ನನ್ನ ಜೀವನವೇ ನನ್ನ ಸಂದೇಶ…

ನನ್ನ ಜೀವನವೇ ನನ್ನ ಸಂದೇಶ…

ಪುಸ್ತಕದ ಲೇಖಕ/ಕವಿಯ ಹೆಸರು
ಮೋಹನದಾಸ ಕರಮಚಂದ ಗಾಂಧಿ
ಪ್ರಕಾಶಕರು
ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು
ಪುಸ್ತಕದ ಬೆಲೆ
ಉಚಿತ ಪ್ರಸಾರ

ಮೋಹನದಾಸ ಕರಮಚಂದ ಗಾಂಧಿ ಇವರನ್ನು ಜಗತ್ತು ಮಹಾತ್ಮ ಗಾಂಧೀಜಿ ಎನ್ನುವ ಹೆಸರಿನಿಂದ ಕರೆಯುತ್ತದೆ. ಮಹಾತ್ಮರು ಹೇಳಿದ ಅತ್ಯುತ್ತಮ ಮಾತುಗಳನ್ನು ಈ ಪುಟ್ಟ ಹೊತ್ತಗೆಯಲ್ಲಿ ಸಂಗ್ರಹಿಸಿ ಕರ್ನಾಟಕ ಸರಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಬಿಡುಗಡೆ ಮಾಡಿದೆ. ‘My Life is My Message’ ಎನ್ನುವ ಆಂಗ್ಲ ಭಾಷೆಯ ಮಾಹಿತಿಯನ್ನು ಕನ್ನಡದಲ್ಲಿ ‘ನನ್ನ ಜೀವನವೇ ನನ್ನ ಸಂದೇಶ’ ಎಂಬ ಹೆಸರಿನಲ್ಲಿ ಅನುವಾದಿಸಲಾಗಿದೆ. ೪೪ ಪುಟಗಳ ಪುಟ್ಟ ಪುಸ್ತಕದಲ್ಲಿರುವ ಮಹಾತ್ಮರ ಕೆಲವು ಆಯ್ದ ನುಡಿಗಳು ಹೀಗಿವೆ:

* ನನ್ನ ಜೀವನದ ಪ್ರತಿಕ್ಷಣದಲ್ಲಿಯೂ ದೇವರ ಅಸ್ಥಿತ್ವವನ್ನು ಕಂಡುಕೊಂಡಿದ್ದೇನೆ.

* ಪ್ರಾರ್ಥನೆಗೆ ಹೃದಯ ಬೇಕು, ನಾಲಿಗೆ ಏಕೆ?

* ದೇವರು ನಮ್ಮನ್ನು ಎಂದಿಗೂ ಮರೆಯುವುದಿಲ್ಲ. ನಾವು ಮಾತ್ರ ದೇವರನ್ನು ಮರೆಯುತ್ತೇವೆ. ಇದು ವಿಪರ್ಯಾಸ.

* ಒಂದು ಹನಿ ಹುಳಿ ಕೊಡಹಾಲನ್ನೇ ಕೆಡಿಸುವಂತೆ, ಸಣ್ಣದೊಂದು ಸುಳ್ಳು ಮಾನವನನ್ನೇ ನಾಶ ಮಾಡಬಲ್ಲದು.

* ದುರಾಲೋಚನೆಗಳು ರೋಗಲಕ್ಷಣಗಳು; ಅವುಗಳಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಬೇಕು.

* ಕುಡಿತದ ಚಟದಿಂದ ಬಿಡುಗಡೆ ಎಂದರೆ ಆತ್ಮಶುದ್ಧಿಯ ಒಂದು ಕ್ರಮ. ನೈತಿಕ ಉತ್ಥಾನ ಮತ್ತು ಆರ್ಥಿಕ ನಷ್ಟದಿಂದ ವಿಮೋಚನೆ. ಸ್ವಚ್ಛ ಮತ್ತು ಆರೋಗ್ಯಕರ ಜೀವನ ಮಾರ್ಗಕ್ಕೆ ಪುನರಾಗಮನ.

ಇಂತಹ ಸುಮಾರು ನೂರು ಹಿತನುಡಿಗಳಿವೆ. ಪುಸ್ತಕದ ಕೊನೆಗೆ ಆಂಗ್ಲ ಭಾಷೆಯಲ್ಲೂ ಗಾಂಧೀಜಿಯವರ ಮಾತುಗಳನ್ನು ನೀಡಲಾಗಿದೆ.