ಅಂದದ ಆರೋಗ್ಯಕ್ಕೆ ಆಪ್ತ ವೈದ್ಯ

ಅಂದದ ಆರೋಗ್ಯಕ್ಕೆ ಆಪ್ತ ವೈದ್ಯ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ.ಪೂರ್ಣಿಮಾ ಕೋಡೂರು
ಪ್ರಕಾಶಕರು
ಬೆನಕ ಬುಕ್ಸ್ ಬ್ಯಾಂಕ್, ಯಳಗಲ್ಲು, ಕೋಡೂರು-ಅಂಚೆ, ಹೊಸನಗರ, ಶಿವಮೊಗ್ಗ-೫೭೭೪೪೫
ಪುಸ್ತಕದ ಬೆಲೆ
ರೂ.೫೦.೦೦ ಮುದ್ರಣ :೨೦೦೭

ಪುಸ್ತಕದ ಲೇಖಕಿಯಾದ ಡಾ.ಪೂರ್ಣಿಮಾ ಕೊಡೂರು ಇವರು ಸ್ವತಃ ಆಯುರ್ವೇದ ವೈದ್ಯೆಯೂ ಆಗಿರುವುದರಿಂದ ತಮ್ಮ ವೈದ್ಯಕೀಯ ವೃತ್ತಿಯ ಜೊತೆಗೆ ಜನರಿಗೆ ಆಪ್ತವಾಗುವ ರೀತಿಯಲ್ಲಿ ಆಯುರ್ವೇದ ಮನೆ ಮದ್ದುಗಳನ್ನು ನೀಡಿದ್ದಾರೆ. ಈ ಪುಸ್ತಕದಲ್ಲಿ ನಮಗೆ ಬರುವ ಹಲವಾರು ಕಾಯಿಲೆಗಳಿಗೆ ಮನೆ ಮದ್ದುಗಳ ವಿವರಗಳಿವೆ. ನಾವಿಂದು ನಮಗೆ ಬರುವ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಿಕೊಳ್ಳುತ್ತೇವೆ. ಆದರೆ ಯಾವಾಗ ಕಾಯಿಲೆ ವಾಸಿಯಾಯಿತಾ, ಸುಮ್ಮನಾಗಿ ಬಿಡುತ್ತೇವೆ. ಹೀಗೆ ಸುಮ್ಮನಾಗುವ ಬದಲು ನಮಗೆ ಬಂದ ಕಾಯಿಲೆ ಏನು? ಯಾಕಾಗಿ ಬಂತು? ಇದರ ಹಿಂದಿನ ನೈಜ ಕಾರಣಗಳೇನು? ಎಂಬುವುದನ್ನು ಅರ್ಥೈಸಿಕೊಳ್ಳಲು ವಿಫಲರಾಗುತ್ತೇವೆ. ಇದನ್ನು ನಾವು ಪರಿಣತಿ ಪಡೆದ ವೈದ್ಯರಷ್ಟು ತಿಳಿದು ಕೊಳ್ಳದೇ ಹೋದರೂ, ನಮ್ಮ ಮಟ್ಟದಲ್ಲಿ ನಾವೊಂದಿಷ್ಟು ತಿಳಿದುಕೊಂಡರೆ ಒಳ್ಳೆಯದೇ ಅಲ್ಲವೇ? ಹೀಗೆ ತಿಳಿದು ಕೊಂಡಾಗ ನಾವು ಕಾಯಿಲೆ ಬಂದ ಕೂಡಲೇ ಗಾಭರಿ ಬೀಳುವುದು ತಪ್ಪುತ್ತದೆ. 

ಸ್ವತಃ ವೈದ್ಯರೂ, ವೈದ್ಯ ಸಾಹಿತಿಯೂ ಆಗಿರುವ ಲೇಖಕಿಯವರು ಈ ಪುಸ್ತಕದಲ್ಲಿ ಹಲವಾರು ಕಾಯಿಲೆಗಳಿಗೆ ಸುಲಭ ಪರಿಹಾರ ನೀಡಿದ್ದಾರೆ. ಹಲವಾರು ಸಮಸ್ಯೆಗಳಿಗೂ ಇದರಲ್ಲಿ ಉತ್ತರವಿದೆ. ೨೫ಕ್ಕೂ ಮಿಕ್ಕಿದ ಅಧ್ಯಯಗಳಿವೆ. ಅತಿಯಾದ ಬೊಜ್ಜು, ಸಂಧಿವಾತ, ಅಜೀರ್ಣ, ಕಾಮಾಲೆ, ಬೆನ್ನು ನೋವು, ಕ್ಷಯ ಹೀಗೆ ಹತ್ತು ಹಲವಾರು ಸಮಸ್ಯೆಗಳಿಗೆ ಪರಿಹಾರವಿದೆ. ಮನೆಯಲ್ಲೇ ಇರುವ ಹಣ್ಣು ತರಕಾರಿಗಳನ್ನು ಬಳಸಿ ನಮ್ಮ ಆರೋಗ್ಯವನ್ನು ಹೇಗೆ ವೃದ್ಧಿ ಮಾಡಿಕೊಳ್ಳಬಹುದು ಎಂದು ತಿಳಿಸುವ ಸಣ್ಣ ಪ್ರಯತ್ನ ಮಾಡಿದ್ದಾರೆ.