ಕ್ಷಣ ಹೊತ್ತು ಆಣಿಮುತ್ತು (ಭಾಗ ೯)

ಕ್ಷಣ ಹೊತ್ತು ಆಣಿಮುತ್ತು (ಭಾಗ ೯)

ಪುಸ್ತಕದ ಲೇಖಕ/ಕವಿಯ ಹೆಸರು
ಎಸ್.ಷಡಕ್ಷರಿ
ಪ್ರಕಾಶಕರು
ರಮಣಶ್ರೀ ಪ್ರಕಾಶನ, ರಾಜಾ ರಾಮಮೋಹನ ರಾಯ್ ರಸ್ತೆ, ಬೆಂಗಳೂರು -೫೬೦೦೨೫
ಪುಸ್ತಕದ ಬೆಲೆ
ರೂ. ೧೧೦.೦೦, ಮುದ್ರಣ: ೨೦೨೧

ಖ್ಯಾತ ಉದ್ಯಮಿಯೂ, ಅಂಕಣಕಾರರೂ ಆಗಿರುವ ಎಸ್ ಷಡಾಕ್ಷರಿಯವರ ‘ಕ್ಷಣ ಹೊತ್ತು ಆಣಿಮುತ್ತು' ಕೃತಿಯ ೯ನೇ ಭಾಗ ‘ಕತ್ತೆಗಳು-ಕುದುರೆಗಳು' ಎಂಬ ಹೆಸರಿನಲ್ಲಿ ಬಿಡುಗಡೆಯಾಗಿದೆ. ಈ ಸರಣಿಯ ಹಿಂದಿನ ೮ ಪುಸ್ತಕಗಳು ಈಗಾಗಲೇ ಮಾರಾಟದಲ್ಲಿ ದಾಖಲೆಯನ್ನು ಬರೆದಿದೆ. ಖ್ಯಾತ ಲೇಖಕರಾದ ಎಸ್ ಎಲ್ ಭೈರಪ್ಪನವರು ಮೊದಲ ಭಾಗಕ್ಕೆ ಬರೆದ ಮುನ್ನುಡಿಯನ್ನೇ ಈ ಪುಸ್ತಕದಲ್ಲೂ ಬಳಸಿಕೊಂಡಿದ್ದಾರೆ. 

ಲೇಖಕರಾದ ಷಡಕ್ಷರಿಯವರು ತನ್ನ ‘ನನ್ನುಡಿ' ಯಲ್ಲಿ ಬರೆದದ್ದು ಹೀಗೆ “ ‘ಕ್ಷಣ ಹೊತ್ತು ಆಣಿಮುತ್ತು' ಎಂಬ ಹೆಸರಿನ ಅಂಕಣ ೨೦೦೭ರ ಮೇ ತಿಂಗಳ ೨೯ರಂದು ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಆರಂಭವಾಯಿತು. ಪ್ರತಿದಿನ ಪ್ರಕಟವಾಗುತ್ತಿದ್ದ ಈ ಅಂಕಣ ಜನರ ಮೆಚ್ಚುಗೆಯನ್ನು ಗಳಿಸಿತು. ಈ ಅಂಕಣ ಮಾಲಿಕೆಯ ಮೊದಲ ೭೫ ಲೇಖನಗಳನ್ನು ಒಟ್ಟುಗೂಡಿಸಿ ಪ್ರಕಟವಾದ ‘ಕ್ಷಣ ಹೊತ್ತು ಆಣಿಮುತ್ತು' ಭಾಗ ೧ ಪುಸ್ತಕವು ೨೦೦೭ ಡಿಸೆಂಬರ್ ೧೨ ರಂದು ಲೋಕಾರ್ಪಣೆಗೊಂಡಿತು. ಈ ಪುಸ್ತಕವು ಈಗಾಗಲೇ ೨೧ ಮುದ್ರಣಗಳನ್ನು ಕಂಡು, ಅದರ ಒಟ್ಟು ಮಾರಾಟ ಒಂದು ಲಕ್ಷದ ಇಪ್ಪತ್ತು ಸಾವಿರದ ಪ್ರತಿಗಳನ್ನು ಮುಟ್ಟಿದೆ.”

ಪುಸ್ತಕಕ್ಕೆ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು, ಖ್ಯಾತ ಕವಿಗಳಾದ ಡಾ.ಸಿದ್ಧಲಿಂಗಯ್ಯ ಮೊದಲಾದವರು ನಲ್ಮೆಯ ನುಡಿಗಳನ್ನು ಬರೆದಿದ್ದಾರೆ. ಪುಸ್ತಕದಲ್ಲಿ ೭೫ ಪುಟ್ಟ ಪುಟ್ಟ ಲೇಖನಗಳಿವೆ. ಸರಾಗವಾಗಿ ಓದಿಸಿಕೊಮ್ಡು ಹೋಗುತ್ತದೆ. ಲೇಖನದ ಕೊನೆಯಲ್ಲಿ ಒಂದು ಉತ್ತಮ ಸಂದೇಶವನ್ನೂ ಕೊಡುತ್ತದೆ. ೧೫೦ ಪುಟಗಳ ಈ ಪುಸ್ತಕವನ್ನು ಲೇಖಕರು ತಮ್ಮ ಹೆಳೆಯರಾದ ಡಾ. ಸಿ ಸೋಮಶೇಖರ್ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಸರ್ವಮಂಗಳ ಅವರಿಗೆ ಗೌರವ ಪೂರ್ವಕವಾಗಿ ಸಮರ್ಪಣೆ ಮಾಡಿದ್ದಾರೆ.