“ಪುಸ್ತಕದ ಉದ್ದಕ್ಕೂ ಸಾಕಷ್ಟು ಭೌಗೋಳಿಕ ವಿವರಗಳಿದ್ದು, ಬರೆಯುವ ಮುನ್ನ ಇವರು ಮಾಡಿರಬಹುದಾದ ತತ್ಸಂಬಂಧಿ ಅಧ್ಯಯನ ಸ್ಪಷ್ಟವಾಗಿ ಗೋಚರಿಸುತ್ತದೆ. ಓದುಗನಿಗೆಷ್ಟು ಗೊತ್ತಾದೀತು ಮಹಾ ಎಂಬ ಉದಾಸೀನ, ಉಡಾಫೆಯಿಂದ ಬರೆಯುವವರ ನಡುವೆ ಇವರು ಭಿನ್ನವಾಗಿ ನಿಲ್ಲುತ್ತಾರೆ. ಬಹಳ ಕಡಿಮೆ ಓದಿರುವ ನನ್ನ ಜ್ಞಾನದ ಪರಿಧಿಯನ್ನು ಈ ಪುಸ್ತಕ ವಿಸ್ತರಿಸಿದೆ” ಎನ್ನುವುದು ನನ್ನ ಅನಿಸಿಕೆ. ಲೇಖಕ ಮಂಜುನಾಥ್ ಕುಣಿಗಲ್ ಅವರ ಕುಣಿಗಲ್ ಟು ಕಂದಹಾರ್ ಕೃತಿಗೆ ಬರೆದಿರುವ ನಾನು ಬರೆದ ವಿಮರ್ಶೆ ನಿಮ್ಮ ಓದಿಗಾಗಿ...
“ಶಾಲೆ ಕಾಲೇಜು ಓದುತ್ತಿದ್ದ ಹೊತ್ತಿನಲ್ಲಿ ಓದಿದ ಇತಿಹಾಸದ ತುಂಬೆಲ್ಲ ದಿನಾಂಕ ಇಸವಿಗಳೇ ತುಂಬಿ ಓದುವ ಆಸಕ್ತಿ ಕುಂದಿಸಿತ್ತು. ಚರಿತ್ರೆಯೆಂದರೆ ಬರೀ ಅವಷ್ಟೇ ಅಲ್ಲ ಎಂದು…