ದೇಶ ಹಾಳಾದರೇನು......ಅಫ್ಜಲ್ ಗುರು, ಕಸಬ್ ಗಳು ಬದುಕಬೇಕು......ಅವರ ಎಂಜಲು ಓಟಿನಿಂದಲೇ ಅಲ್ಲವೇ ನಮ್ಮ ರಾಜಕಾರಣಿಗಳು ಅಧಿಕಾರಕ್ಕೆ ಬಂದಿರೋದು!

Submitted by ssnkumar on Thu, 05/20/2010 - 15:45

Comments

ಬರಹ

ಅಫ್ಜಲ್ ಗುರು ವಿಷಯ ಮತ್ತೆ ಸುದ್ದಿ ಮಾಡತೊಡಗಿದೆ.

ಅವನನ್ನು ಗಲ್ಲಿಗೆರಿಸಬೇಕೋ-ಬೇಡವೋ ಎಂಬುದು ಚರ್ಚೆಯಾಗುತ್ತಿದೆ.

ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಗಳಂತೂ ಆತನು ಅಪರಾಧಿಯೇ ಅಲ್ಲ ಎನ್ನುವ ರೀತಿ ಮಾತನಾಡುತ್ತಿದ್ದಾರೆ!

ನಮ್ಮ ಕೆಲವು ರಾಷ್ಟ್ರಮಟ್ಟದ ಸುದ್ದಿವಾಹಿನಿಗಳು ರಾಜಕೀಯ ಪ್ರಮುಖರನ್ನು ಒಟ್ಟು ಸೇರಿಸಿ ಚರ್ಚೆಗಳನ್ನೇ ಪ್ರಾರಂಭಿಸಿಬಿಟ್ಟಿವೆ.

ಪ್ರಾಯಶಃ ನಮ್ಮ ದೇಶವನ್ನು ಗಮನಿಸುತ್ತಿರುವ ವಿದೇಶೀಯರು ಇದನ್ನೆಲ್ಲಾ ನೋಡಿ ನಮ್ಮ ಕುರಿತು ಹಾಸ್ಯ ಮಾಡುತ್ತಿರಬಹುದು.

ಪ್ರಪಂಚದ ಬೇರೆ ಯಾವುದಾದರು ದೇಶದಲ್ಲಾದರು ಇದು ಸಾಧ್ಯವೇ?

ಅಫ್ಜಲ್ ಗುರು ನಮ್ಮ ಲೋಕಸಭೆಯ ಮೇಲೆ ಧಾಳಿ ನಡೆಸಿದ - ನಮ್ಮ ದೇಶದ ಮೇಲೆ ನಡೆಸಿದ ಆಕ್ರಮಣವೆಂದೆ ಅದನ್ನು ತಿಳಿಯಬೇಕು.

ಹಾಗಾದ ಮೇಲೆ ಅವನು ಕೇವಲ ಅಪರಾಧಿಯಲ್ಲ - ಅವನೊಬ್ಬ ಶತೃ.

ಅಂತಹವನಿಗೆ ರಾಷ್ಟ್ರಪತಿಗಳ ಕ್ಷಮಾದಾನಕ್ಕೆ ಅರ್ಜಿ ಹಾಕಲು ಅರ್ಹತೆಯಾದರು ಎಲ್ಲಿದೆ?

ಒಂದು ದಶಕ ಕಳೆಯುತ್ತಾ ಬಂದರು ಅವನನ್ನು ಏನೂ ಮಾಡಲಾಗಿಲ್ಲ - ಈಗಲೂ ಅವನನ್ನು ಮುಟ್ಟಿದರೆ ಕಾಶ್ಮೀರ ಹತ್ತಿ ಉರಿಯತ್ತೆ ಎಂದು ಅಲ್ಲಿನ ಮುಖ್ಯಮಂತ್ರಿಗಳು ಹೆದರಿಸುತ್ತಿದ್ದಾರೆ!

ಆ ಮಾತಿನ ಅರ್ಥವೇನು? ಅಂದರೆ ಕಾಶ್ಮೀರದ ಮುಸಲ್ಮಾನರೆಲ್ಲ ಅಫ್ಜಲ್ ಗುರುವಿನ ಬೆಂಬಲಿಗರು, ಅಂದರೆ ನಮ್ಮ ಶತೃವಿನ ಜೊತೆ ಕೈ ಸೇರಿಸಿರುವವರು!

ಅವರು ಈ ಅರ್ಥ ಬರುವ ಮಾತುಗಳನ್ನು ಸಾರ್ವಜನಿಕವಾಗಿ ಹೇಳಿದರು, ಭಾಜಪದ ಮುಖ್ತಾಸ್ ಅಬ್ಬಾಸ್ ನಖ್ವಿ ಬಿಟ್ಟರೆ ಬೇರಾವ ಹೆಸರಾಂತ ಮುಸಲ್ಮಾನ ನಾಯಕರು ಇದನ್ನು ವಿರೋಧಿಸಲಿಲ್ಲ!

"ಮೌನಂ ಸಮ್ಮತಿ ಲಕ್ಷಣಂ" ಎಂದು ತಿಳಿಯೋಣವೆ?

 

ಇನ್ನು ದೇಶಭಕ್ತ ಜನರಾದರೂ ಏನು ಮಾಡುತ್ತಿದ್ದಾರೆ? ಏಕೆ ಯಾರು ಸತ್ಯಾಗ್ರಹಕ್ಕೆ ಕೂಡುತ್ತಿಲ್ಲ?

ನಮ್ಮ ಜನರಿಗೆ ಈ ರೀತಿ ಘಟನೆಗಳಿಂದ ದುಃಖವೇ ಆಗುವುದಿಲ್ಲವೇ? ನಾವೆಲ್ಲಾ ಇಷ್ಟೊಂದು ನಿರ್ವಿರ್ಯರೇ?

ಜಾತಿಗಾಗಿ, ಭಾಷೆಗಾಗಿ, ಗಡಿಗಾಗಿ, ನೀರಿಗಾಗಿ, ಮತಕ್ಕಾಗಿ, ಹಣಕ್ಕಾಗಿ, ಭೂಮಿಗಾಗಿ - ಹೀಗೆ ಏನೇನೋ ಸಣ್ಣಪುಟ್ಟ ವಿಷಯಕ್ಕೆಲ್ಲಾ ಭುಮ್ಯಾಕಾಶಗಳನ್ನು ಒಂದು ಮಾಡುವ ಜನ, ಈ ವಿಷಯದಲ್ಲಿ ಇಷ್ಟೊಂದು ಸಹನೆಯಿಂದಿರುವರಲ್ಲಾ.....

ಇದು ಸಹನೆಯೋ, ಶಂಡತನವೋ, ನಿರ್ವಿರ್ಯತೆಯೋ, ನಿರಭಿಮಾನವೋ, ಅಂಧತನವೋ, ಏನೊಂದು ತಿಳಿಯುತ್ತಿಲ್ಲಾ......

ದೇಶಕ್ಕಾಗಿ ಹೋರಾಡಿ ಸತ್ತು ಸ್ವರ್ಗ ಸೇರಿರುವ ಸುಭಾಶ್ ಚಂದ್ರ ಬೋಸ್, ಅರವಿಂದ ಘೋಷ್, ತಿಲಕ್, ಗೋಖಲೆ, ಚಾಪೇಕರ್, ಸಾವರ್ಕರ್, ಖುದೀರಾಂ, ಅಜಾದ್, ಭಗತ್ ಸಿಂಗ್, ಸುಖದೇವ್, ರಾಜಗುರು, ಅಷ್ವಾಖ್ ಉಲ್ಲಾ ಖಾನ್, ಚಿದಂಬರಂ ಪಿಳ್ಳೈ, ಧಿಂಗ್ರಾ, ಲಾಲ ಲಜಪತ ರಾಯ್, ಬಿಪಿನ್ ಚಂದ್ರ ಪಾಲ್, ರವೀಂದ್ರ ನಾಥ ಟಾಗೂರ್, ಭಗಿನಿ ನಿವೇದಿತಾ, ಫಡ್ಕೆ, ಶಿವಾಜಿ, ಭಾಜಿಪ್ರಭು, ಗುರು ಗೋವಿಂದ ಸಿಂಗ್,  ಛತ್ರಸಾಲ್, ನರಗುಂದದ ಬಾಬಾಸಾಹೇಬ, ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ........ಈ ರೀತಿ ಅಸಂಖ್ಯಾತ ವೀರರು ತಮ್ಮ ತ್ಯಾಗಕ್ಕಾಗಿ ಪರಿತಪಿಸುತ್ತಿರಬಹುದು!

 

ಎಲ್ಲಿಗೆ ಬಂದು ಮುಟ್ಟಿತು ನಮ್ಮ ದೇಶ? ಎಂದಿಗೆ ಇದು ಸರಿ ಹೋಗುವುದು?

ಇದಕ್ಕಾಗಿಯೇ ನಮಗೆ ಸ್ವಾತಂತ್ರ್ಯ ಬೇಕಿತ್ತೇ? ಕೇವಲ ಆರ್ಥಿಕವಾಗಿ ಸಬಲರಾದರೆ ಸಾಕೇನು, ಸ್ವಾಭಿಮಾನವೇ ಬೇಡವೇ?

ವಿವೇಕಾನಂದರು ಕಂಡಿದ್ದ "ದೀನ, ಹೀನ, ದರಿದ್ರ, ಕೃಪಣ, ರೋಗಿಷ್ಠ, ಗುಲಾಮೀ ಭಾರತ" ಅವರು ಹೋದ ಒಂದು ನೂರು ವರ್ಷದ ನಂತರವೂ ಹಾಗೆ ಇದೆ ಎನಿಸುತ್ತಿದೆ!

ಮನಸ್ಸು ವಿಲವಿಲ ಒದ್ದಾಡುತ್ತದೆ......ಇದನ್ನು ಸರಿ ಪಡಿಸುವವರಾರು......ಸರಕಾರಗಳು ತಮ್ಮ ಮತಬ್ಯಾಂಕುಗಳ ಲೆಕ್ಕಾಚಾರದಲ್ಲೇ ಇರುತ್ತವೆ.....ಮತ್ತೊಬ್ಬ ಸುಭಾಶ್, ಮತ್ತೊಬ್ಬ ಫಡ್ಕೆ, ಮತ್ತೊಬ್ಬ ಸಾವರ್ಕರ್, ಮತ್ತೊಬ್ಬ ಶಿವಾಜಿ, ಹುಟ್ಟಿ ಬರದೆ ಇದು ಸರಿಹೋಗದು ಎನಿಸುತ್ತಿದೆ.......ದೊಡ್ಡ ಕ್ರಾಂತಿಯೇ ಆಗಬೇಕು......ಹೌದು ಬಹು ದೊಡ್ಡ ಕ್ರಾಂತಿ ಆಗುವುದೊಂದೇ ಉಳಿದಿರುವ ಏಕೈಕ ದಾರಿ.....!!!!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet