯತೆ ಬರುತ್ತದೆ. ಅದರ ಹಿಂದೆಯೇ ಮಧುಮೇಹ, ಅಧಿಕ ರಕ್ತದೊತ್ತಡ, ಕಿಡ್ನಿ, ವಾಯು, ಗಂಟು ನೋವು ಮುಂತಾದ ಸಮಸ್ಯೆಗಳು ಬರುತ್ತವೆ. ಈ ಸಮಸ್ಯೆಗಳನ್ನು ನಿವಾರಿಸಲು ಅಥವಾ ಹತೋಟಿಯಲ್ಲಿಡಲು ಹೇಗೆ ಸಾಧ್ಯ ಎನ್ನುವುದನ್ನು ಪುಸ್ತಕದಲ್ಲಿ ವಿವರಿಸಲಾಗಿದೆ. ಪೂರಕ ಛಾಯಾ ಚಿತ್ರಗಳಿವೆ.