ಕೃಷಿ ಪ್ರಯೋಗ ಪರಿವಾರ ಸಂಸ್ಥೆಯವರು ಹೊರತರುತ್ತಿದ್ದ ನಮ್ಮೂರ ವೈವಿಧ್ಯ ಮಾಲಿಕೆಯ ಮೂರನೇ ಕಾಣಿಕೆಯಾಗಿದೆ ಕದಿರು. ಇವರು ಭತ್ತದ ನಾಟಿತಳಿಗಳ ದಾಖಲೆಯನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಈ ಪುಸ್ತಕದಲ್ಲಿರುವ ಐವತ್ತಕ್ಕೂ ಮಿಕ್ಕಿದ ನಾಟಿತಳಿಗಳ ಹೆಸರು ಮತ್ತು ಅವುಗಳ ವಿಶ್ಲೇಷಣೆಗಳನ್ನು ಗಮನಿಸುವಾಗ ಅಚ್ಚರಿಯೆನಿಸುತ್ತದೆ. ಈ ರೀತಿಯ ದಾಖಲಾತಿಯನ್ನು ಮಾಡುವುದು ಒಂದು ಅಪರೂಪದ ವಿದ್ಯಮಾನವೇ ಸರಿ. ಈ ನಿಟ್ಟಿನಲ್ಲಿ ಕೃಷಿ ಪ್ರಯೋಗ ಪರಿವಾರದ ಕೆಲಸ ಸ್ತುತ್ಯಾರ್ಹ.
ಸಿಹಿ ಕೆಂಪಕ್ಕಿಯ ಸಿದ್ಧಸಾಲೆ, ಪಾಯಸಕ್ಕೆ ಪರಿಮಳ ಕೊಡುವ ಪರಿಮಳ ಸಾಲೆ-ಜೀರಿಗೆ ಸಾಲೆ-ಗಂಧ ಸಾಲೆ, ತಾಯಿತಳಿ ಎನಿಸಿಕೊಂಡ ಕಳವೆ, ಬುತ್ತಿಊಟಕ್ಕೆ ಹೇಳಿಮಾಡಿಸಿದ ಸಣ್ಣವಾಳ್ಯ, ಚಕ್ಕುಲಿಗೆ ಸೂಕ್ತವೆನಿಸಿದ…