ಪುಸ್ತಕ ಸಂಪದ

  • ಈಗಿನ ಇಂಟರ್-ನೆಟ್ ಕಾಲಮಾನದಲ್ಲಿ ಗೂಗಲ್‌ನಲ್ಲಿ ಹುಡುಕಾಡಿದರೆ ಪ್ರಾಣಿಗಳ ಮತ್ತು ಪರಿಸರದ ಬಗ್ಗೆ ಲಕ್ಷಗಟ್ಟಲೆ ಪುಟಗಳ ಮಾಹಿತಿ ಮತ್ತು ಫೋಟೋಗಳು ಕ್ಷಣಾರ್ಧದಲ್ಲಿ ಸಿಗುತ್ತವೆ. ಆದರೆ ಐವತ್ತು ವರುಷಗಳ ಮುಂಚೆ ಇಂತಹ ಮಾಹಿತಿ ಸಂಗ್ರಹ ಸವಾಲಾಗಿತ್ತು. ಹಾಗಾಗಿ, ನವಂಬರ ೧೯೭೪ರಲ್ಲಿ ಪ್ರಕಟವಾದ ಈ ಪುಸ್ತಕದಲ್ಲಿ ಪ್ರಾಣಿಗಳು ಮತ್ತು ಪರಿಸರದ ಬಗ್ಗೆ ೧೪೪ ಮುದ್ರಿತ ಪುಟಗಳ ಮಾಹಿತಿ ಸಂಗ್ರಹಿಸಿ, ವಿಷಯಾನುಕ್ರಮವಾಗಿ ಸರಳ ಭಾಷೆಯಲ್ಲಿ ಕನ್ನಡದ ಓದುಗರಿಗೆ ಒದಗಿಸಿದ ಕೃಷ್ಣಾನಂದ ಕಾಮತರಿಗೆ ಅಭಿನಂದನೆ ಸಲ್ಲಿಸಲೇ ಬೇಕು.

    ಮುನ್ನುಡಿಯಲ್ಲಿ ಈ ಪುಸ್ತಕದ ಉದ್ದೇಶವನ್ನು ಲೇಖಕರು ಹೀಗೆಂದು ಸ್ಪಷ್ಟ ಪಡಿಸಿದ್ದಾರೆ: “ಹಿಂದೆಂದೂ ಇಲ್ಲದಷ್ಟು ಇಂದು ಮಾನವನು ಸಂಕುಚಿತ ದೃಷ್ಟಿಯವ ಮತ್ತು ಸ್ವಾರ್ಥಿಯಾಗ ಹತ್ತಿದ್ದಾನೆ. ಅಂತೆಯೆ ತನ್ನ ಸಂತತಿಯಿಂದ…

  • ಡಾ.ಎಚ್.ಬಿ.ಚಂದ್ರಶೇಖರ್ ಬರೆದ ‘ಯಶೋ ತೋಷ' ಸಾಧಕರಿಗೊಂದು ಕೈಪಿಡಿ ಎಂಬ ಪುಸ್ತಕಕ್ಕೆ ಡಾ.ಚಂದ್ರಶೇಖರ್ ದಾಮ್ಲೆ ಇವರು ಮುನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ “ಮಾನವ ಜನ್ಮ ದೊಡ್ದದು ಎಂಬುವುದು ದಾಸವಾಣಿ. ಅಂದರೆ ಬದುಕನ್ನು ಅರ್ಥಪೂರ್ಣಗೊಳಿಸಲು ಮಾನವರಿಗೆ ದೊಡ್ದ ಅವಕಾಶಗಳಿವೆ. ಅವನ್ನು ನಾವೇ ಉಪಯೋಗಿಸಬೇಕು. ಹಾಗಾಗಿ ದಾಸರು ಹೇಳುತ್ತಾರೆ ‘ಜೀವನವನ್ನು ವ್ಯರ್ಥಮಾಡಿಕೊಳ್ಳಬೇಡಿರೋ ಹುಚ್ಚಪ್ಪಗಳಿರಾ’ ಎಂದು. ನಮ್ಮನ್ನು ಯಶಸ್ಸಿನ ದಾರಿಯಲ್ಲಿ ಸಾಗುವಂತೆ ಪ್ರೇರೇಪಿಸುವ ಸಂದೇಶ ಈ ದಾಸವಾಣಿಯಲ್ಲಿದೆ.

    ಯಶಸ್ಸೆಂಬುದು ಬದುಕಿನ ಒಂದು ಹಂತದ ಸಾಧನೆಯಲ್ಲ. ಬದುಕಿನುದ್ದಕ್ಕೂ ಯಶಸ್ಸನ್ನು ಸಾಧಿಸುವ ಸವಾಲು ಇದ್ದೇ ಇದೆ. ಬಾಲ್ಯ ಕಾಲದಿಂದ ವೃದ್ಧಾಪ್ಯದವರೆಗೂ…

  • ಕೆನ್ನಾಯಿಯ ಜಾಡಿನಲ್ಲಿ ಒಂದು ಪಯಣ.... ಪರಿಸರದ ಕಾಳಜಿ ಹಾಗೂ ವನ್ಯಜೀವಿಗಳ ಕುರಿತು ಬರೆಯುವ ಹಾಗೂ ಛಾಯಾಚಿತ್ರ, ವಿಡಿಯೋ ಮೂಲಕ ನಮ್ಮಲ್ಲೊಂದು ಪರಿಸರದ ಕುರಿತು ಅಕ್ಕರೆ ಮೂಡಿಸುವ ಕನ್ನಡದ ಕೆಲವೇ ಕೆಲವು ಅಪರೂಪದ ಬರಹಗಾರರಲ್ಲಿ ಕೃಪಾಕರ-ಸೇನಾನಿಯವರು. ನಮ್ಮ ನಾಡಿನ ಹೆಮ್ಮೆ ಇವರು. 

    ಯಾವುದೇ ಪ್ರಚಾರ, ಕೀರ್ತಿ, ತೋರಿಕೆಗಳು ಏನೊಂದನ್ನೂ ಬಯಸದೇ ತಮ್ಮ ಪಾಡಿಗೆ ತಾವು ಪರಿಸರ, ವನ್ಯಜೀವಿಗಳಿಗಾಗಿ ತಮ್ಮನ್ನೇ ತಾವು ತೊಡಗಿಸಿಕೊಂಡಿದ್ದಾರಲ್ಲ ಅದೇ ನನಗೆ ಅತ್ಯಂತ ಪ್ರಿಯವಾದುದು. ಇಡೀ ಜೀವನವನ್ನೇ ಕಾಡಿನಲ್ಲಿ ಕಳೆಯುತ್ತ, ಪ್ರಕೃತಿಯೊಡನೆ ಒಡನಾಡುತ್ತ, ನಮ್ಮಲ್ಲೂ ಆ ಒಂದು ಪ್ರೀತಿ ಬೆಳೆಸ್ತಾರಲ್ಲ ಅದು ತುಂಬಾ…

  • ‘ನೆಲೆ ನಿಂತ ನೆಲವ ನೀ ಬೆಳಗು' ಪುಸ್ತಕವನ್ನು ಬರೆದವರು ಡಾ.ಎಚ್.ವಿ.ಚಂದ್ರಶೇಖರ್ ಇವರು. ಪುಸ್ತಕದ ಮುನ್ನುಡಿಯಲ್ಲಿ “ನಮ್ಮ ಮಕ್ಕಳಿಗೆ ಶಿಕ್ಷಣ ಬೇಕೇ? ಮಕ್ಕಳು ಶಾಲೆಗೆ ಹೋಗಬೇಕೇ? ಅವರಿಗೆ ಯಾವ ತರಹದ ಶಿಕ್ಷಣ ಬೇಕು? ಈ ತರಹದ ಪ್ರಶ್ನೆಗಳು ಸಮಾಜದ ಎಲ್ಲ ಚಿಂತಕರನ್ನು ದಶಕಗಳಿಂದ ಕಾಡಿವೆ. ಶಿಕ್ಷಣ ಎಂದರೆ ಪ್ರಮಾಣಪತ್ರವೇ? ಪ್ರಮಾಣ ಪತ್ರ ಪಡೆದವರೆಲ್ಲ ಶಿಕ್ಷಿತರೇ? ಸುತ್ತಮುತ್ತ ನೋಡಿದರೆ ಹಾಗೆ ಕಾಣುವುದಿಲ್ಲ. ಸಾಮಾನ್ಯವಾಗಿ ಜನ ಹೇಳುತ್ತಾರೆ. ನಿರಕ್ಷರತೆಯಿಂದ ಭಾರತಕ್ಕೆ ಹಿನ್ನಡೆಯಾಗುತ್ತಿದೆ, ಸಾಕ್ಷರತೆ ಹೆಚ್ಚಬೇಕು. ಖಂಡಿತವಾಗಿಯೂ, ನಮ್ಮಲ್ಲಿಯ ಅನಕ್ಷರತೆ ಹೋಗಬೇಕು. ನನ್ನ ಪ್ರಕಾರ ನಿರಕ್ಷರಿಗಳಿಂದ ಆಗುವ ಅಪಾಯಕ್ಕಿಂತ ಸಹಸ್ರಪಾಲು ಅಪಾಯವಿರುವುದು ಮೋಸದ ಮನಸ್ಸುಳ್ಳ ಅಪ್ರಾಮಾಣಿಕ ಸಾಕ್ಷರರಿಂದ. ಅದಕ್ಕೆ…

  • ಕನ್ನಡ ನಾಡು ಮತ್ತು ನುಡಿಗಾಗಿ ಬೆಲೆ ಕಟ್ಟಲಾಗದ ಸೇವೆ ಸಲ್ಲಿಸಿದವರು ಹಲವು ಮಹನೀಯರು. ಅಂತಹ ೫೦ ಸಾಧಕರ ಪುಟ್ಟ ಪರಿಚಯ ಮಾಡಿಕೊಡುವ ಪುಸ್ತಕ ಇದು.

    “ಇಲ್ಲಿನ ೫೦ ವ್ಯಕ್ತಿ ಚಿತ್ರಗಳಲ್ಲಿ ಸಾಹಿತಿಗಳು, ಸಂಶೋಧಕರು, ಜಾನಪದ ಸಂಗ್ರಾಹಕರು, ಸಂಗೀತಗಾರರು, ಆಡಳಿತಗಾರರು ಮತ್ತು ಸಮಾಜ ಸುಧಾರಕರು ಸೇರಿದ್ದಾರೆ. ….. ಮಂಜೇಶ್ವರ ಗೋವಿಂದ ಪೈಗಳು ಕನ್ನಡ ಕಾವ್ಯಕ್ಕೆ ಅನಿವಾರ್ಯ ಎಂದು ಭಾವಿಸಲಾದ “ಪ್ರಾಸ”ವನ್ನು ಬಿಟ್ಟು ಬಿಡುವ ಕ್ರಾಂತಿಕಾರಿ ಧೋರಣೆ ತಳೆದರು. ಪ್ರೊ. ಹಿರಿಯಣ್ಣ, ಎಸ್. ವಿ. ಪರಮೇಶ್ವರ ಭಟ್ಟ, ಎ. ಆರ್. ಕೃಷ್ಣ ಶಾಸ್ತ್ರಿ, ದೇವುಡು, ತೀ. ನಂ. ಶ್ರೀಕಂಠಯ್ಯ ಮೊದಲಾದ ಮಹನೀಯರು ಸಂಸ್ಕೃತದ ಮಹಾನ್ ಗ್ರಂಥಗಳ ಬಗ್ಗೆ ಕನ್ನಡದಲ್ಲಿ ಬರೆದು ಕನ್ನಡಿಗರ ಅರಿವು ಹೆಚ್ಚಿಸಿದರು. ಸಿ. ಡಿ. ನರಸಿಂಹಯ್ಯನವರು ಆಂಗ್ಲ ಭಾಷೆಯ ಬಗ್ಗೆ…

  • ೮೦ರ ದಶಕದಲ್ಲಿ ಮನೆ ಮಾತಾಗಿದ್ದ ರೋಚಕ ಕಾದಂಬರಿ ತುಳಸೀದಳ. ಇದನ್ನು ಬರೆದವರು ಖ್ಯಾತ ತೆಲುಗು ಲೇಖಕರಾದ ಯಂಡಮೂರಿ ವೀರೇಂದ್ರನಾಥ ಇವರು. ಪುಸ್ತಕದ ಬೆನ್ನುಡಿಯಲ್ಲಿ ಪ್ರಕಾಶಕರು ಚಲನಚಿತ್ರವಾಗುತ್ತಿರುವ ತುಳಸೀದಳ ಎನ್ನುವ ಶಿರೋನಾಮೆಯಲ್ಲಿ “ಹತ್ತು ವರ್ಷದ ಪಾಪುವಿನ ಮೇಲೆ ಭಯಂಕರವಾದ ಕ್ಷುದ್ರ ಶಕ್ತಿ ಕಾಷ್ಮೋರಾದ ಪ್ರಯೋಗ ! ಇಪ್ಪತ್ತೊಂದು ದಿನ ! ಪಾಪುವಿನ ಸಾವಿಗೆ ಇನ್ನು ಇಪ್ಪತ್ತೊಂದು ದಿನ !! ದಿನಕ್ಕೊಂದು ಬಗೆಯ ಹೊಸ ವ್ಯಾಧಿ ! ಪ್ರತ್ಯಕ್ಷ ನರಕ! ಕಾಷ್ಮೋರಾ ಪಾಪುವನ್ನು ಕಬಳಿಸುತ್ತಿತ್ತು. ಪಾಪು ಬದುಕಬೇಕು, ತಾಯಿ, ತಂದೆ, ವಾಮಾಚಾರಕ್ಕೆ ಬಿಡುಗಡೆ ಮಾಡಬಲ್ಲಂಥ ಮಾಂತ್ರಿಕರು, ಹಿಪ್ನಾಟಿಸಂನಲ್ಲಿ ಪ್ರಾವೀಣ್ಯತೆ ಪಡೆದವರು, ಆಧುನಿಕ ವೈದ್ಯ ವಿಜ್ಞಾನ ಸಂಪನ್ನರು-ಎಲ್ಲರ ಸತತ ಪ್ರಯತ್ನ ನಡೆಯುತ್ತಿತ್ತು.

  • ಮಲೆನಾಡಿನ ರೋಚಕ ಕಥೆಗಳು ಸರಣಿಯ ೧೧ನೆಯ ಭಾಗವಾದ ‘ಬಲ್ಲಾಳ ದುರ್ಗದ ಭೀಕರ ಕಮರಿ' ಪುಸ್ತಕ ನಿಮ್ಮ ಕೈಯಲ್ಲಿದೆ. ಇದು ೧೩ ಕಥೆಗಳನ್ನು ಹೊಂದಿರುವ ಕಥಾ ಸಂಕಲನ. ಎಂದಿನಂತೆ ಮಲೆನಾಡಿನ ಸುಂದರ ಪ್ರಕೃತಿ ಸೌಂದರ್ಯ ಜೊತೆಗೆ ಅಲ್ಲಿನ ರೋಚಕತೆಯನ್ನು ಒಳಗೊಂಡಿದೆ. 

    ಲೇಖಕರಾದ ಗಿರಿಮನೆ ಶ್ಯಾಮರಾವ್ ಅವರೇ ತಮ್ಮ ಪುಸ್ತಕದ ಬೆನ್ನುಡಿಯಲ್ಲಿ ಬರೆದಿರುವಂತೆ “ಮಲೆನಾಡಿನ ಪ್ರಕೃತಿ ಹೇಗೆ ವೈವಿಧ್ಯವೋ ಹಾಗೇ ಇಲ್ಲಿನ ಜನರ ಬದುಕೂ ವೈವಿಧ್ಯಮಯ. ಗಮನಿಸುವ ಕಣ್ಣಿದ್ದರೆ ಇಲ್ಲಿ ನಡೆಯುವ ರೋಚಕ ಘಟನೆಗಳಂತೂ ಬರೆದು ಮುಗಿಯದಷ್ಟು! ಪ್ರತಿಯೊಂದು ಕೃತಿಯಲ್ಲೂ ಕತೆ, ಘಟನೆಗಳ ಜೊತೆಗೆ ಪ್ರಕೃತಿ ಹಾಗೂ ಬದುಕಿನ ನೈಜ ಚಿತ್ರಣ ನೀಡಲು ಯತ್ನಿಸಿದ್ದೇನೆ, ಹಾಗಾಗಿ ಇದರಲ್ಲಿ ಮಲೆನಾಡಿನ ರೋಚಕ ಕತೆಗಳ ಜೊತೆಗೇ…

  • ಕಲಬುರ್ಗಿ ನೂತನ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಮಲ್ಲಿನಾಥ ಶಿ.  ತಳವಾರರದು ಮೇರು ವ್ಯಕ್ತಿತ್ವ. ಸರಳ ಸಜ್ಜನಿಕೆಗೆ ಮತ್ತೊಂದು ಹೆಸರು ಡಾ.ತಳವಾರರು. ಇವರೊಬ್ಬ ಮಹಾನ್ ಸಾಹಿತಿ ಮಾತ್ರವಲ್ಲ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸುತ್ತಿರುವ ಮಹಾನ್ ಕವಿ ಎಂಬುದರಲ್ಲಿ ಎರಡು ಮಾತಿಲ್ಲ. ಕನ್ನಡ ಸಾರಸ್ವತ ಲೋಕದಲ್ಲಿ ತನ್ನದೇ ಛಾಪು ಮೂಡಿಸಿದವರು ಡಾ.ಮಲ್ಲಿನಾಥರು. ಗಜಲ್ ಕಾವ್ಯಕನ್ನಿಕೆಯನ್ನು ಕೈವಶ ಮಾಡಿಕೊಂಡು ಗಜಲ್ ಕಲಿಕಾರ್ಥಿಗಳಿಗೆ ಮಾರ್ಗದರ್ಶಕರಾಗಿ ನಿಂತಿದ್ದಾರೆ. ಗಜಲ್ ನ ವಿವಿಧ ಮಜಲುಗಳನ್ನು ತನ್ನೊಳಗೆ ಬಂಧಿಸಿದವರೆಂದರೆ ತಪ್ಪಾಗಲಾರದು. ಅತಿ ಮೃದುತ್ವವೇ ಇವರಿಗೆ ಭೂಷಣ. ಗಜಲ್ ನ ಧ್ಯಾನವು ಇವರ ವಿಶೇಷಣ.. ಇವರ ಮೊದಲ…

  • ಡಾ.ಚಂದ್ರಶೇಖರ ಕಂಬಾರರು ನಂಬಿಕೆಯಲ್ಲಿ ಆಸ್ತಿಕರು. ಕೊನೆಗೂ ಈ ಲೋಕದಲ್ಲಿ ಕೇಡಿನ, ದುಷ್ಟಶಕ್ತಿಗಳ ವಿರುದ್ಧ ಸಾತ್ವಿಕ ಶಕ್ತಿ ಗೆಲ್ಲುತ್ತದೆ ಎಂಬುದು ಅವರ ಪೂರ್ಣ ವಿಶ್ವಾಸ. ಆದರೆ, ಈ ವಿಶ್ವಾಸ ಆಧುನಿಕ ಬದುಕಿನ ಸಂಕೀರ್ಣ ಅನುಭವ, ಕೆಡುಕಿನ ಅಪರಿಮಿತ ಸಾಧ್ಯತೆಗಳಿಗೆ ಕುರುಡಾಗುವುದಿಲ್ಲ. ಸಾತ್ವಿಕ ಶಕ್ತಿಗಳ ಕೊನೆಯ ವಿಜಯದ ಮೆಟ್ಟಿಲೇರುವ ಮೊದಲು ಅನುಭವಿಸಬೇಕಾದ ಸೋಲುಗಳನ್ನು ಕಡೆಗಣಿಸುವುದಿಲ್ಲ. ಚರಿತ್ರೆ ಮತ್ತು ವರ್ತಮಾನ ಮೌಲ್ಯಗಳ ಪರಸ್ಪರ ಸಂಘರ್ಷವನ್ನು ನಿರೂಪಿಸಲು ಡಾ.ಕಂಬಾರರು ಚಾಂದಬೀ ಸರಕಾರದ ಕಥೆಯಾಗಿ, ಮುಖ್ಯಮಂತ್ರಿಯಾಗಿದ್ದಾಗ ದೇವರಾಜು ಅರಸು ಅವರು ಭೂ ಮಸೂದೆ ಕಾಯಿದೆಯನ್ನೂ ಜಾರಿಗೆ ತಂದಾಗ ಉಂಟಾದ ಸಾಮಾಜಿಕ ಸ್ಥಿತ್ಯಂತರವನ್ನು ಬಳಸುತ್ತಾರೆ. ಬಲದೇವ ನಾಯಕ ಆ ತನಕ ಬೆಳೆದು ಬಂದ ಜಮೀನ್ದಾರೀ…

  • ಛಂದ ಪುಸ್ತಕ ಪ್ರಕಾಶನ ಇವರು ಪ್ರತೀ ವರ್ಷ ಉದಯೋನ್ಮುಖ ಕಥೆಗಾರರ ಹಸ್ತ ಪ್ರತಿಗಳ ಸ್ಪರ್ಧೆ ನಡೆಸುತ್ತಾರೆ. ಬಹುಮಾನ ವಿಜೇತರ ಕಥಾ ಸಂಕಲನವನ್ನೂ ಹೊರತರುತ್ತಾರೆ. ಈ ವರ್ಷ ಕತೆಗಾರ್ತಿ ಕಾವ್ಯಾ ಕಡಮೆ ಅವರ ‘ಮಾಕೋನ ಏಕಾಂತ' ಎಂಬ ಕಥಾ ಸಂಕಲನದ ಹಸ್ತಪ್ರತಿಗೆ ಬಹುಮಾನ ದೊರೆತಿದೆ. ಈ ಸ್ಪರ್ಧೆಗೆ ತೀರ್ಪುಗಾರರಾಗಿದ್ದವರು ಹಿರಿಯ ವಿಮರ್ಶಕರಾದ ಟಿ.ಪಿ.ಅಶೋಕ ಇವರು.

    ಇವರು ತಮ್ಮ ಮುನ್ನುಡಿಯಲ್ಲಿ “ತಮ್ಮ ಕವಿತೆ, ಕಾದಂಬರಿ ಹಾಗೂ ನಾಟಕಗಳಿಂದ ಈಗಾಗಲೇ ಪ್ರಸಿದ್ಧರಾಗಿರುವ, ಹಲವು ಪ್ರಶಸ್ತಿಗಳಿಂದ ಪುರಸ್ಕೃತರಾಗಿರುವ ಪ್ರತಿಭಾವಂತ ಯುವ ಲೇಖಕಿ ಕಾವ್ಯಾ ಕಡಮೆ ಅವರು ‘ಮಾಕೋನ ಏಕಾಂತ' ಎಂಬ ಕಥಾ ಸಂಕಲನಕ್ಕೆ ೨೦೨೧ರ ಛಂದ ಪುಸ್ತಕ ಹಸ್ತಪ್ರತಿ ಸ್ಪರ್ಧೆಯಲ್ಲಿ ‘ಛಂದ ಪುಸ್ತಕ ಬಹುಮಾನ'…