ಪತ್ರಕರ್ತ ಪದ್ಮರಾಜ ದಂಡಾವತಿ ಅವರು ಹೊಸದಾಗಿ ಪತ್ರಿಕೋದ್ಯಮಕ್ಕೆ ಬರುವವರಿಗೆ ಸಹಾಯವಾಗಲೆಂದು ತಮ್ಮ ಅನುಭವದ ಸಾರವನ್ನು ಪುಸ್ತಕದ ರೂಪದಲ್ಲಿ ಹೊರತಂದಿದ್ದಾರೆ. ಲೇಖಕ ಜೆಸುನಾ ಅವರು ಈ ಪುಸ್ತಕದ ಬೆನ್ನುಡಿಯಲ್ಲಿ “ಒಂದು ಕಾಲವಿತ್ತು. ಪತ್ರಿಕಾ ಕ್ಷೇತ್ರಕ್ಕೆ ಪ್ರವೇಶಿಸಿದವರಿಗೆ ಪೂರ್ವ ಸಿದ್ಧತೆಯೇನೂ ಇರುತ್ತಿರಲಿಲ್ಲ. ಅವರಿಗೆ ಇರುತ್ತಿದ್ದುದು ವ್ಯಾಪಕ ಓದಿನ ಹಿನ್ನಲೆ. ಈಗ ಹಾಗಿಲ್ಲ. ಗಿಣಿ ಪಾಠದ ಒಂದು ಪದವಿ ಇರುತ್ತದೆ. ಇದರಲ್ಲಿ ಬಹುತೇಕ ಮಂದಿಗೆ ಓದಿನ ಹಿನ್ನಲೆಯೇ ಇರುವುದಿಲ್ಲ. ಇಂಥವರು ಪತ್ರಿಕೋದ್ಯಮದಲ್ಲಿ ಏನನ್ನು ಸಾಧಿಸಲು ಸಾಧ್ಯ ?
ಇಂಥವರಿಗೆಂದೇ ಗೆಳೆಯ ಪದ್ಮರಾಜ ದಂಡಾವತಿಯವರ ರಿಪೋರ್ಟಿಂಗ್ ಹಾಗೂ ‘ಪತ್ರಿಕಾ ಭಾಷೆ' ಪುಸ್ತಕಗಳಿವೆ. ಈ ಎರಡೂ ಪುಸ್ತಕಗಳು…