ಕೃಷಿ ಪತ್ರಕರ್ತರಾದ ರಾಧಾಕೃಷ್ಣ ಹೊಳ್ಳ ಇವರು ತಾವು ಬಾಳೆ ಬೆಳೆಯ ಬಗ್ಗೆ ಬರೆದ ಲೇಖನಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಇವರ ಈ ಪ್ರಯತ್ನಕ್ಕೆ ಸಹಕಾರ ನೀಡಿದ್ದಾರೆ ಕೃಷಿ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕರಾದ ಪಿ ವಿ ಹೇರಳೆ ಇವರು. ಬಾಳೆ ಬೆಳೆಯ ಬಗ್ಗೆ ಸಮಗ್ರವಾದ ವಿಷಯವನ್ನು ತಿಳಿಸಿಕೊಡುವ ಒಂದು ಕೈಪಿಡಿ ಈ ಪುಸ್ತಕ ಎಂದರೆ ತಪ್ಪಾಗಲಾರದು.
ಬಾಳೆ ಬೆಳೆಯ ಪರಿಚಯದಿಂದ ಪ್ರಾರಂಭಿಸಿ ಅದರ ತಳಿ ವೈವಿಧ್ಯಗಳು, ಬೇಸಾಯ ಕ್ರಮ, ನೆಡು ಸಾಮಾಗ್ರಿ, ಅಧಿಕ ಇಳುವರಿಗೆ ಗೊಬ್ಬರಗಳ ಬಳಕೆ, ಸುಧಾರಿತ ಬಾಳೆ ಬೇಸಾಯದ ಕ್ರಮ, ಬಾಳೆಯೊಂದಿಗೆ ಬೆಳೆಯಬಹುದಾದ ಮಿಶ್ರ ಬೆಳೆಗಳು, ಅಧಿಕ ಸಾಂದ್ರ ಬೇಸಾಯ, ಬಾಳೆ ಬೆಳೆಯ ಆರ್ಥಿಕತೆ, ನೀರಾವರಿ, ಬೆಳೆಯನ್ನು ಸಂರಕ್ಷಿಸುವ…