ಇತ್ತೀಚೆಗೆ ನಮ್ಮನ್ನು ಅಗಲಿದ ಸ್ವಾಮಿ ಸಿದ್ದೇಶ್ವರರು ತಮ್ಮ ಪ್ರಖರವಾದ ಪ್ರವಚನಗಳಿಗೆ ಬಹಳ ಖ್ಯಾತಿಯನ್ನು ಪಡೆದವರು. ಅವರ ಮಾತುಗಳನ್ನು ಆಲಿಸಲು ಬೆಳ್ಳಂಬೆಳಿಗ್ಗೆ ಜನರು ತಂಡೋಪತಂಡವಾಗಿ ಅವರ ಆಶ್ರಮಕ್ಕೆ ಬರುತ್ತಿದ್ದರು. ಅವರು ತಮ್ಮ ಪ್ರವಚನಗಳಲ್ಲಿ ಹೇಳಿದ ಹಲವಾರು ಕಥೆಗಳು, ವಿಷಯಗಳು ಮಕ್ಕಳಿಗೆ ದಾರಿದೀಪವಾಗುವಂಥವುಗಳು. ಅಂತಹ ೩೬ ಕಥೆಗಳನ್ನು ಲೇಖಕರಾದ ರೋಹಿತ್ ಚಕ್ರತೀರ್ಥ ಇವರು ಮಕ್ಕಳಿಗೆ ಅರ್ಥವಾಗುವ ಸರಳ ಭಾಷೆಯಲ್ಲಿ ನಿರೂಪಣೆ ಮಾಡಿ ‘ಮಕ್ಕಳಿಗಾಗಿ ಸ್ವಾಮಿ ಸಿದ್ಧೇಶ್ವರರ ಕಥೆಗಳು' ಎಂಬ ಹೆಸರಿನಲ್ಲಿ ಪುಸ್ತಕದ ರೂಪದಲ್ಲಿ ಹೊರತಂದಿದ್ದಾರೆ.
ಪುಸ್ತಕಕ್ಕೆ ಬೆನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಪತ್ರಕರ್ತ, ಲೇಖಕರಾದ ವಿಶ್ವೇಶ್ವರ ಭಟ್ ಇವರು. ಇವರು ತಮ್ಮ…